/newsfirstlive-kannada/media/post_attachments/wp-content/uploads/2024/05/PUNE_CAR_NEW.jpg)
ಮುಂಬೈ: ಬೈಕ್ಗೆ ಡಿಕ್ಕಿ ಹೊಡೆದು ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳ ಸಾವಿಗೆ ಕಾರಣವಾಗಿದ್ದ ಪುಣೆಯ ಪೋರ್ಷೆ ಕಾರು ಅಪಘಾತದ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಆ ಭೀಕರ ಆಕ್ಸಿಡೆಂಟ್ಗೆ ಸಂಬಂಧಿಸಿದಂತೆ ಅಪ್ರಾಪ್ತ ಆರೋಪಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಪ್ರಾಪ್ತನಿಗೆ ಜಾಮೀನು ಸಿಕ್ಕಿರೋದು ದೇಶಾದ್ಯಂತ ಸಂಚಲನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕೊಲೆ ಕೇಸ್‌ಗೆ 10, 20 ಅಲ್ಲ ಬರೋಬ್ಬರಿ 50 ಸಿಸಿಟಿವಿಯಲ್ಲಿ ಸುಳಿವು.. ದರ್ಶನ್ ಗ್ಯಾಂಗ್‌ಗೆ ಹೊಸ ಆಪತ್ತು!
ಅಪ್ರಾಪ್ತ ಬಾಲಕನೊಬ್ಬ ಕಳೆದ ಮೇ 19ರಂದು ಮದ್ಯಪಾನ ಮಾಡಿ ಐಷಾರಾಮಿ ಪೋರ್ಷೆ ಕಾರಿನಲ್ಲಿ ಅತಿ ವೇಗವಾಗಿ ಬಂದು ಬೈಕ್ಗೆ ಡಿಕ್ಕಿ ಹೊಡೆದು ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣವಾಗಿದ್ದಾನೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಬಾಲಕನನ್ನು ಕಾಪಾಡಲು ಹೋಗಿದ್ದ ಇಡೀ ಕುಟುಂಬವೇ ಜೈಲು ಪಾಲಾಗಿತ್ತು. ಆದರೆ ಇದೀಗ ಆರೋಪಿಯಾಗಿರೋ ಅಪ್ರಾಪ್ತನಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜುವೆನೈಲ್ ಜಸ್ಟಿಸ್ ಬೋರ್ಡ್ ಸದಸ್ಯರಾದ ಎಲ್.ಎನ್. ದಾನವಾಡೆ ಅವರು ಆರೋಪಿಗೆ ಜಾಮೀನು ನೀಡಿದ್ದು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು, ಜಾಮೀನಿನ ಮೇಲಿನ ಆಕ್ರೋಶದ ಬೆನ್ನಲ್ಲೇ ನ್ಯಾಯಾಲಯ ತನ್ನ ಆದೇಶವನ್ನು ಮಾರ್ಪಡಿಸಿತು. ಬಾಲಾಪರಾಧಿಯನ್ನು ಅಬ್ಸರ್ವೇಶನ್ ಹೋಮ್‌ನಲ್ಲಿರಿಸಲಾಗಿತ್ತು. ಪ್ರಕರಣ ಸಂಬಂಧ ಬಾಲಾಪರಾಧಿ ತಂದೆ, ತಾಯಿ, ತಾತನನ್ನೂ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ