/newsfirstlive-kannada/media/post_attachments/wp-content/uploads/2024/12/Kolar-Road-Accident-3.jpg)
ಕೋಲಾರ: ಮುಳಬಾಗಿಲು ತಾಲೂಕಿನ ಎನ್.ವಡ್ಡಹಳ್ಳಿಯಿಂದ ಗುಡಿಪಲ್ಲಿ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಇವತ್ತು ಭಯಾನಕ ಘಟನೆ ನಡೆದಿದೆ. ಯಮರೂಪಿ ಬೊಲೆರೊ ವಾಹನ ಸಿಕ್ಕ, ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ನಾಲ್ಕು ಮಂದಿಯ ಬಲಿ ಪಡೆದಿದೆ.
ಈ ಭೀಕರ ಅಪಘಾತದಲ್ಲಿ ಮೃತಪಟ್ಟವರೆಲ್ಲಾ ಬಡಪಾಯಿಗಳು. ಅವರೆಲ್ಲಾ ನಿತ್ಯ ಅನ್ನಕ್ಕಾಗಿ ಕೂಲಿ ಮಾಡಿಕೊಂಡು ಮನೆ ಸೇರುವ ತವಕದಲ್ಲಿದ್ದರು. ಕೂಲಿ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ತಮ್ಮೂರಿನತ್ತ ಹೊರಟಿದ್ದರು. ಮತ್ತಿಬ್ಬರು ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಯತ್ತ ಹೊರಟಿದ್ರು. ಈ ವೇಳೆ ರಸ್ತೆಯಲ್ಲಿ ಮೈಮರೆತು ಅಡ್ಡಾದಿಡ್ಡಿಯಾಗಿ ಬಂದ ಬೊಲೆರೊ ವಾಹನ ನಾಲ್ಕು ಮಂದಿಯ ಜೀವ ತೆಗೆದಿದೆ.
/newsfirstlive-kannada/media/post_attachments/wp-content/uploads/2024/12/Kolar-Road-Accident.jpg)
ಬೊಲೆರೊ ಟೆಂಪೊ 3 ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದ್ದು, ದ್ವಿಚಕ್ರ ವಾಹನಗಳಲ್ಲಿ ಇದ್ದ ನಾಲ್ಕು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕೋನಂಗುಂಟೆ ಗ್ರಾಮದ ರಾಧಪ್ಪ (45), ವೆಂಕಟರಾಮಪ್ಪ (45) ಹಾಗೂ ವೆಂಕಟರಾಮಪ್ಪ ಪತ್ನಿ ಅಲುವೇಲಮ್ಮ (30) ಮೃತ ದುರ್ದೈವಿಗಳು.
/newsfirstlive-kannada/media/post_attachments/wp-content/uploads/2024/12/Kolar-Road-Accident-1.jpg)
ಗ್ರಾಮಸ್ಥರು ಕೂಲಿ ಕೆಲಸ ಮಾಡಿಕೊಂಡು ಮನೆಗೆ ದ್ವಿಚಕ್ರ ವಾಹನದಲ್ಲಿ ಹೋಗುವಂತಹ ಸಮಯದಲ್ಲಿ ಈ ಘಟನೆ ನಡೆದಿದೆ. ಬೊಲೊರೊ ವಾಹನ ಸವಾರನ ಅಜಾಗರೂಕತೆ ಮತ್ತು ಅತಿವೇಗವೇ ಈ ಘೋರ ದುರಂತಕ್ಕೆ ಕಾರಣ ಎನ್ನಲಾಗಿದೆ. ಸ್ಥಳದಲ್ಲಿಯೇ ನಾಲ್ವರು ಪ್ರಾಣ ಬಿಟ್ಟಿದ್ದರೆ, ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: BREAKING: ಮುಂಬೈ ಗೇಟ್ ವೇ ಬಳಿ ಘೋರ ದುರಂತ; 110 ಪ್ರಯಾಣಿಕರಿದ್ದ ಬೋಟ್ ಮುಳುಗಡೆ
ಮುಳಬಾಗಿಲು ತಾಲ್ಲೂಕಿನ ನಾಗನಹಳ್ಳಿಯ ವೆಂಕಟರಾಮಪ್ಪ ಹಾಗೂ ಗಾಯತ್ರಿ ದಂಪತಿ ಕೂಲಿ ಕೆಲಸ ಮಾಡಿ ಮನೆಗೆ ವಾಪಸ್ ಆಗುತ್ತಿದ್ದರು. ಕೋನಂಗುಂಟೆ ಗ್ರಾಮದ ವೆಂಕಟರಾಮಪ್ಪ ಹಾಗೂ ಅಲುವೇಲಮ್ಮ ದಂಪತಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಬೊಲೆರೊ ವಾಹನದಲ್ಲಿದ್ದ ಒಬ್ಬರಿಗೆ ಗಾಯಗಳಾಗಿದ್ದು, ಕೋಲಾರ ಜಾಲಪ್ಪ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us