/newsfirstlive-kannada/media/post_attachments/wp-content/uploads/2025/01/monalisa1.jpg)
ಮೊದ್ಲು ಮೊನಾಲಿಸಾ ಎಂದ್ರೆ ಎಲ್ಲರಿಗೂ ನೆನಪಾಗುವುದು ಲಿಯೊನಾರ್ಡೊ ಡಾ ವಿನ್ಸಿ ಅವರ ಚಿತ್ರಕಲೆಯ ಹೆಣ್ಣಿನ ಚಿತ್ರ ಕಣ್ಮುಂದೆ ಬರುತ್ತಿತ್ತು. ಗೂಗಲ್ನಲ್ಲಿಯೂ ಇದೇ ಪೇಂಟಿಂಗ್ ಕಾಣಿಸುತ್ತಿತ್ತು. ಆದ್ರೆ, ಕಳೆದ ಕೆಲವು ದಿನಗಳಿಂದ ಎಲ್ಲವೂ ಬದಲಾಗಿ ಹೋಗಿದೆ. ಗೂಗಲ್ನಲ್ಲಿ ಕುಂಭಮೇಳ ಎಂದು ಸರ್ಚ್ ಮಾಡಿದ್ರೆ ಮೊದಲಿಗೆ ಕಾಣೋದೇ ಈ ನೀಲಿ ಕಣ್ಗಳ ಚೆಲುವೆ. ಸೋಷಿಯಲ್ ಮೀಡಿಯಾಗಳಲ್ಲಂತೂ ಈಕೆಯದ್ದೇ ಕಾರುಬಾರು.
ಇದನ್ನೂ ಓದಿ:ಮೊದಲ ಬಾರಿ ಐತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚಿದ ರಶ್ಮಿಕಾ ಮಂದಣ್ಣ; ಏನಿದರ ವಿಶೇಷ? PHOTOS
ಇದೀಗ ಇದೇ ಮೊನಾಲಿಸಾ ಬಾಲಿವುಡ್ನ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದೇ ವಿಚಾರ ಕೇಳಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಅರೇ ಮೊನ್ನೆ ಫೇಮಸ್ ಆಗಿರೋ ಈಕೆ ಈಗ ಬಾಲಿವುಡ್ನಲ್ಲಿ ಸಿನಿಮಾದಲ್ಲಿ ನಟಿಸುತ್ತಾಳಾ ಅಂತ ಹುಬ್ಬೇರಿಸುತ್ತಿದ್ದಾರೆ.
ಹೌದು, ಮಹಾಕುಂಭದಲ್ಲಿ ನೋಡುಗರ ಕಣ್ಮನ ಸೆಳೆದ ಮೊನಾಲಿಸಾಗೆ ಬಾಲಿವುಡ್ನಿಂದ ಆಫರ್ವೊಂದು ಬಂದಿದೆಯಂತೆ. ಬಾಲಿವುಡ್ ಸ್ಟಾರ್ ಡೈರೆಕ್ಟರ್ ಸಿನಿಮಾದಲ್ಲಿ ನಟಿಸಲು ಆಫರ್ ಬಂದಿದೆ. ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಲು ಬಂದಿದ್ದ ಮೊನಾಲಿಸಾ ಮುಂದಿನ ದಿನಗಳಲ್ಲಿ ಬಾಲಿವುಡ್ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರಂತೆ. ಡೈರೆಕ್ಟರ್ ಸನೋಜ್ ಮಿಶ್ರಾರಿಂದ ಮೊನಾಲಿಸಾ ಆಫರ್ ಹೋಗಿದೆಯಂತೆ.
ಇನ್ನೂ, ಸನೋಜ್ ಮಿಶ್ರಾರ ಬಹು ನಿರೀಕ್ಷಿತ ಚಿತ್ರ ‘ಡೈರಿ ಆಫ್ ಮಣಿಪುರ’. ಈ ಸಿನಿಮಾಗಾಗಿ ಮುಗ್ಧೆಯ ಪಾತ್ರಕ್ಕೆ ನಟಿಯನ್ನ ಹುಡುಕುತ್ತಿದ್ದಾರಂತೆ. ಇಂದೋರ್ಗೆ ತೆರಳಿ ಮೊನಾಲಿಸಾ ಜೊತೆ ಚರ್ಚಿಸಲಿದ್ದಾರಂತೆ. ಆಕೆಗೆ ಌಕ್ಟಿಂಗ್ ಕ್ಲಾಸ್ ಕೊಡಿಸಿ, ಚಿತ್ರದಲ್ಲಿ ಚಾನ್ಸ್ ನೀಡುವ ಸಾಧ್ಯತೆ ಇದೆಯಂತೆ. ಮಣಿಪುರ ರಾಜ್ಯದ ಜ್ವಲಂತ ಸಮಸ್ಯೆಯನ್ನ ಆಧರಿಸಿದ ಸಿನಿಮಾ ಇದಾಗಿದ್ದು, ಶೀಘ್ರದಲ್ಲೇ ಡೈರೆಕ್ಟರ್ ಮೊನಾಲಿಸಾಳಿಗೆ ಭೇಟಿಯಾಗಲಿದಾರಂತೆ. ಅದೇ ಚಿತ್ರದಲ್ಲಿ ಮೊನಾಲಿಸಾಗೆ ರೈತನ ಮಗಳ ಪಾತ್ರ ನೀಡುವ ಸಾಧ್ಯತೆ ಇದೆ. ಇದೇ ಅಲ್ವಾ ಲಕ್ ಅಂದ್ರೆ. ಯಾವಾಗ, ಯಾರ ಜೀವನ ಚೇಂಜ್ ಆಗುತ್ತೆ ಅಂತ ಹೇಳೋದಲ್ಲೆ ಆಗೋದಿಲ್ಲ. ನಿನ್ನೆ.. ಮೊನ್ನೆ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಲು ಬಂದಿದ್ದ ಮೊನಾಲಿಸಾ ಈಗ ಬಾಲಿವುಡ್ನತ್ತ ಪ್ರಯಣ ಬೆಳೆಸುತ್ತಾರಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ