Advertisment

ಮುನಿಸು ಮರೆತು ಒಟ್ಟಿಗೆ ಕಾಣಿಸಿಕೊಂಡ ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್; ಮರ್ಡರ್ 2 ಬರುತ್ತಾ?

author-image
admin
Updated On
ಮುನಿಸು ಮರೆತು ಒಟ್ಟಿಗೆ ಕಾಣಿಸಿಕೊಂಡ ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್; ಮರ್ಡರ್ 2 ಬರುತ್ತಾ?
Advertisment
  • 2004ರಲ್ಲಿ ಮರ್ಡರ್ ಸಿನಿಮಾ ಬಿಡುಗಡೆಯಾದ ಬಳಿಕ ದೂರ, ದೂರ
  • 20 ವರ್ಷದ ಬಳಿಕ ಮತ್ತೆ ಒಂದಾಗುತ್ತಾ ಬಾಲಿವುಡ್‌ನ ಕಿಸ್ಸಿಂಗ್ ಜೋಡಿ!
  • ಹೊಸ ಹಲ್‌ಚಲ್ ಸೃಷ್ಟಿಸಿದ ಇಮ್ರಾನ್ ಹಶ್ಮಿ ಹಾಗೂ ಮಲ್ಲಿಕಾ ಶೆರಾವತ್

ಬಾಲಿವುಡ್‌ ನಟ ಇಮ್ರಾನ್ ಹಶ್ಮಿ, ಹಾಟ್ ನಟಿ ಮಲ್ಲಿಕಾ ಶೆರಾವತ್ ಅಭಿನಯದ ಮರ್ಡರ್ ಸಿನಿಮಾ ರಿಲೀಸ್ ಆಗಿ ಸರಿಯಾಗಿ 20 ವರ್ಷ 10 ದಿನ ಕಳೆದಿದೆ. ಇದೀಗ ಅದೇ ಮರ್ಡರ್‌ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳೋ ಮೂಲಕ ಬಾಲಿವುಡ್‌ನಲ್ಲಿ ಹೊಸ ಹಲ್‌ಚಲ್ ಸೃಷ್ಟಿಸಿದೆ. ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್ ಒಟ್ಟಿಗೆ ಕ್ಯಾಮೆರಾಗೆ ಪೋಸ್‌ ಕೊಟ್ಟಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Advertisment

2004ರಲ್ಲಿ ಮರ್ಡರ್ ಸಿನಿಮಾ ಬಿಡುಗಡೆಯಾದ ಬಳಿಕ ಈ ಹಾಟ್‌ ಜೋಡಿ ದೂರವಾಗಿದ್ದರು. ಇದೀಗ ಬರೋಬ್ಬರಿ 20 ವರ್ಷದ ಬಳಿಕ ಇಮ್ರಾನ್ ಹಶ್ಮಿ ಹಾಗೂ ಮಲ್ಲಿಕಾ ಶೆರಾವತ್ ಮತ್ತೆ ಜೊತೆಯಾಗಿದ್ದಾರೆ. ಇವರಿಬ್ಬರ ಸಮಾಗಮಕ್ಕೆ ಸಾಕ್ಷಿಯಾಗಿದ್ದು ಸಿನಿಮಾ ನಿರ್ಮಾಪಕ ಆನಂದ್ ಪಂಡಿತ್‌ ಅವರ ಮಗಳ ಆರತಕ್ಷತೆ ಸಮಾರಂಭ. ಮದುವೆ ಸಂಭ್ರಮಕ್ಕೆ ಆಗಮಿಸಿದ ಇಮ್ರಾನ್ ಹಶ್ಮಿ ಅವರು ಮಲ್ಲಿಕಾ ಶೆರಾವತ್ ಅವರನ್ನು ನೋಡಿ ಪ್ರೀತಿಯಿಂದ ಮಾತನಾಡಿಸಿದ್ದಾರೆ.

ಇದನ್ನೂ ಓದಿ: ಯಶ್​ ಫ್ಯಾನ್ಸ್​ಗೆ ಗುಡ್​ ನ್ಯೂಸ್​​! ಬಾಲಿವುಡ್​ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ರಾಕಿಭಾಯ್​

ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾದ ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್ ಎಲ್ಲರ ಗಮನ ಸೆಳೆದರು. 20 ವರ್ಷದ ಬಳಿಕ ಇಬ್ಬರು ಬಾಲಿವುಡ್ ಸ್ಟಾರ್ಸ್ ಒಟ್ಟಿಗೆ ಸೇರಿರೋದು ಹಲವು ಗಾಸಿಪ್‌ಗಳಿಗೆ ದಾರಿ ಮಾಡಿಕೊಂಟ್ಟಿದೆ. ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್ ಅನ್ನು ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Advertisment


">April 12, 2024

ಮರ್ಡರ್ ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್‌ಗಳಿಗೆ ಫೇಮಸ್‌ ಆಗಿದ್ದ ಈ ಜೋಡಿ ಮತ್ತೆ ಒಂದಾಗಿರೋದು ನೆಟ್ಟಿಗರ ಹಾಟ್ ಟಾಪಿಕ್ ಆಗಿದೆ. ಹಲವಾರು ಅಭಿಮಾನಿಗಳು ಮಲ್ಲಿಕಾ ಶೆರಾವತ್ ಅವರನ್ನ ನೋಡಿ ಮರ್ಡರ್ 2 ಸಿನಿಮಾ ಬರಲಿ ಎಂದು ಆಶಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment