/newsfirstlive-kannada/media/post_attachments/wp-content/uploads/2025/01/Saif-Ali-Khan3.jpg)
ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಅವರ ಮೇಲೆ ಚಾಕು ಇರಿತವಾಗಿದೆ. ಮಹಾರಾಷ್ಟ್ರದ ಬಾಂದ್ರಾದಲ್ಲಿರೋ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ದಾಳಿ ಮಾಡಿರುವ ಬಗ್ಗೆ ವರದಿಯಾಗಿದೆ. ಚಾಕು ಇರಿತಕ್ಕೆ ಒಳಗಾದ ಸೈಫ್ ಅಲಿ ಖಾನ್ ಅವರನ್ನು ಬಾಂಧ್ರಾದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:BREAKING ಸೈಫ್ ಅಲಿ ಖಾನ್ ಮೇಲೆ ಮಧ್ಯರಾತ್ರಿ ಚಾಕುವಿನಿಂದ ಅಟ್ಯಾಕ್
ಮಾಹಿತಿ ಪ್ರಕಾರ, ಮಧ್ಯರಾತ್ರಿ 2.30 ಸುಮಾರಿಗೆ ಸೈಫ್ ಅಲಿಖಾನ್ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಈ ವೇಳೆ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ದಾಳಿಗೊಳಗಾದ ಸೈಫ್ ಅಲಿ ಖಾನ್ ಗಂಭೀರ ಗಾಯಗೊಂಡಿದ್ದಾರೆ. ಆ ಕೂಡಲೇ ಅವರನ್ನು ಮುಂಬೈ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಾಂದ್ರಾ ಪೊಲೀಸರು ಭೇಟಿ ನೀಡಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ವ್ಯಕ್ತಿಯೊಬ್ಬ ಮಧ್ಯರಾತ್ರಿ 2 ಗಂಟೆಗೆ ಸೈಫ್ ಅಲಿ ಖಾನ್ ಮನೆಗೆ ಬಂದಿದ್ದಾನೆ. ಆಗ ಸೈಫ್ ಮತ್ತು ಅಪರಿಚಿತ ವ್ಯಕ್ತಿಯ ನಡುವೆ ಮಾರಾಮಾರಿ ನಡೆದಿದೆ.
ಸೈಫ್ ಮೇಲೆ ಹರಿತವಾದ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ದಾಳಿ ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ದಾಳಿಯಲ್ಲಿ ಸೈಫ್ ಅವರ ಕುತ್ತಿಗೆಗೆ ಗಾಯವಾಗಿದೆ. ಎಡಗೈಗೆ 10 ಸೆಂ.ಮೀ ಕೊಯ್ದಿರುವ ಗಾಯವಾಗಿದೆ. ಬೆನ್ನು ಭಾಗಗಕ್ಕೂ ಚಾಕುವಿನಿಂದ ಚುಚ್ಚಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ