newsfirstkannada.com

BREAKING: ನಟಿ ಶಿಲ್ಪಾಶೆಟ್ಟಿ, ರಾಜ್‌ ಕುಂದ್ರಾ ದಂಪತಿಗೆ ಬಿಗ್‌ ಶಾಕ್‌; ₹98 ಕೋಟಿ ಆಸ್ತಿ, ಫ್ಲಾಟ್ ವಶ

Share :

Published April 18, 2024 at 1:07pm

  97.79 ಕೋಟಿ ರೂ. ಆಸ್ತಿಯನ್ನು ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ

  ಮುಂಬೈನ ಜುಹುನಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಅವರ ಫ್ಲಾಟ್‌ ಕೂಡ ವಶಕ್ಕೆ

  ಬಿಟ್‌ಕಾಯಿನ್‌ ಮೂಲಕ ಕೋಟ್ಯಾಂತರ ರೂಪಾಯಿ ವರ್ಗಾವಣೆ, ಮೋಸ

ಮುಂಬೈ: ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಹಾಗೂ ಉದ್ಯಮಿ ರಾಜ್‌ ಕುಂದ್ರಾ ದಂಪತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜಾರಿ ನಿರ್ದೇಶನಾಲಯ ಬರೋಬ್ಬರಿ 98 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಾಗೂ ಶಿಲ್ಪಾ ಶೆಟ್ಟಿ ಅವರು ಫ್ಲಾಟ್‌ ಅನ್ನು ವಶಕ್ಕೆ ಪಡೆದಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ ತನಿಖೆ ನಡೆಸುತ್ತಿರುವ ED ಇಂದು ರಾಜ್‌ ಕುಂದ್ರಾ ಅವರಿಗೆ ಸಂಬಂಧ ಪಟ್ಟ 97.79 ಕೋಟಿ ರೂಪಾಯಿ ಆಸ್ತಿಯನ್ನು ವಶಕ್ಕೆ ಪಡೆದಿದೆ. ಇದರ ಜೊತೆಗೆ ಮುಂಬೈನ ಜುಹುನಲ್ಲಿರುವ ಫ್ಲಾಟ್‌ ಅನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಜುಹುನಲ್ಲಿರುವ ಫ್ಲಾಟ್ ನಟಿ ಶಿಲ್ಪಾ ಶೆಟ್ಟಿ ಅವರ ಹೆಸರಿನಲ್ಲಿತ್ತು.

ಉದ್ಯಮಿ ಹಾಗೂ ಬಾಲಿವುಡ್‌ ನಟ ರಾಜ್‌ ಕುಂದ್ರಾ ಅವರನ್ನು ಬಿಟ್‌ಕಾಯಿನ್ ಸೇರಿದಂತೆ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ನಡೆಸಲಾಗಿತ್ತು. ರಾಜ್‌ ಕುಂದ್ರಾ ಅವರಿಗೆ ಸಂಬಂಧಪಟ್ಟ ಸ್ಥಿರ ಮತ್ತು ಚರ ಆಸ್ತಿಯ ಜೊತೆಗೆ ಪುಣೆಯಲ್ಲಿರುವ ಬಂಗ್ಲೆ ಮತ್ತು ಷೇರುಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಗಂಡ ಹಿಂಗ್ಯಾಕಾದ್ರು.. ಜೈಲಿನಿಂದ ರಿಲೀಸ್​​​ ಆದ್ಮೇಲೆ ಮುಖ ಮುಚ್ಕೊಂಡೇ ತಿರುಗೋದ್ಯಾಕೆ..?

2017ರಲ್ಲೇ ಇ.ಡಿ ಅಧಿಕಾರಿಗಳು ಬಿಟ್‌ ಕಾಯಿನ್‌ ಅಲ್ಲಿ 6,600 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ಬಿಟ್‌ಕಾಯಿನ್‌ ಮೂಲಕ ಹಲವರಿಗೆ ಶೇಕಡಾ 10 ರಷ್ಟು ಹಣ ರಿಟರ್ನ್‌ ಮಾಡುವ ಭರವಸೆ ನೀಡಿ ಮೋಸ ಮಾಡಿದ ಆರೋಪ ಕೇಳಿ ಬಂದಿತ್ತು. ಇದೇ ಹಗರಣದಲ್ಲಿ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ ಇದೀಗ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ನಟಿ ಶಿಲ್ಪಾಶೆಟ್ಟಿ, ರಾಜ್‌ ಕುಂದ್ರಾ ದಂಪತಿಗೆ ಬಿಗ್‌ ಶಾಕ್‌; ₹98 ಕೋಟಿ ಆಸ್ತಿ, ಫ್ಲಾಟ್ ವಶ

https://newsfirstlive.com/wp-content/uploads/2023/10/SHILPA.jpg

Load More