Maha Kumbh ಮುಕ್ತಾಯಕ್ಕೆ ಒಂದೇ ದಿನ ಬಾಕಿ, ಸೆಲೆಬ್ರಿಟಿಗಳ ಪುಣ್ಯಸ್ನಾನ.. ಶಿವರಾತ್ರಿಗೆ 2 ಕೋಟಿ ಜನ ಬರುವ ನಿರೀಕ್ಷೆ

author-image
Bheemappa
Updated On
Maha Kumbh ಮುಕ್ತಾಯಕ್ಕೆ ಒಂದೇ ದಿನ ಬಾಕಿ, ಸೆಲೆಬ್ರಿಟಿಗಳ ಪುಣ್ಯಸ್ನಾನ.. ಶಿವರಾತ್ರಿಗೆ 2 ಕೋಟಿ ಜನ ಬರುವ ನಿರೀಕ್ಷೆ
Advertisment
  • ಇಲ್ಲಿವರೆಗೆ ಕುಂಭಕ್ಕೆ ಎಷ್ಟು ಕೋಟಿ ಭಕ್ತರು ಭೇಟಿ ನೀಡಿದ್ದಾರೆ?
  • ಕುಂಭಕ್ಕೆ ಬಂದಿದ್ದ ಬಾಲಿವುಡ್​ ಸ್ಟಾರ್ ಅಕ್ಷಯ್ ಕುಮಾರ್​..!
  • ದೇಶದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುವ ನಿರೀಕ್ಷೆ

144 ವರ್ಷಗಳಿಗೊಮ್ಮೆ ಬರುವ ಈ ಮಹಾಕುಂಭ ಮುಗಿಯಲು ಇನ್ನೊಂದೇ ದಿನ ಬಾಕಿ ಇದೆ. ಈಗಾಗಲೇ ಜಗತ್ತಿನ ಮೂಲೆ ಮೂಲೆಯಿಂದ ಕೋಟಿ ಕೋಟಿ ಭಕ್ತರು ಮಹಾಕುಂಭಮೇಳದಲ್ಲಿ ಭಾಗಿಯಾಗಿ ಜೀವನ ಪಾವನ ಎನಿಸಿಕೊಂಡಿದ್ದಾರೆ. ಈ ಹೊತ್ತಲ್ಲೇ ಬಾಲಿವುಡ್​ ನಟ, ನಟಿಯರು ಕೂಡ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು, ಪುಣ್ಯಸ್ನಾನ ಮಾಡಿದ್ದಾರೆ.

ಒಂದೇ ದಿನ, ಇನ್ನೊಂದೇ ದಿನ ಬಾಕಿ. 144 ವರ್ಷಗಳಿಗೊಮ್ಮೆ ಜಗತ್ತಿನಲ್ಲಿ ನಡೆಯೋ ಅದ್ಭುತ. ನೂರಾರು ಕೋಟಿ ಭಕ್ತರ ಸಂಗಮ. ತ್ರೀವೇಣಿ ಸಂಗಮದ ಗಂಗೆಯಲ್ಲಿ ಪುಣ್ಯಸ್ನಾನ. ಲಕ್ಷ ಲಕ್ಷ ನಾಗಸಾಧುಗಳ ಶಕ್ತಿ ದರ್ಶನ. ಈ ಶತಮಾನದಲ್ಲಿ ನಡೆದ ಈ ಎಲ್ಲಾ ವೈಭವಕ್ಕೆ ವಿರಾಮ ಬಿಳೋ ಕಾಲ ಬಂದಿದೆ.

publive-image

ಶಿವರಾತ್ರಿ ಹಬ್ಬಕ್ಕೆ ಈ ಮಹಾಕುಂಭಮೇಳ ಸಂಪನ್ನ

ಕಳೆದ 22ದಿನಗಳಿಂದ ಪ್ರಯಾಗ್​ರಾಜ್​ನಲ್ಲಿ ಈ ಎಲ್ಲಾ ವೈಭವ ಇದೀಗ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಇನ್ನೊಂದೇ ದಿನ ಅಂದ್ರೆ, ನಾಳೆ ಶಿವರಾತ್ರಿ ಹಬ್ಬಕ್ಕೆ ಈ ಮಹಾಕುಂಭಮೇಳ ಸಂಪನ್ನಗೊಳ್ಳಲಿದೆ. ಇನ್ನು ನಾಳೆ ಶಿವರಾತ್ರಿ ಇರೋದ್ರಿಂದ 2 ಕೋಟಿಗೂ ಹೆಚ್ಚು ಭಕ್ತಾದಿಗಳು ದೇಶದ ಮೂಲೆ ಮೂಲೆಯಿಂದ ಆಗಮಿಸುವ ನಿರೀಕ್ಷೆ ಇದೆ.

ಇನ್ನು, ಈಗಾಗಲೇ ಈ ಮಹಾಕುಂಭಮೇಳದಲ್ಲಿ ಜಗತ್ತಿನ ಮೂಲೆ ಮೂಲೆಯಿಂದ ಬಂದ 63 ಕೋಟಿಗೂ ಅಧಿಕ ಜನ ಭಾಗಿಯಾಗಿದ್ದಾರೆ ಅನ್ನೋ ಮಾಹಿತಿ ಇದೆ.. ಈ ಹೊತ್ತಲ್ಲೇ ಬಾಲಿವುಡ್​ ನಟ ನಟಿಯರು ಕೂಡ ಮಹಾಕುಂಭಮೇಳದಲ್ಲಿ ಭಾಗಿಯಾಗಿ ತ್ರೀವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ..

ಅತ್ತೆ ಜೊತೆ ಬಂದು ಪುಣ್ಯಸ್ನಾನ ಮಾಡಿದ ಕತ್ರೀನಾ ಕೈಫ್!

ಬಾಲಿವುಡ್ ನಟ ವಿಕ್ಕಿ ಕೌಶಲ್‌, ಪತ್ನಿ, ಬಾಲಿವುಡ್ ನಟಿ ಕತ್ರೀನಾ ಕೈಫ್ ಪ್ರಯಾಗ್​ರಾಜ್​ನಲ್ಲಿ ಕಾಣಿಸಿಕೊಂಡರು. ತಮ್ಮ ಅತ್ತೆ ವೀಣಾ ಕೌಶಲ್ ಜೊತೆ ಆಗಮಿಸಿ ಪುಣ್ಯಸ್ನಾನ ಮಾಡಿದ್ರು. ಬಳಿಕ ಪರಮಾರ್ಥ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮೀಜಿಯ ದರ್ಶನ ಪಡೆದ್ಕೊಂಡರು. 

ಇದನ್ನೂ ಓದಿ:ಬೈಕ್​ ಸಿಕ್ತು ಅಂತ ಸ್ಟಂಟ್​ ಮಾಡಿದ್ರೆ ಜೈಲೂಟ ಫಿಕ್ಸ್​; ಇನ್ಮುಂದೆ ಪೊಲೀಸರಿಂದ ಹೊಸ ಅಸ್ತ್ರ ಜಾರಿ.. ಏನದು?

publive-image

ಅತ್ತ, ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಕೂಡ ಕುಂಭಮೇಳದಲ್ಲಿ ಭಾಗಿಯಾಗಿ ಗಂಗೆಯಲ್ಲಿ ಪುಣ್ಯಸ್ನಾನ ಮಾಡಿದರು. ಬಳಿಕ ಮಾತನಾಡಿದ ಅಕ್ಷಯ್ ಕುಮಾರ್, ಮಹಾ ಕುಂಭಮೇಳದಲ್ಲಿ ಒಳ್ಳೆಯ ವ್ಯವಸ್ಥೆ ಮಾಡಲಾಗಿದೆ. ಅದ್ಭುತ ವ್ಯವಸ್ಥೆ ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಎಂದರು.

ಒಂದ್ಕಡೆ, ಮಹಾಕುಂಭಮೇಳವನ್ನ ಮತ್ತಷ್ಟು ದಿನಗಳು ವಿಸ್ತರಣೆ ಮಾಡಬೇಕು ಅನ್ನೋ ಕೂಗು ಕೇಳಿ ಬಂದಿದೆ. ಏನೇ ಹೇಳಿ, ಶತ ಶತಮಾನ ಅದ್ಭುತ 144 ವರ್ಷಗಳಿಗೊಮ್ಮೆ ನಡೆಯೋ ವೈಭವ. ನಾಳೆ ಶಿವರಾತ್ರಿಯಂದು ಮುಕ್ತಾಗೊಳ್ಳಲಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment