newsfirstkannada.com

ರಾಜ್ಯ ರಾಜಕಾರಣದಲ್ಲಿ ಮತ್ತೆ ಹೊಸ ಬಿರುಗಾಳಿ.. ಬಾಂಬೆ ಟೀಂ ‘ಘರ್​ವಾಪ್ಸಿ’ಗೆ ನಡೀತಿದೆ ಮಾಸ್ಟರ್​ ಪ್ಲಾನ್..!

Share :

Published August 16, 2023 at 7:00am

    ಬಾಂಬೆ ಬಾಯ್ಸ್ ಸೇರ್ಪಡೆಗೆ ಕಾಂಗ್ರೆಸ್ ಗ್ರೀನ್ ​ಸಿಗ್ನಲ್..!

    ಯಾವೆಲ್ಲ ಶಾಸಕರು ಮರಳಿಗೂಡಿಗೆ ಸೇರುತ್ತಿದ್ದಾರೆ..?

    ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರ ಗೆಲ್ಲಲು ಪ್ಲಾನ್

ಕಾಂಗ್ರೆಸ್ ಹಾಗೂ ಜೆಡಿಎಸ್​ ಮೈತ್ರಿ ಸರ್ಕಾರಕ್ಕೆ ಬಾಂಬ್ ಇಟ್ಟು ಕೇಸರಿ ಪತಾಕೆ ಹಾರಿಸಿದ್ದ ಬಾಂಬೆ ಟೀಮ್ ಮತ್ತೊಂದು ಸಂಚಲನ ಸೃಷ್ಟಿಸುವ ಸುದ್ದಿ ಕೊಟ್ಟಿದೆ. ರೆಬೆಲ್ 17 ಶಾಸಕರ ಪೈಕಿ ಕೆಲ ಶಾಸಕರು ಮರಳಿ ಕಾಂಗ್ರೆಸ್ ಗೂಡಿಗೆ ಸೇರಲು ಉತ್ಸುಕರಾಗಿದ್ದಾರೆಂಬ ಸುದ್ದಿ ಹಲ್​ಚಲ್ ಎಬ್ಬಿಸಿದೆ. ಇದು ರಾಜ್ಯರಾಜಕಾರಣದ ಪಡಸಾಲೆಯಲ್ಲಿ ಬಿಸಿ ಬಿಸಿ ಬಾತ್​ ಆಗಿದೆ.

2019 ರಲ್ಲಿ ಕಾಂಗ್ರೆಸ್​ ಹಾಗೂ ಜೆಡಿಎಸ್​ ಮೈತ್ರಿ ಸರ್ಕಾರಕ್ಕೆ ಬಾಂಬ್​ ಇಟ್ಟು ಉಡಾಯಿಸಿ ಹೊಸ ಸರ್ಕಾರದ ಅಸ್ತಿತ್ವಕ್ಕೆ ಕಾರಣವಾಗಿದ್ದ ಬಾಂಬೆ ಟೀಮ್​ ಮತ್ತೆ ಘರ್​ವಾಪ್ಸಿ ಮಾಡೋಕೆ ಮುಂದಾಗಿದೆ. ಅಂದು ಮೈತ್ರಿ ಸರ್ಕಾರಕ್ಕೆ ಗುದ್ದು ಕೊಟ್ಟು ಕಮಲ ಹಿಡಿದಿದ್ದ ಕಾಂಗ್ರೆಸ್ ಹಾಗೂ ದಳ ನಾಯಕರು ಈಗ ಮತ್ತೆ ಕೈ ಹಿಡಿಯೋಕೆ ಮುಂದಾಗಿದ್ದಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿಸಿದೆ. ಇದು ಕೇಸರಿ ಕಲಿಗಳಲ್ಲಿ ನಡುಕ ಸೃಷ್ಟಿಸಿದೆ.

ಮತ್ತೆ ‘ಕೈ’ ಹಿಡಿಯಲು ಸಜ್ಜಾಗಿದ್ದಾರಾ ಬಾಂಬೆ ಟೀಮ್​?

ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್​ ಈ ಲೋಕ ಸಮರದ ಮೇಲೆ ಕಣ್ಣಿಟ್ಟಿದೆ. ಅದಕ್ಕಾಗಿ ಎಲ್ಲಾ ಆಯಾಮದಲ್ಲೂ ಸಿದ್ಧತೆ ನಡೆಸ್ತಿದೆ. ಈ ಸಮರದ ಅಂಗವಾಗಿ, ಲೋಕಸಭೆಯಲ್ಲೂ ಕಮಾಲ್ ಮಾಡಲು ಕೈ ಪಾಳಯ ಅಣಿಯಾಗಿದೆ. ಇದಕ್ಕಾಗಿ ಮತ್ತೆ ತಮ್ಮ ಹಳೆಯ ತಂಡವನ್ನು ಘರ್​ವಾಪ್ಸಿ ಮಾಡಿಸಲು ಮುಂದಾಗಿದೆ ಅನ್ನೋದು ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಇದರಂತೆ ಬಾಂಬೆ ಬಾಯ್ಸ್ ಮತ್ತೆ ಕೈ ಹಿಡಿಯಲು ಸಜ್ಜಾಗಿದ್ದಾರೆ ಅನ್ನೋ ಸುದ್ದಿ ಹಲ್​ಚಲ್ ಸೃಷ್ಟಿಸಿದೆ. ಅಲ್ಲದೇ ಮೊನ್ನೆ ಮಾಜಿ ಸಚಿವ ಎಸ್​ಟಿ ಸೋಮಶೇಖರ್, ಡಿ.ಕೆ.ಶಿವಕುಮಾರ್ ನಮ್ಮ ಗುರು ಅಂದಿದ್ದು ಸದ್ಯ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ. ಇದು ಬಾಂಬೆ ಟೀಮ್ ವಾಪಸ್ ಕೈ ಹಿಡಿತಾರೆ ಅನ್ನೋ ಮಾತಿಗೆ ಪುಷ್ಠಿ ನೀಡುವಂತಿದೆ.

ಎಸ್​ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್, ಬೈರತಿ ಬಸವರಾಜ್

ನನ್ನ ಕ್ಷೇತ್ರ, ನಮ್ಮ ನಾಯಕರು, ಆಗಿನ ನಾಯಕರು, ಇವಾಗಿನ ನಾಯಕರು ಅಂತಲ್ಲ. ನಾನು ಇವತ್ತು ಈ ಮಟ್ಟಕ್ಕೆ ಬೆಳೆಯಬೇಕು ಅಂದರೆ ಅದಕ್ಕೆ ಕಾರಣ ಡಿಕೆ ಶಿವಕುಮಾರ್. ಈ ಮಾತನ್ನು ನಾನು ಇವಾಗಿಂದ ಹೇಳುತ್ತಿಲ್ಲ. ಕಳೆದ 10 ವರ್ಷಗಳಿಂದಲೂ ಹೇಳುತ್ತಿದ್ದೇನೆ. ಇವತ್ತು ಅವರು ನನ್ನ ಗುರುಗಳೇ, ಹಿಂದಿಯೂ ಗುರುಗಳೇ, ಯಾವತ್ತೂ ಅವರು ನನ್ನ ಗುರುಗಳೇ -ಎಸ್​ಟಿ ಸೋಮಶೇಖರ್, ಮಾಜಿ ಸಚಿವ
ಈಗಾಗಲೇ ಬಾಂಬೆ ಟೀಮ್​ ಕಾಂಗ್ರೆಸ್ ಸೇರ್ಪಡೆ ಬಗ್ಗೆ ನಾಯಕರು ಮಾತುಕತೆ ನಡೆಸಿದ್ದಾರಂತೆ. ಅಲ್ಲದೇ ಬಾಂಬೆ ಟೀಂ ಸೇರ್ಪಡೆಗೆ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಆಸಕ್ತಿ ವಹಿಸಿದ್ದಾರಂತೆ. ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್​ ಪಕ್ಷ ತೊರೆದವರನ್ನು ಸೆಳೆಯಲು ಲೆಕ್ಕಾಚಾರ ಹಾಕಿದೆ.

ಮರಳಿ ಗೂಡಿಗೆ ಬಾಂಬೆ ತಂಡ?

  • ಎಸ್​ಟಿ ಸೋಮಶೇಖರ್​​, ಯಶವಂತಪುರ
  • ಬೈರತಿ ಬಸವರಾಜ್, ಕೆ.ಆರ್​ ಪುರಂ
  • ಶಿವರಾಮ ಹೆಬ್ಬಾರ್, ಯಲ್ಲಾಪುರ
  • ಕೆ. ಗೋಪಾಲಯ್ಯ, ಮಹಾಲಕ್ಷ್ಮೀ ಬಡಾವಣೆ

ಬಾಂಬೆ ಟೀಮ್​ನ್ನು ವಾಪಸ್​ ಸೆಳೆಯಲು ಕಾಂಗ್ರೆಸ್​ನದ್ದು ಬೇರೆಯದೇ ಲೆಕ್ಕಾಚಾರ ಇದೆ.

ಕಾಂಗ್ರೆಸ್ ‘ಲೋಕ’ ಲೆಕ್ಕಾಚಾರ

  • ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರ ಗೆಲ್ಲಲು ಪ್ಲಾನ್
  • ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಕೈಪಡೆ
  • ಹಲವು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆ ಹಿನ್ನೆಲೆ
  • ಬಾಂಬೆ ತಂಡ ವಾಪಸ್​ ಬಂದ್ರೆ ಅನುಕೂಲವೆಂಬ ಲೆಕ್ಕಾಚಾರ
  • ಮುನಿರತ್ನ ವಿಚಾರದಲ್ಲಿ ಸ್ಪಷ್ಟ ಭರವಸೆ ನೀಡದ ಡಿಕೆಶಿ
  • ಮುನಿರತ್ನ ಬಗ್ಗೆ ಡಿ.ಕೆ.ಸುರೇಶ್ ಕಡೆ ಬೆರಳು ಮಾಡಿದ ಡಿಕೆ

ಒಂದ್ಕಡೆ ಕಾಂಗ್ರೆಸ್​ ಅಧಿಕಾರಕ್ಕೆ ಬಂದು ಎರಡು ತಿಂಗಳಾಗಿದೆಯಷ್ಟೆ. ಅಷ್ಟರಲ್ಲಾಗಲೇ 30 ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಸಿಎಂಗೆ ಪತ್ರ ಬರೆದಿದ್ದಾರೆ. ಇದಲ್ಲದೆ ಸಚಿವಗಿರಿ ಸಿಗದಿದ್ದಕ್ಕೆ ಕೆಲವರು ಅಸಮಾಧಾನಗೊಂಡಿದ್ದಾರೆ. ಇದೆಲ್ಲದರ ನಡುವೆ ಈಗ ಬಾಂಬೆ ಟೀಮ್ ವಾಪಸ್ ಕಾಂಗ್ರೆಸ್​ಗೆ ಬಂದ್ರೆ ಅವರಿಗೆ ಯಾವ ಸ್ಥಾನಮಾನ ನೀಡಲಾಗುತ್ತದೆ ಅಂತ ಕಾದುನೋಡ್ಬೇಕು.

ವಿಶೇಷ ವರದಿ: ಹರೀಶ್​ ನ್ಯೂಸ್​ ಫಸ್ಟ್​ ಬೆಂಗಳೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯ ರಾಜಕಾರಣದಲ್ಲಿ ಮತ್ತೆ ಹೊಸ ಬಿರುಗಾಳಿ.. ಬಾಂಬೆ ಟೀಂ ‘ಘರ್​ವಾಪ್ಸಿ’ಗೆ ನಡೀತಿದೆ ಮಾಸ್ಟರ್​ ಪ್ಲಾನ್..!

https://newsfirstlive.com/wp-content/uploads/2023/08/STSomashekhar.jpg

Load More