/newsfirstlive-kannada/media/post_attachments/wp-content/uploads/2025/07/akshay-kumar1.jpg)
ಸಿನಿಮಾಗಳಲ್ಲಿ ನಾವೆಲ್ಲಾ ಸ್ಟಂಟ್ಗಳನ್ನು ನೋಡಿದ್ದೇವೆ. ಹೀರೋಗಳು, ವಿಲನ್ಗಳು ದೊಡ್ಡ ದೊಡ್ಡ ಸ್ಟಂಟ್ಗಳನ್ನು ಲೀಲಾಜಾಲವಾಗಿ ಮಾಡುತ್ತಾರೆ. ಆದರೆ, ಈ ಸ್ಟಂಟ್ಗಳ ಹಿಂದಿರೋದು ಸಾಹಸ ನಟರು. ಇತ್ತೀಚೆಗೆ ಬಾಲಿವುಡ್‌ನ ಸ್ಟಂಟ್ ಮ್ಯಾನ್ ಮೋಹನ್ ರಾಜ್, ಸಿನಿಮಾವೊಂದರಲ್ಲಿ ಕಾರ್ ಸ್ಟಂಟ್ ಮಾಡುವಾಗ ಚೆನ್ನೈನಲ್ಲಿ ಬಿದ್ದು ಸಾವನ್ನಪ್ಪಿದ್ದರು. ಮೋಹನ್ ರಾಜು ಅವರನ್ನು ಎಲ್ಲರೂ ರಾಜು ಎಂದೇ ಕರೆಯುತ್ತಿದ್ದರು.
ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸ್ಟಂಟ್ ಮ್ಯಾನ್ಗಳಿಗೆ ಸರಿಯಾದ ಸುರಕ್ಷತ ಪ್ರೊಟೋಕಾಲ್ಗಳೇ ಇಲ್ಲ. ಆದ್ರೆ, ಬಾಲಿವುಡ್ನಲ್ಲಿ ಸ್ಟಂಟ್ ಮ್ಯಾನ್ಗಳಿಗೆ ಇನ್ಶೂರೆನ್ಸ್ ಇದೆ. ಸ್ಟಂಟ್ ಮ್ಯಾನ್ಗಳಿಗೆ ಇನ್ಶೂರೆನ್ಸ್ ಮೂಲಕ ರಕ್ಷಣೆ ಕೊಟ್ಟಿರೋದು ಬೇರಾರು ಅಲ್ಲ, ಸಿನಿಮಾ ಹೀರೋ ಅಕ್ಷಯ್ ಕುಮಾರ್. ಈ ಮೂಲಕ ಅಕ್ಷಯ್ ಕುಮಾರ್ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ, ನಿಜ ಜೀವನದಲ್ಲೂ ಕಷ್ಟಪಟ್ಟು ಕೆಲಸ ಮಾಡುವ ಸ್ಟಂಟ್ ಮ್ಯಾನ್ಗಳ ಪಾಲಿನ ಹೀರೋ ಕೂಡ ಆಗಿದ್ದಾರೆ.
ಸ್ಟಾರ್ ಹೀರೋ ಅಕ್ಷಯ್ ಕುಮಾರ್ ಬಾಲಿವುಡ್‌ನ ಎಲ್ಲ ಸ್ಟಂಟ್ ಮ್ಯಾನ್ಗಳಿಗೆ ಇನ್ಶೂರೆನ್ಸ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಕ್ಷಯ್ ಕುಮಾರ್, ಬಾಲಿವುಡ್‌ನ ಎಲ್ಲ ಸ್ಟಂಟ್ ಮ್ಯಾನ್ಗಳಿಗೆ ಹೆಲ್ತ್ ಮತ್ತು ಆಕ್ಸಿಡೆಂಟ್ ಇನ್ಶೂರೆನ್ಸ್ ಅನ್ನು ಫ್ರಿಯಾಗಿ ತಮ್ಮ ಕಡೆಯಿಂದ ಮಾಡಿಸಿ ಕೊಟ್ಟಿದ್ದಾರೆ. ಇದರ ಬಗ್ಗೆ ಅಕ್ಷಯ್ ಕುಮಾರ್ ಅವರೇ ಆಸಕ್ತಿ ವಹಿಸಿ ಇನ್ಶೂರೆನ್ಸ್ ಮಾಡಿಸಿಕೊಟ್ಟಿರುವುದು ವಿಶೇಷ.
ಅಕ್ಷಯ್ ಸರ್ಗೆ ಧನ್ಯವಾದಗಳು. ಸುಮಾರು 650-700 ಮಂದಿ ಸ್ಟಂಟ್ ಮ್ಯಾನ್ ಮತ್ತು ಆ್ಯಕ್ಷನ್ ಸಿಬ್ಬಂದಿ ಈಗ ಇನ್ಶೂರೆನ್ಸ್ ಕವರ್ ಅನ್ನು ಹೊಂದಿದ್ದಾರೆ ಎಂದು ಆ್ಯಕ್ಷನ್ ಡೈರೆಕ್ಟರ್ ವಿಕ್ರಮ್ ಸಿಂಗ್ ದಹಿಯಾ ಹೇಳಿದ್ದಾರೆ. ಇದು ಹೆಲ್ತ್ ಮತ್ತು ಆಕ್ಸಿಡೆಂಟ್ ಎರಡನ್ನೂ ಒಳಗೊಂಡಿದೆ. ಒಂದು ವೇಳೆ ಯಾರಾದರೂ, ಸ್ಟಂಟ್ ಮ್ಯಾನ್ ಸೆಟ್ ನಲ್ಲಿ ಅಥವಾ ಹೊರಗಡೆ ಗಾಯಗೊಂಡರೇ, ಐದೂವರೆ ಲಕ್ಷ ರೂಪಾಯಿವರೆಗೂ ಕ್ಯಾಶಲೆಸ್ ಟ್ರೀಟ್ ಮೆಂಟ್ ಪಡೆಯಬಹುದು. ಎಂದು ವಿಕ್ರಮ ಸಿಂಗ್ ದಹಿಯಾ ಹೇಳಿದ್ದಾರೆ.
ಇನ್ನೂ, ಸ್ಟಂಟ್ ಮ್ಯಾನ್, ಸಿಬ್ಬಂದಿಯ ಆಕಸ್ಮಿಕವಾಗಿ ಸಾವನ್ನಪ್ಪಿದರೇ, ಅವರ ನಾಮಿನಿಗೆ 20-25 ಲಕ್ಷ ರೂಪಾಯಿ ಹಣ ಸಿಗಲಿದೆ. ಈ ಮೊದಲು ಈ ಇನ್ಶೂರೆನ್ಸ್ ಇರಲಿಲ್ಲ. ಅಕ್ಷಯ ಕುಮಾರ್ ಇದರ ಬಗ್ಗೆ ಬರೀ ಮಾತನಾಡಲಿಲ್ಲ. ಇನ್ಶೂರೆನ್ಸ್ ಹಣಕ್ಕೆ ಫಂಡ್ ಮಾಡಿದ್ದರು. ಸ್ಟಂಟ್ ಮ್ಯಾನ್ಗಳ ಕಷ್ಟ ಏನೆಂಬುದು ಅಕ್ಷಯ್ ಕುಮಾರ್ ಗೆ ಗೊತ್ತು ಎಂದು ವಿಕ್ರಮ ಸಿಂಗ್ ದಹಿಯಾ ಹೇಳಿದ್ದಾರೆ.
ಇದನ್ನೂ ಓದಿ:ಮಕ್ಕಳಿಗಾಗಿ ಗಿಫ್ಟ್ ಬಾಕ್ಸ್ ಹಿಡಿದು ಕೈಬೀಸಿದ ಇಸ್ರೇಲ್ ಡ್ಯಾಡಿ.. ಕಂದಮ್ಮರ ಮುಖ ನೋಡಲಾಗದೇ ಅಪ್ಪ ವಾಪಸ್
ಇನ್ನೂ ಮೂವಿ ಸ್ಟಂಟ್ ಆರ್ಟಿಸ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಏಜಾಜ್ ಖಾನ್ ಹೇಳುವ ಪ್ರಕಾರ, ಹಿಂದಿ ಸಿನಿಮಾಗಳಲ್ಲಿ ಸ್ಟಂಟ್ ಮ್ಯಾನ್ ಗಳಿಗೆ ಸೇಫ್ಟಿ ಕ್ರಮಗಳನ್ನ ಕೈಗೊಳ್ಳಲಾಗುತ್ತೆ. ಸ್ಟಂಟ್ ಮ್ಯಾನ್ಗಳಿಗೆ ಸಂಕಷ್ಟದ ಕಾಲದಲ್ಲಿ ಆರ್ಥಿಕ ಬೆಂಬಲ ಸಿಗುವ ವ್ಯವಸ್ಥೆ ಇದೆ. ಇದಕ್ಕಾಗಿ ವೈಯಕ್ತಿಕವಾಗಿ ಅಕ್ಷಯ್ ಕುಮಾರ್ ಹಣ ನೀಡಿದ್ದಾರೆ. ಸ್ಟಂಟ್ ಮ್ಯಾನ್ಗಳಿಗೆ ಸಾಕಷ್ಟು ಸಹಾಯವಾಗಿರುವ ಈ ಇನ್ಸೂರೆನ್ಸ್ ಸ್ಕೀಮ್ಗೆ ಅಕ್ಷಯ್ ಕುಮಾರ್ ತಮ್ಮ ಜೇಬಿನಿಂದ ಕಳೆದ 8 ವರ್ಷಗಳಿಂದ ಹಣ ನೀಡಿದ್ದಾರೆ. ಇದು ನಿಜಕ್ಕೂ ನಮ್ಮ ಸ್ಟಂಟ್ ಮ್ಯಾನ್ ಸಮುದಾಯಕ್ಕೆ ಅನುಕೂಲಕಾರಿಯಾಗಿದೆ.
ನಾಲ್ಕು ಬೇರೆ ಬೇರೆ ರಸ್ತೆ ಅಪಘಾತಗಳಲ್ಲಿ ಸ್ಟಂಟ್ ಮ್ಯಾನ್ಗಳು ಸಾವನ್ನಪ್ಪಿದ್ದರು. ಪ್ರತಿಯೊಂದು ಕುಟುಂಬಕ್ಕೂ ತಲಾ 20 ಲಕ್ಷ ರೂಪಾಯಿ ಹಣವನ್ನು ಈ ಇನ್ಸೂರೆನ್ಸ್ ಸ್ಕೀಮ್ನಿಂದ ನೀಡಲಾಯಿತು. ಈ ಮೂಲಕ ನಾಲ್ಕು ಕುಟುಂಬಗಳಿಗೆ ಕಷ್ಟ ಕಾಲದಲ್ಲಿ ನೆರವು ಆಗುವ ಕೆಲಸ ನಡೆದಿದೆ. ಅಕ್ಷಯ್ ಕುಮಾರ್ 2017 ರಲ್ಲಿ ಮೂವಿ ಸ್ಟಂಟ್ ಆರ್ಟಿಸ್ಟ್ ಅಸೋಸಿಯೇಷನ್ಗೆ ಇನ್ಸೂರೆನ್ಸ್ ಪಾಲಿಸಿಯನ್ನು ಗಿಫ್ಟ್ ಆಗಿ ನೀಡಿದ್ದರು. ಇದು ಸ್ಟಂಟ್ ಮ್ಯಾನ್ಗಳ ಪಾಲಿಗೆ ಟರ್ನಿಂಗ್ ಪಾಯಿಂಟ್ ಎಂದು ಏಜಾಜ್ ಖಾನ್ ಹೇಳಿದ್ದಾರೆ.
ಮೂವಿ ಸ್ಟಂಟ್ ಆರ್ಟಿಸ್ಟ್ ಅಸೋಸಿಯೇಷನ್ ಸದಸ್ಯರಾಗುವುದು ಸುಲಭವಲ್ಲ. ಸ್ಟಂಟ್ ಆರ್ಟಿಸ್ಟ್ ಗಳು ಮಾರ್ಶಲ್ ಆರ್ಟ್ಸ್ ನಲ್ಲಿ ತರಬೇತಿ ಹೊಂದಿರಬೇಕು. ಆ್ಯಕ್ಷನ್ ಡೈರೆಕ್ಟರ್ ಗಳು ನಡೆಸುವ ಟೆಸ್ಟ್ ನಲ್ಲಿ ಭಾಗವಹಿಸಬೇಕು. ಈ ಟೆಸ್ಟ್ ನಲ್ಲಿ ಪಾಸಾದ ಸ್ಟಂಟ್ ಮ್ಯಾನ್ಗಳಿಗೆ ಮಾತ್ರವೇ ಸ್ಟಂಟ್ ಮ್ಯಾನ್ ಐಡಿ ಕಾರ್ಡ್ ನೀಡಲಾಗುತ್ತೆ. ಬಳಿಕ ಅಧಿಕೃತವಾಗಿ ಸ್ಟಂಟ್ ಮ್ಯಾನ್ ಅಸೋಸಿಯೇಷನ್ನಲ್ಲಿ ಅವರ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಲಾಗುತ್ತೆ. ಸದಸ್ಯತ್ವ ಶುಲ್ಕ 3.5 ಲಕ್ಷ ರೂಪಾಯಿ ಇದೆ. ಇದನ್ನು ನಿವೃತ್ತಿ ವೇಳೆ ರೀಫಂಡ್ ಮಾಡಲಾಗುತ್ತೆ ಎಂದು ಏಜಾಜ್ ಖಾನ್ ಹೇಳಿದ್ದಾರೆ. ಸ್ಟಂಟ್ ಮ್ಯಾನ್ ಅಸೋಸಿಯೇಷನ್ ಸದಸ್ಯರಾಗಲು, ಮಾರ್ಷಲ್ ಆರ್ಟ್ಸ್ , ಕಾರ್, ಬೈಕ್ ಡ್ರೈವಿಂಗ್, ಸ್ವಿಮ್ಮಿಂಗ್ ಗೊತ್ತಿರಬೇಕು. ಎಂಥಾ ಸ್ಟಂಟ್ ಮಾಡಬೇಕಾಗುತ್ತೆ ಎಂಬುದು ನಮಗೆ ಗೊತ್ತಿರಲ್ಲ. ಹೀಗಾಗಿ ದೈಹಿಕ, ಟೆಕ್ನಿಕಲ್ ಫಿಟ್ನೆಸ್ ಅಗತ್ಯವಾಗಿದೆ ಎಂದು ಏಜಾಜ್ ಖಾನ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ