newsfirstkannada.com

Breaking News: ದೆಹಲಿ-ಪುಣೆ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ; ದೆಹಲಿ ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ ಭದ್ರತಾ ಸಿಬ್ಬಂದಿ

Share :

Published August 18, 2023 at 12:36pm

    ಬೆಳಗ್ಗೆ 7.30ರ ಸುಮಾರಿಗೆ ಬಂಬ್ ಬೆದರಿಕೆ ಕರೆ

    UK971 ವಿಮಾನವು ದೆಹಲಿಯಿಂದ ಪುಣೆಗೆ ಬರಬೇಕಿತ್ತು

    ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಹಾರಾಟದಲ್ಲಿ ವ್ಯತ್ಯಯ

ದೆಹಲಿಯಿಂದ ಪುಣೆಗೆ ಬರಬೇಕಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಈ ಹಿನ್ನೆಲೆಯಲ್ಲಿ ವಿಮಾನದ ಹಾರಾಟದಲ್ಲಿ ವ್ಯತ್ಯಯ ಆಗಿದೆ ಎಂದು ವಿಸ್ತಾರ ಸಂಸ್ಥೆ ತಿಳಿಸಿದೆ.

ಇಂದು ಬೆಳಗ್ಗೆ 7.30ರ ಸುಮಾರಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಪ್ರಕರಣ ದಾಖಲಾಗಿದ್ದು, ತನಿಖೆಯೂ ಶುರುವಾಗಿದೆ. UK971 ವಿಮಾನವು ಹಾರಾಟಕ್ಕೆ ಸಿದ್ಧವಾಗಿ ನಿಂತಿತ್ತು. ಆದರೆ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ವ್ಯತ್ಯಯ ಆಗಿದೆ. ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಎಲ್ಲರೂ ಸಹಕಾರ ನಿಡುವಂತೆ ವಿಸ್ತಾರ ಸಂಸ್ಥೆಯ ವಕ್ತಾರ ಮನವಿ ಮಾಡಿಕೊಂಡಿದ್ದಾರೆ.

ಸದ್ಯ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿಯೇ ನಿಂತಿದೆ. ಪ್ರಯಾಣಿಕರ ಎಲ್ಲಾ ಲಗೇಜುಗಳನ್ನು ಪರಿಶೀಲಿಸಿ ಸುರಕ್ಷಿತವಾಗಿ ತರುವ ಪ್ರಯತ್ನ ನಡೆಯುತ್ತಿದೆ. ವಿಳಂಬ ಹಿನ್ನೆಲೆಯಲ್ಲಿ ಪ್ರಯಾಣಿಕರ ಕ್ಷಮೆ ಕೋರುತ್ತಿರುವುದಾಗಿ ವಿಮಾನ ಸಂಸ್ಥೆ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ದೆಹಲಿ-ಪುಣೆ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ; ದೆಹಲಿ ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ ಭದ್ರತಾ ಸಿಬ್ಬಂದಿ

https://newsfirstlive.com/wp-content/uploads/2023/08/FLIGHT.jpg

Load More