newsfirstkannada.com

ಕೊಹ್ಲಿಯೂ ಇಲ್ಲ, ಧೋನಿಯೂ ಇಲ್ಲ.. ಬಾಲಿವುಡ್​ ಈ ನಟನ ಬ್ರ್ಯಾಂಡ್​ ವ್ಯಾಲ್ಯೂ ಎಲ್ಲರಂತಲ್ಲ! ​

Share :

Published July 8, 2023 at 9:42am

Update July 8, 2023 at 10:08am

    ಸೆಲಬ್ರಟಿಗಳಲ್ಲಿ ಯಾರಿಗೆ ಡಿಮ್ಯಾಂಡ್​ ಜಾಸ್ತಿ..?

    ಬಾಲಿವುಡ್ ನಟರಿಗಾ..? ಇಂಡಿಯನ್​ ಕ್ರಿಕೆಟರ್ಸ್​ಗಾ..?

    ಬಾಲಿವುಡ್​​ ಆ್ಯಕ್ಟರ್ಸ್​-ಕ್ರಿಕೆಟರ್ಸ್​ ಬ್ರಾಂಡ್​ ವ್ಯಾಲ್ಯೂ ಎಷ್ಟು..?

ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಸಚಿನ್​ ತೆಂಡುಲ್ಕರ್​​​. ಟೀಂ ಇಂಡಿಯಾದ ರತ್ನತ್ರಯರು.ಇವರನ್ನ ಓವರ್ ಟೇಕ್​ ಮಾಡ್ತೀನಿ ಅಂತ ಬಂದೋರೆಲ್ಲಾ ಹೇಳಹೆಸರಿಲ್ಲದೇ ಮೂಲೆಗುಂಪಾಗಿದ್ದಾರೆ. ಆದರೆ ಅದು ಹಿಂದಿನ ಮಾತು. ಈಗ ಬಾಲಿವುಡ್​​​ ಘರ್ಜನೆ ಮುಂದೆ ಈ ಮೂವರು ದಿಗ್ಗಜರು ಮಂಕಾಗಿದ್ದಾರೆ.

ಬಾಲಿವುಡ್​​ ವರ್ಸಸ್​​ ಇಂಡಿಯನ್​ ಕ್ರಿಕೆಟರ್ಸ್​! ಇವರಲ್ಲಿ ಯಾರು ಬೆಸ್ಟ್​ ? ಯಾರಿಗೆ ಡಿಮ್ಯಾಂಡ್​​​ ಹೆಚ್ಚು ? ಈ ಪ್ರಶ್ನೆಗಳಿಗೆ ಆನ್ಸರ್ ಕಂಡುಕೊಳ್ಳೋದು ತುಸು ಕಷ್ಟವೇ. ಯಾಕಂದ್ರೆ ಟೀಮ್ ಇಂಡಿಯಾ ಆಟಗಾರರನ್ನ ಜನರು ಎಷ್ಟು ಪ್ರೀತಿಸ್ತಾರೋ, ಬಾಲಿವುಡ್​ ನಟರನ್ನು ಅಷ್ಟೇ ಆರಾಧಿಸ್ತಾರೆ. ಇಲ್ಲಿ ಕ್ಷೇತ್ರ ಬದಲಾದ್ರು ಅವರ ಉದ್ದೇಶ ಒಂದೇ. ಅದೇನಂದ್ರೆ ಎಂಟರ್​ಟೈನ್​ಮೆಂಟ್​​. ಈ ವಿಚಾರದಲ್ಲಿ ಕ್ರಿಕೆಟರ್ಸ್​ ಹಾಗೂ ಸಿನಿಮಾ ನಟರನ್ನ ಮೀರಿಸೋರೆ ಇಲ್ಲ.

ಬಾಲಿವುಡ್​​ VS ಕ್ರಿಕೆಟರ್ಸ್​ ನಡ್ವೆ ಬ್ರಾಂಡ್​ ಫೈಟ್​​​..!

ಕ್ರಿಕೆಟರ್ಸ್​ ಹಾಗೂ ಬಿಟೌನ್​​​​​​​ ಆಕ್ಟರ್ಸ್​ ಜನರಿಗೆ ಭರಪೂರ ಮನರಂಜನೆ ಒದಗಿಸೋದು ಎಷ್ಟು ನಿಜನೋ ಬಾಲಿವುಡ್​​​​ ವರ್ಸಸ್​ ಕ್ರಿಕೆಟರ್ಸ್​ ಮಧ್ಯೆ ಬ್ರಾಂಡ್​ ಫೈಟ್ ಏರ್ಪಟ್ಟಿರೋದು ಅಷ್ಟೇ ಸತ್ಯ. ಹೌದು, ರೀಸೆಂಟ್ಲಿ ಬಿಡುಗಡೆಗೊಂಡ ಮಾರ್ಕೆಟಿಂಗ್ ಸರ್ವೆಯಲ್ಲಿ ಇಬ್ಬರಲ್ಲಿ ಯಾರಿಗೆ ಡಿಮ್ಯಾಂಡ್​​ ಹೆಚ್ಚಿದೆ ಅನ್ನೋ ಸತ್ಯ ಬಹಿರಂಗಗೊಂಡಿದೆ. ಬ್ರಾಂಡ್ ವ್ಯಾಲ್ಯೂ ವಿಚಾರದಲ್ಲಿ ಬಾಲಿವುಡ್​ ಸಿನಿತಾರೆಗಳು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರನ್ನ ಹಿಂದಿಕ್ಕಿ ಅಚ್ಚರಿ ಮೂಡಿಸಿದ್ದಾರೆ.

ಕಿಂಗ್ ಕೊಹ್ಲಿ ಕೈತಪ್ಪಿದ ಭಾರತದ ಟಾಪ್​​​ ಸೆಲಬ್ರಟಿ ಪಟ್ಟ..!

ವಿರಾಟ್ ಕೊಹ್ಲಿ. ರೂಲರ್​​​​ ಆಫ್​​ ದಿ ಕ್ರಿಕೆಟ್​​​..ಮನೋಜ್ಞ ಆಟದಿಂದ ಕ್ರಿಕೆಟ್ ಲೋಕವನ್ನ ಆಳ್ತಿರುವ ಕಿಂಗ್​​ ಕೊಹ್ಲಿ ಟೀಮ್ ಇಂಡಿಯಾ ಮಟ್ಟಿಗೆ ಸೂಪರ್​ ಸ್ಟಾರ್​​. ಅಷ್ಟೇ ಏಕೆ ಕಳೆದ ಐದು ವರ್ಷಗಳಿಂದ ಭಾರತದ ಟಾಪ್​ ಸೆಲಬ್ರಿಟಿ ಕೂಡ ಅನ್ನಿಸಿಕೊಂಡಿದ್ರು. ಆದ್ರೆ ಈ ಬಾರಿ ಬಾಲಿವುಡ್​ ಸ್ಟಾರ್​​ನಟವೊಬ್ಬ ಕ್ರಿಕೆಟ್​​​ ದಂತಕಥೆ ವಿರಾಟ್ ಕೊಹ್ಲಿಯನ್ನೇ ಓವರ್ ಟೇಕ್ ಮಾಡಿದ್ದಾರೆ.

ಬ್ರಾಂಡ್​​​​ ವ್ಯಾಲ್ಯುನಲ್ಲಿ ಕೊಹ್ಲಿ ಮೀರಿಸಿದ ರಣ್​ವೀರ್ ಸಿಂಗ್

ಬ್ರಾಂಡ್​​ ವ್ಯಾಲ್ಯು ವಿಚಾರದಲ್ಲಿ ಬಾಲಿವುಡ್​​​ ಸೂಪರ್​ ಸ್ಟಾರ್​​ ರಣ್​ವೀರ್​​ ಸಿಂಗ್ ದಿ ಗ್ರೇಟ್​ ವಿರಾಟ್​ ಕೊಹ್ಲಿಯನ್ನ ಮೀರಿಸಿದ್ದಾರೆ. ಭಾರತದ ಟಾಪ್​​​-1 ಸೆಲಬ್ರಿಟಿ ಆಗಿರೋ ರಣ್​ವೀರ್​​​​ ರ ಬ್ರಾಂಡ್​ ವ್ಯಾಲ್ಯು 181.7 ಮಿಲಿಯನ್​​ ಡಾಲರ್​​. ಅಂದ್ರೆ 1503 ಕೋಟಿಗೂ ಅಧಿಕ.

ಇನ್ನು ಭಾರತದ ಟಾಪ್​​​-2 ಸೆಲಬ್ರಿಟಿ ಅನ್ನಿಸಿಕೊಂಡಿರೋ ಕಿಂಗ್ ಕೊಹ್ಲಿ, ಬ್ರಾಂಡ್​ ವ್ಯಾಲ್ಯೂನಲ್ಲಿ ರಣ್​​ಬೀರ್ ಸಿಂಗ್​​ಗೆ ಪ್ರಬಲ ಪೈಪೊಟಿ ಒಡ್ಡಿದ್ದಾರೆ. ಸೆಂಚುರಿ ಸರದಾರ ಪ್ರಸ್ತುತ ಬ್ರಾಂಡ್​ ವ್ಯಾಲ್ಯೂ ಬರೋಬ್ಬರಿ 1460 ಕೋಟಿ ರೂಪಾಯಿ. ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದ್ದ ವಿರಾಟ್ ಬ್ರಾಂಡ್ ವ್ಯಾಲ್ಯೂ ಮೊದಲ ಬಾರಿ ಕುಸಿದಿದೆ. ಹೀಗಾಗಿನೇ ಬಿಟೌನ್ ಸ್ಟೈಲಿಶ್​​ ಆಕ್ಟರ್​ ಕಿಂಗ್ ಕೊಹ್ಲಿಗೆ ಪಂಚ್​ ಕೊಟ್ಟಿದ್ದಾರೆ.

ಧೋನಿ-ಸಚಿನ್​​ಗಿಂತ ಅಕ್ಷಯ್ ಕುಮಾರ್ ಬೆಸ್ಟ್​​​..!

ಇನ್ನು ಬ್ರಾಂಡ್​ ವ್ಯಾಲ್ಯುನಲ್ಲಿ ಬಾಲಿವುಡ್​ ಸಿನಿಮಂದಿ ಬರೀ ಕಿಂಗ್ ಕೊಹ್ಲಿಯನ್ನಷ್ಟೇ ಓವರ್ ಟೇಕ್​ ಮಾಡಿಲ್ಲ. ಬದಲಿಗೆ ಮಿಸ್ಟರ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಹಾಗೂ ಕ್ರಿಕೆಟ್ ದೇವರು ಸಚಿನ್​ ತೆಂಡುಲ್ಕರ್​ ರನ್ನ ಹಿಂದಿಕ್ಕಿದ್ದಾರೆ. 153.6 ಮಿಲಿಯನ್​​​ ಡಾಲರ್​ ಬ್ರಾಂಡ್​ ವ್ಯಾಲ್ಯೂ ಹೊಂದಿರೋ ಅಕ್ಷಯ್ ಕುಮಾರ್, ಕೊಹ್ಲಿ ಬಳಿಕ ದೇಶದ 3ನೇ ಉತ್ತಮ ಸೆಲಬ್ರಟಿ ಅನ್ನಿಸಿಕೊಂಡಿದ್ದಾರೆ.

ಭಾರತಕ್ಕೆ ಮೂರು ಐಸಿಸಿ ಮಾದರಿ ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟ ಧೋನಿ ಬ್ರಾಂಡ್​ ವ್ಯಾಲ್ಯು ಬರೋಬ್ಬರಿ 664 ಕೋಟಿ ರೂಪಾಯಿ.ಇನ್ನು ಗಾಡ್ ಆಫ್ ಕ್ರಿಕೆಟರ್ ಸಚಿನ್ 609 ಕೋಟಿಯ ಬ್ರಾಂಡ್​ ವ್ಯಾಲ್ಯು ಹೊಂದಿದ್ದಾರೆ. ಇಬ್ಬರು ಕ್ರಮವಾಗಿ 6 ಮತ್ತು 8ನೇ ಸ್ಥಾನದಲ್ಲಿದ್ದಾರೆ.

ಒನ್​​​ ಟೈಮ್​​ನಲ್ಲಿ ಬ್ರಾಂಡ್​ ವ್ಯಾಲ್ಯೂ ವಿಚಾರಕ್ಕೆ ಬಂದ್ರೆ ಟೀಮ್ ಇಂಡಿಯಾ ಕ್ರಿಕೆಟಿಗರನ್ನ ಮೀರಿಸೋರೆ ಇರ್ಲಿಲ್ಲ. ಆದ್ರೀಗ ಬಾಲಿವುಡ್​​​​​ ಆಕ್ಟರ್ಸ್​ ಟಾಪ್​​​-10 ನಲ್ಲಿ ಪಾರಮ್ಯ ಮೆರೆದಿದ್ದಾರೆ. ಆ ಮೂಲಕ ತಾವೇನು ಕ್ರಿಕೆಟರ್ಸ್​ಗಿಂತ ಕಮ್ಮಿ ಇಲ್ಲ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿಯೂ ಇಲ್ಲ, ಧೋನಿಯೂ ಇಲ್ಲ.. ಬಾಲಿವುಡ್​ ಈ ನಟನ ಬ್ರ್ಯಾಂಡ್​ ವ್ಯಾಲ್ಯೂ ಎಲ್ಲರಂತಲ್ಲ! ​

https://newsfirstlive.com/wp-content/uploads/2023/07/Kohli-dhoni.jpg

Load More