/newsfirstlive-kannada/media/post_attachments/wp-content/uploads/2025/04/Sara-Ali-khan-in-hubbali-3.jpg)
ಹುಬ್ಬಳ್ಳಿ: ಭಕ್ತಿಗೆ ಧರ್ಮದ ಭೇದ ಇಲ್ಲ.. ಯಾರು, ಯಾವ ದೇವರನ್ನೂ ಬೇಕಾದ್ರೂ ಪೂಜಿಸಬಹುದು, ಆರಾಧಿಸಬಹುದು. ಬಾಲಿವುಡ್ ಬೆಡಗಿ, ಸಾರಾ ಅಲಿ ಖಾನ್ ಸದ್ಯ​ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದಾರೆ.. ಇತ್ತೀಚೆಗೆ ಅಸ್ಸಾಂನ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿದ್ದ ಸಾರಾ ಸದ್ಯ ಹುಬ್ಬಳ್ಳಿಯಲ್ಲಿರುವ ಐತಿಹಾಸಿಕ ಚಂದ್ರಮೌಳೇಶ್ವರ ದೇಗುಲಕ್ಕೆ ಭೇಟಿ ನೀಡಿ ಶಿವಧ್ಯಾನದ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.
ಸಾರಾ ಅಲಿ ಖಾನ್ ರಾಜವಂಶ ಪಟೌಡಿ ಮನೆತನದ ಕುಡಿ. ಬಾಲಿವುಡ್ ನಟ ಸೈಫ್ ಅಲಿ ಖಾನ್-ಅಮೃತಾ ಸಿಂಗ್ ಪುತ್ರಿ. ಬಾಲಿವುಡ್ ಬೆಡಗಿ ಅದ್ಭುತ ನಟನೆಯ ಮೂಲಕ ಅಪಾರ ಅಭಿಮಾನಿಗಳ ಮನಸೂರೆಗೊಳಿಸುರವ ನಟಿಯ ಆಧ್ಯಾತ್ಮಿಕ ಹೆಜ್ಜೆ ಬೆರಗುಗೊಳಿಸಿದೆ.
/newsfirstlive-kannada/media/post_attachments/wp-content/uploads/2025/04/Sara-Ali-khan-in-hubbali-4.jpg)
ಹಣೆಯಲ್ಲಿ ಕುಂಕುಮ.. ಮನದಲ್ಲಿ ಜಪ.. ನಮಃ ಶಿವಾಯ!
ಚಂದ್ರಮೌಳೇಶ್ವರ ಸನ್ನಿಧಿಯಲ್ಲಿ ಸಾರಾ ಅಲಿ ಖಾನ್ ಧ್ಯಾನ
ಬಾಲಿವುಡ್ ನಟಿ ಸಾರಾ ಅಲಿ ಖಾನ್​ ಕರುನಾಡಿನಲ್ಲಿ ಆಧ್ಯಾತ್ಮಿಕ ಪ್ರವಾಸ ಕೈಗೊಂಡು ಗಮನ ಸೆಳೆದಿದ್ದಾರೆ. ಹುಬ್ಬಳ್ಳಿಯ ಉಣಕಲ್ ಬಳಿ ಇರೋ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಅಚ್ಚರಿಯ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ. ಶಿವಲಿಂಗದ ಎದುರು ಆಧ್ಯಾತ್ಮಿಕ ಭಂಗಿಯಲ್ಲಿ ಕುಳಿತು ಶಿವಧ್ಯಾನ ಮಾಡಿದ್ದಾರೆ. ಸುಮಾರು 900 ವರ್ಷಗಳ ಇತಿಹಾಸ ಇರೋ ಪುರಾತನ ದೇವಸ್ಥಾನ ಇದಾಗಿದ್ದು, ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿರುವ ದೇಗುಲದಲ್ಲಿ ಸಾರಾ ಧ್ಯಾನ ಮಾಡುತ್ತಿರೋ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರಾ ಅಲಿ ಖಾನ್ ದೇವಸ್ಥಾನದಲ್ಲಿ ಒಂದೂವರೆ ಗಂಟೆ ಕಾಲ ಕಳೆದಿದ್ದಾರೆ.
/newsfirstlive-kannada/media/post_attachments/wp-content/uploads/2025/04/sara-Ali-khan-in-hubbali-1.jpg)
ಸರಳವಾಗಿ ಸೆಲ್ವಾರ್ ಕಮೀಜ್ ತೊಟ್ಟು ದೇವಾಲಯಕ್ಕೆ ಬಂದಿದ್ದ ಸಾರಾ ಅಲಿ ಖಾನ್, ಹಣೆ ತುಂಬಾ ಕುಂಕುಮ ಹಚ್ಚಿ, ಬಹಳ ಸಾಂಪ್ರದಾಯಿಕ ನೋಟ ಬೀರಿದ್ದಾರೆ. ದೇವಾಲಯದ ಆವರಣದಲ್ಲಿ ಕೆಲ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ. ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶಾಸಕ ಮಹೇಶ್ ಟೆಂಗಿನಕಾಯಿ ಸಹ ತಮ್ಮ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು ಸಾರಾ ಅಲಿಖಾನ್ ಭೇಟಿ ಹಿಂದು ಧರ್ಮದ ಸಮನ್ವಯತೆಗೆ ಸಾಕ್ಷಿ ಅಂತ ಬಣ್ಣಿಸಿದ್ದಾರೆ. ಸಿನಿ ತಾರೆಯರು ಭೇಟಿ ನೀಡಿದಾಗ ನಮ್ಮ ದೇಶದ ಸಂಸ್ಕೃತಿ ಹಾಗೂ ಪರಂಪರೆ ಎಲ್ಲೆಡೆ ಪಸರಿಸುವುದಲ್ಲದೇ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/04/sara-Ali-khan-in-hubbali-2.jpg)
ಅಸ್ಸಾಂನ ಕಾಮಾಕ್ಯ ದೇಗುಲಕ್ಕೂ ಭೇಟಿ ನೀಡಿದ್ದ ಸಾರಾ!
ಕಳೆದ ವಾರ ಅಸ್ಸಾಂ ಗುವಾಹಟಿಯಲ್ಲಿರುವ ಪ್ರಸಿದ್ಧ ಶಕ್ತಿದೇವತೆಯ ಸನ್ನಿಧಿ ಕಾಮಾಕ್ಯ ದೇವಿಯ ದರ್ಶನ ಮಾಡಿದ್ದರು. ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಪವಿತ್ರ ಸ್ಥಳದಲ್ಲಿನ ತಮ್ಮ ಶಾಂತಿಯುತ ಕ್ಷಣಗಳ ಒಂದು ನೋಟ ಬೀರಿದ್ದಾರೆ. ಬಿಳಿ ಬಣ್ಣದ ಸಲ್ವಾರ್ ಕುರ್ತಾ ಧರಿಸಿ ಬಹಳ ಸೊಗಸಾಗಿ ಕಾಣಿಸಿಕೊಂಡಿದ್ದರು. ಸರಣಿ ಫೋಟೋಗಳನ್ನು ಪೋಸ್ಟ್ ಮಾಡಿ, ಸುಂದರ ಕ್ಯಾಪ್ಷನ್​ ಸಹ ಕೊಟ್ಟಿದ್ದರು. ಫೋಟೋಗಳು ಆನ್​ಲೈನ್​ನಲ್ಲಿ ವೈರಲ್​ ಆಗುತ್ತಿದ್ದು ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಇದನ್ನೂ ಓದಿ: ಅತ್ತೆಗೆ ಹಿಗ್ಗಾಮುಗ್ಗ ಥಳಿಸಿದ ರಾಕ್ಷಸಿ ಸೊಸೆ.. ವಿಡಿಯೋ ವೈರಲ್! ಆಮೇಲೆ ಏನಾಯ್ತು?
/newsfirstlive-kannada/media/post_attachments/wp-content/uploads/2025/04/Sara-Ali-khan-in-hubbali.jpg)
ಚಂದ್ರಮೌಳೇಶ್ವರ ದೇಗುಲದ ಇತಿಹಾಸ!
900 ವರ್ಷಗಳ ಇತಿಹಾಸ ಹೊಂದಿರುವ ಚಂದ್ರಮೌಳೇಶ್ವರ ದೇಗುಲ
11ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ದೇಗುಲ ನಿರ್ಮಾಣ
ಖ್ಯಾತ ಶಿಲ್ಪಿ ಜಕಣಾಚಾರ್ಯ ಕೆತ್ತನೆಯ ಚಂದ್ರಮೌಳೇಶ್ವರ ದೇಗುಲ
ಉಣಕಲ್ ಸರೋವರದ ಸಮೀಪದಲ್ಲೇ ಸ್ಥಾಪಿತವಾಗಿರುವ ಮಂದಿರ
ಎರಡು ದೊಡ್ಡ ಶಿವಲಿಂಗಗಳ ಜೊತೆಗೆ ನಾಲ್ಕು ಬಾಗಿಲುಗಳನ್ನು ಹೊಂದಿದೆ
ಕಪ್ಪು ಗ್ರಾನೈಟ್ ಕಲ್ಲುಗಳಿಂದ ಕೆತ್ತಿದ ಗೋಡೆಗಳು, ಕಂಬಗಳನ್ನ ಹೊಂದಿದೆ
ದೇವಾಲಯದಲ್ಲಿ ನೃತ್ಯ ಮಾಡುವ ಗಣೇಶ, ಜಲಂಧರ ಚಿತ್ರಗಳು ಮೂಡಿವೆ
ಕೆಲ ದಿನಗಳ ಹಿಂದೆ ತಂದೆ ಸೈಫ್​ ಅಲಿ ಖಾನ್​ಗೆ ಚಾಕು ಇರಿತ ಆಗಿತ್ತು
ಅಂದು ಹೊತ್ತಿದ್ದ ಹರಕೆ ತೀರಿಸಲು ದೇಗುಲಕ್ಕೆ ಬಂದಿದ್ದ ಸಾರಾ ಭೇಟಿ?
ದೇಗುಲದ ಮಹಿಮೆ ಬಗ್ಗೆ ಸಾರಾ ಅಲಿ ಖಾನ್​​ಗೆ ಪರಿಚಯಸ್ಥರ ಮಾಹಿತಿ
ಮಾಹಿತಿ ಅರಿತ ಸಾರಾ, ದೇಗುಲಕ್ಕೆ ಭೇಟಿ ನೀಡುವುದಾಗಿ ಹರಕೆ ಹೊತ್ತಿದ್ರಂತೆ
ಸಾಮಾನ್ಯವಾಗಿ ಹಿಂದಿನಿಂದಲೂ ಬಾಲಿವುಡ್ ನಟ-ನಟಿಯರು ನಿರ್ಮಾಪಕರು ಕರ್ನಾಟಕದ ಕರಾವಳಿ ಭಾಗದ ದೇಗುಲಗಳಿಗೆ ಭೇಟಿ ನೀಡೋದು ವಿಶೇಷ, ಆದ್ರೆ ಸಾರಾ ಅಲಿ ಖಾನ್ ಹುಬ್ಬಳ್ಳಿಯ ಐತಿಹಾಸಿಕ ದೇಗುಲಕ್ಕೆ ಭೇಟಿ ನೀಡಿರುವ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us