newsfirstkannada.com

ಬೆಂಗಳೂರಿನ 6 ಪ್ರತಿಷ್ಠಿತ ಆಸ್ಪತ್ರೆಗಳಿಗೆ ಬಾಂಬ್​ ಬೆದರಿಕೆ.. ಆತಂಕ ಸೃಷ್ಟಿ..!

Share :

Published May 12, 2024 at 9:03pm

    ಬೆಂಗಳೂರಲ್ಲಿ ಮುಂದುವರೆದ ಹುಸಿಬಾಂಬ್ ಬೆದರಿಕೆ ಮೇಲ್

    ಮೇಲ್ ಬಂದ ಕೂಡಲೇ ಅಲರ್ಟ್ ಆದ ನಗರದ ಪೊಲೀಸರು

    6 ಆಸ್ಪತ್ರೆ ಮೇಲ್ ಅಡ್ರೆಸ್​ಗಳಿಗೆ ಸಿಸಿ ಮಾಡಿರುವ ಕಿಡಿಗೇಡಿಗಳು

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಹುಸಿಬಾಂಬ್ ಬೆದರಿಕೆ ಮೇಲ್​ಗಳು ಮುಂದುವರೆದಿದೆ. ಈ ಬಾರಿ ಪೊಲೀಸ್ ಇಲಾಖೆಯ ಸಿಟಿ ಎಸ್.ಬಿ ಖಾತೆಗೆ ಹುಸಿ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಬೆಂಗಳೂರಿನ ಒಟ್ಟು 6 ಆಸ್ಪತ್ರೆಗೆ ಬಾಂಬ್ ಇಡಲಾಗಿದೆ ಎಂದು ಮೇಲ್​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ರಾಧಾ ರಮಣ ಸೀರಿಯಲ್ ನಟಿ ಪವಿತ್ರಾ ಜಯರಾಂ ನಿಧನ; ಅಸಲಿಗೆ ಆಗಿದ್ದೇನು?

ನಾರಾಯಣ ಹೆಲ್ತ್, ಸಾಗರ್ ಆಸ್ಪತ್ರೆ, ಸೆಂಟ್ ಫಿಲೋಮಿನಾ, ಸಮರ್ಥ, ಜೆ ಎಂ ಜೆ ಹಾಗೂ ವಿಮಲ ಆಲಯ್ಯ ಆಸ್ಪತ್ರೆಗಳಿಗೆ ಬಾಂಬ್​ ಇಡಲಾಗಿದೆ ಅಂತ ಮೇಲ್​ ಬಂದ ಕೂಡಲೇ ಪೊಲೀಸ್​ ಅಧಿಕಾರಿಗಳು ಫುಲ್​ ಅಲರ್ಟ್​ ಆಗಿದ್ದಾರೆ.

ಸೆಂಟ್ ಪಿಲೋಮಿನಾ ಆಸ್ಪತ್ರೆಗೆ ದೌಡಾಯಿಸಿದ ಪೊಲೀಸ್​ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ. ತಪಾಸಣೆ ವೇಳೆ ಹುಸಿ‌ ಬಾಂಬ್ ಬೆದರಿಕೆ ಮೇಲ್ ಎಂದು ಬೆಳಕಿಗೆ ಬಂದಿದೆ. ಕೆಲ ಕಿಡಿಗೇಡಿಗಳು ಒಟ್ಟು 6 ಆಸ್ಪತ್ರೆ ಮೇಲ್ ಅಡ್ರೆಸ್​ಗಳಿಗೆ ಸಿಸಿ ಮಾಡಿದ್ದಾರೆ. Courtgroup03 @beeble.com ಎಂಬ ಮೇಲ್​ನಿಂದ ಈ ಸಂದೇಶ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನ 6 ಪ್ರತಿಷ್ಠಿತ ಆಸ್ಪತ್ರೆಗಳಿಗೆ ಬಾಂಬ್​ ಬೆದರಿಕೆ.. ಆತಂಕ ಸೃಷ್ಟಿ..!

https://newsfirstlive.com/wp-content/uploads/2023/12/Bomb-threat.jpg

Load More