/newsfirstlive-kannada/media/post_attachments/wp-content/uploads/2024/07/tishaakumar.jpg)
ಕ್ಯಾನ್ಸರ್.. ಈ ಹೆಮ್ಮಾರಿಯ ಹೆಸರು ಕೇಳಿದ್ರೆ ಸಾಕು ಜನರು ಬೆಚ್ಚಿ ಬೀಳುತ್ತಿದ್ದಾರೆ. ಸದ್ದಿಲ್ಲದೆ ದೇಹ ಹೊಕ್ಕೋ ಈ ಕಾಯಿಲೆ, ಗಮನಕ್ಕೆ ಬರುವುದರೊಳಗೆ ಉಸಿರನ್ನೇ ನಿಲ್ಲಿಸಿ ಬಿಡುತ್ತೆ. ಇಂಥಾ ಮಾರಕ ಕಾಯಿಲೆಗೆ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾರನ್ನು ಬಲಿ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಬಾಲಿವುಡ್‌ನ ನಿರ್ಮಾಪಕ ಕೃಷ್ಣ ಕುಮಾರ್ ಪುತ್ರಿ ತಿಶಾ ಕುಮಾರ್ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ.
ಇದನ್ನೂ ಓದಿ:ಸಿಗರೇಟ್ ಸೇದದವರೇ ಎಚ್ಚರ.. ಹೆಚ್ಚಾಗ್ತಿದೆ ಅಪರ್ಣಾ ಬಲಿ ಪಡೆದ ಮಾರಕ ಕ್ಯಾನ್ಸರ್; ವೈದ್ಯರ ಸಲಹೆ ಏನು?
20 ವರ್ಷದ ತಿಶಾ ಕುಮಾರ್ ಅನಿಮಲ್ ಚಿತ್ರದ ಪ್ರೀಮಿಯರ್ ಶೋ ವೇಳೆ ಕಾಣಿಸಿಕೊಂಡಿದ್ದರು. ಬಳಿಕ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಅತಿ ಚಿಕ್ಕ ವಯಸ್ಸಿನಲ್ಲೇ ತಿಶಾ ಕ್ಯಾನ್ಸರ್‌ಗೆ ಬಲಿಯಾಗಿರುವುದು ಬಾಲಿವುಡ್ ಮಾತ್ರವಲ್ಲ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹೌದು, 'ಅನಿಮಲ್', 'ಭೂಲ್ ಭುಲಯ್ಯ 2' ರೀತಿಯ ಸಿನಿಮಾಗಳಿಗೆ ಬಂಡವಾಳ ಹೂಡಿದ್ದ ಕೃಷ್ಣ ಕುಮಾರ್ ಅವರ ಮಗಳು ತಿಶಾ. ಕ್ಯಾನ್ಸರ್‌ಗೆ ಬಲಿಯಾದ ತಿಶಾ 2003ರ ಸೆಪ್ಟೆಂಬರ್ 6ರಂದು ಕೃಷ್ಣ ಕುಮಾರ್ ಹಾಗೂ ತಾನ್ಯಾ ಸಿಂಗ್ ಮಗಳಾಗಿ ಜನಿಸಿದರು. ಈ ದಂಪತಿಗೆ ಇರುವ ಒಬ್ಬಳೇ ಮಗಳಾಗಿದ್ದ ತಿಶಾ. ಆದರೆ ಮಗಳು ತಿಶಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ. ಹೀಗೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಗಳನ್ನು ಕುಟುಂಬಸ್ಥರಿಗೆ ಆಕೆಯನ್ನು ಉಳಿಸಿಕೊಳ್ಳೋಕೆ ಸಾಧ್ಯವಾಗಿಲ್ಲ.
ಇದನ್ನೂ ಓದಿ:ಅಪರ್ಣಾ ಪ್ರಾಣ ತೆಗೆದ ಲಂಗ್ ಕ್ಯಾನ್ಸರ್ ಎಷ್ಟು ಭಯಾನಕ; ಈ ಚಿಕಿತ್ಸೆ ಬಗ್ಗೆ ವೈದ್ಯರು ಕೊಟ್ಟ ಸಲಹೆ ಏನು?
ಜುಲೈ 18ರಂದು ತಿಶಾ ನಿಧನ ಹೊಂದಿದ್ದು, ಈ ಬಗ್ಗೆ ಕುಟುಂಬಸ್ಥರು ಇಂದು ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಿಶಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜರ್ಮನಿಗೆ ಕಳುಹಿಸಿದ್ದರಂತೆ. ಆದರೆ ಚಿಕಿತ್ಸೆ ಫಲಿಸದೇ ತಿಶಾ ಅಲ್ಲಿಯೇ ಸಾವನ್ನಪ್ಪಿದ್ದಾರಂತೆ. ಹೀಗಾಗಿ ತಿಶಾ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಸಣ್ಣ ವಯಸ್ಸಿನಲ್ಲೇ ಅವರು ನಿಧನ ಹೊಂದಿದ್ದು ಕುಟುಂಬಕ್ಕೆ ಆಘಾತ ಉಂಟು ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ