Advertisment

ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಮಾನ್ ಮಲಿಕ್; ಬ್ಯೂಟಿಫುಲ್​ ಫೋಟೋಸ್ ಇಲ್ಲಿವೆ

author-image
Veena Gangani
Updated On
ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಮಾನ್ ಮಲಿಕ್; ಬ್ಯೂಟಿಫುಲ್​ ಫೋಟೋಸ್ ಇಲ್ಲಿವೆ
Advertisment
  • ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ ಅರ್ಮಾನ್ ಮಲಿಕ್, ಆಶ್ನಾ ಶ್ರಾಫ್
  • ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಯ್ತು ಸ್ಟಾರ್ ಜೋಡಿ ಫೋಟೋಸ್
  • ರೋಸ್ ಕಲರ್ ದುಪಟ್ಟಾ, ಆರೆಂಜ್ ಕಲರ್ ಲೆಹೆಂಗಾದಲ್ಲಿ ಕಾಣಿಸಿಕೊಂಡ ಆಶ್ನಾ

ಬಾಲಿವುಡ್​ ಸ್ಟಾರ್ ಸಿಂಗರ್ ಅರ್ಮಾನ್ ಮಲಿಕ್ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹು ಕಾಲದ ಗೆಳತಿ ಆಶ್ನಾ ಶ್ರಾಫ್ ಜೊತೆಗೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಸದ್ದಿಲ್ಲದೇ ಮದುವೆಯಾಗಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ ಈ ಸ್ಟಾರ್ ಜೋಡಿ.

Advertisment

ಇದನ್ನೂ ಓದಿ: ಟೀಮ್​ ಇಂಡಿಯಾದಲ್ಲಿ ಈಗಲೂ ನಡೆಯೋದು ಕೊಹ್ಲಿ ಮಾತೇ; ವಿರಾಟ್​​ ಕಂಡ್ರೆ ಬಿಸಿಸಿಐಗೆ ಭಯ ಏಕೆ?

publive-image

ಇನ್ನೂ ಅರ್ಮಾನ್ ಮಲ್ಲಿಕ್ ಹಾಗೂ ಆಶ್ನಾ ಶ್ರಾಫ್ ಅದ್ದೂರಿ ಮದುವೆಗಳು ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ  ವೈರಲ್ ಆಗ್ತಿದೆ. ಅರ್ಮಾನ್ ಹಾಗೂ ಆಶ್ನಾ ಶ್ರಾಫ್ ಜೋಡಿಗೆ ಸಾಕಷ್ಟು ಸೆಲೆಬ್ರಿಟಿಗಳು ಶುಭಕೋರಿದ್ದಾರೆ. ಇನ್ನೂ ಮದುವೆ ಲುಕ್​ನಲ್ಲಿ ಕಾಣಿಸಿಕೊಂಡ ಮಧು ಆಶ್ನಾ ಶ್ರಾಫ್ ರೋಸ್ ಕಲರ್ ದುಪಟ್ಟಾ ಹಾಗೂ ಆರೆಂಜ್ ಕಲರ್ ಲೆಹೆಂಗಾವನ್ನ ಧರಿಸಿದ್ದರು.

publive-image

ಆಶ್ನಾ ಅವರು ವಧುವಿನ ಲುಕ್​ನಲ್ಲಿ ತುಂಬಾ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 2023ರಲ್ಲಿ ಅರ್ಮಾನ್ ಮಲಿಕ್ ಆಶ್ನಾಗೆ ಮದುವೆ ಪ್ರಪೋಸ್ ಮಾಡಿದ್ದರು. ಬಹುಕಾಲದ ಗೆಳತಿ ಆಶ್ನಾಗೆ ರಿಂಗ್ ತೊಡಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಅವರಿಗಾಗಿ 'ಕಸಮ್ ಸೆ - ದಿ ಪ್ರಪೋಸಲ್' ಎಂಬ ಮ್ಯೂಸಿಕ್ ವಿಡಿಯೋವನ್ನ ಸಹ ರಿಲೀಸ್ ಮಾಡಿದ್ದರು.

Advertisment

publive-image

ಇನ್ನೂ ಅರ್ಮಾನ್ ಮಲಿಕ್ ಸಂಗೀತದ ಹಿನ್ನೆಲೆಯಿಂದ ಬಂದವರು. ಅರ್ಮಾನ್ ಅವರ ತಂದೆ ದಾಬೂ ಮಲಿಕ್ ಸ್ವತಃ ಪ್ರಸಿದ್ಧ ಸಂಗೀತಗಾರರಾಗಿದ್ದಾರೆ. ಚಿಕ್ಕಪ್ಪ ಅನು ಮಲಿಕ್ ಕೂಡ ಖ್ಯಾತ ಗಾಯಕರಾಗಿದ್ದಾರೆ. ಅರ್ಮಾನ್ ಅವರು ತಮ್ಮ ಗಾಯನದಿಂದ ಭಾರತ ಮತ್ತು ವಿದೇಶಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

publive-image

ಇಷ್ಟೇ ಅಲ್ಲದೇ ಅರ್ಮಾನ್ ಮಲಿಕ್ ಅವರು ಗಾಯಕ, ಗೀತರಚನೆಕಾರ, ನಿರ್ಮಾಪಕ ಮತ್ತು ನಟನಾಗಿಯೂ ಯಶಸ್ವಿಯಾಗಿದ್ದಾರೆ. ಆಶ್ನಾ ಶ್ರಾಫ್ ಫ್ಯಾಷನ್ ಮತ್ತು ಬ್ಯೂಟಿ ಬ್ಲಾಗರ್ ಆಗಿ ಫೇಮಸ್ ಆಗಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇವರ ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ಅಪಾರ ಫಾಲೋವರ್ಸ್ ಗಳನ್ನು ಸಹ ಹೊಂದಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment