ಫೋನ್​ ಖರೀದಿಗೆ ಸಾವಿರ, ಸಾವಿರ ಖರ್ಚು ಮಾಡ್ತೀರಿ.. ಆದರೆ ಕೊನೆಯಲ್ಲಿ ಈ ತಪ್ಪು ಮಾಡದಿರಿ..

author-image
Ganesh
Updated On
ಫೋನ್​ ಖರೀದಿಗೆ ಸಾವಿರ, ಸಾವಿರ ಖರ್ಚು ಮಾಡ್ತೀರಿ.. ಆದರೆ ಕೊನೆಯಲ್ಲಿ ಈ ತಪ್ಪು ಮಾಡದಿರಿ..
Advertisment
  • ಸಿಕ್ಕ ಸಿಕ್ಕ ಚಾರ್ಜರ್​​ ಬಳಸೋದ್ರಿಂದ ಏನಾಗುತ್ತದೆ?
  • ಮೊಬೈಲ್ ಚಾರ್ಜ್​​​ಗೆ ಹಾಕಿದ ಮೇಲೆ ಏನು ಮಾಡಬಾರದು?
  • ಚಾರ್ಜಿಂಗ್​​ನಲ್ಲಿದ್ದಾಗ ಫೋನ್ ಯಾಕೆ ಸಿಡಿಯುತ್ತವೆ..?

ಸ್ಮಾರ್ಟ್​ ಫೋನ್​ಗಳು ಸ್ಫೋಟಗೊಳ್ತಿರುವ ಸುದ್ದಿಯನ್ನು ನೀವು ಆಗಾಗ ಕೇಳ್ತಿರ್ತೀರಿ. ಅದಕ್ಕೆಲ್ಲ ಕಾರಣ ನೀವು ಮಾಡುವ ಒಂದೇ ಒಂದು ಸಣ್ಣ ತಪ್ಪು. ಫೋನ್ ಖರೀದಿಗೆ ಸಾವಿರ, ಸಾವಿರ ಖರ್ಚು ಮಾಡುವ ನಾವು, ಕೊನೆಯಲ್ಲಿ ಚಿಕ್ಕ ತಪ್ಪು ಮಾಡ್ತೇವೆ.. ಇದರಿಂದ ನಿಮ್ಮ ಫೋನ್​​​ಗಳು ಅಪಾಯಕ್ಕೆ ಸಿಲುಕುತ್ತವೆ..

ಸ್ಥಳೀಯ ಅಥವಾ ಅಗ್ಗದ ಚಾರ್ಜರ್ ಬಳಕೆ..

ದುಬಾರಿ ಮೂಲ ಚಾರ್ಜರ್ ಬದಲಿಗೆ ಅಗ್ಗದ ಸ್ಥಳೀಯ ಚಾರ್ಜರ್ ಕೆಲಸ ಮಾಡುತ್ತದೆ ಅಂತಾ ಅನೇಕರು ಭಾವಿಸುತ್ತಾರೆ. ಈ ಅಭ್ಯಾಸವು ತುಂಬಾನೇ ಅಪಾಯಕಾರಿ. ಪ್ರತಿಯೊಂದು ಫೋನ್‌ಗೆ ತನ್ನದೇ ಆದ ವಿದ್ಯುತ್ ಅವಶ್ಯಕತೆ ಇರುತ್ತದೆ. ನೀವು ಯಾವುದೋ ಚಾರ್ಜರ್​ ಬಳಕೆ ಮಾಡೋದ್ರಿಂದ ನಿಮ್ಮ ಫೋನ್​​ನ ಬ್ಯಾಲೆನ್ಸ್​ ಹಾಳು ಮಾಡುತ್ತದೆ. ಇದು ಬ್ಯಾಟರಿಗೆ ದಕ್ಕೆ ಬರೋದು ಮಾತ್ರವಲ್ಲದೇ ಓವರ್‌ಲೋಡ್‌ನಿಂದ ಸ್ಫೋಟಗೊಂಡರೂ ಅಚ್ಚರಿ ಇಲ್ಲ.

ಚಾರ್ಜ್ ಮಾಡುವಾಗ ಫೋನ್‌ ಬಳಕೆ

ಫೋನ್ ಚಾರ್ಜ್​ಗೆ ಹಾಕಿದಾಗ ಬಳಸಬಾರದು. ಆಟ ಆಡುವುದು, ವೀಡಿಯೊ ನೋಡುವುದು ಅಥವಾ ಫೋನ್ ಕರೆ ಮಾಡೋದ್ರಿಂದ ಅದರ ತಾಪಮಾನ ಹೆಚ್ಚಾಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ತುಂಬಾನೇ ಹುಷಾರಾಗಿರಬೇಕು. ಫೋನ್ ಅತಿಯಾಗಿ ಬಿಸಿ ಆಗೋದ್ರಿಂದ ಫೋನ್​​ನಲ್ಲಿರುವ ವೈರಿಂಗ್ ಮೇಲೆ ನೇರ ಪರಿಣಾಮ ಬೀರುತ್ತದೆ..

ಇದನ್ನೂ ಓದಿ: ಟೆಸ್ಟ್ ಸರಣಿ ಗೆಲ್ಲಲು.. ಕೊಹ್ಲಿ ಸ್ಥಾನದಲ್ಲಿ ಯಾರು ಬ್ಯಾಟಿಂಗ್ ಮಾಡಬೇಕು ಎಂದು ತಿಳಿಸಿದ ದಿನೇಶ್ ಕಾರ್ತಿಕ್..!

ಫೋನ್ ಕವರ್ ತೆಗೆಯದೆಯೇ ಚಾರ್ಜ್

ಫೋನ್ ಕವರ್ ಶಾಖವನ್ನು ಹೊರಹೋಗಲು ಬಿಡುವುದಿಲ್ಲ. ಚಾರ್ಜ್ ಮಾಡುವಾಗ ಫೋನ್ ಸ್ವಲ್ಪ ಬಿಸಿಯಾಗುತ್ತದೆ. ಕವರ್ ಮೂಲಕ ಶಾಖವು ಹೊರಹೋಗದಿದ್ದರೆ ಸಾಧನವು ಒಳಗಿನಿಂದ ತುಂಬಾ ಬಿಸಿಯಾಗಬಹುದು. ನಿಮ್ಮ ಫೋನ್ ಈ ರೀತಿಯ ತೊಂದರೆಯಲ್ಲಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ..

ಬ್ಯಾಟರಿ 100% ವರೆಗೆ ಚಾರ್ಜ್ ಮಾಡುವುದು

ಫೋನ್ ಸಂಪೂರ್ಣ ಚಾರ್ಜ್ ಮಾಡುವುದು ಸರಿ ಎಂದು ಹಲವರು ಭಾವಿಸುತ್ತಾರೆ. ವಾಸ್ತವದಲ್ಲಿ ಇದು ಬ್ಯಾಟರಿಯ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು 80-85% ವರೆಗೆ ಚಾರ್ಜ್ ಮಾಡಿದರೂ ಇಡೀ ದಿನ ಆರಾಮವಾಗಿ ಕಾರ್ಯನಿರ್ವಹಿಸುತ್ತವೆ. ಹೆಚ್ಚು ಚಾರ್ಜ್ ಮಾಡುವುದರಿಂದ ಬ್ಯಾಟರಿಯ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಅದು ಸಿಡಿಯುವ ಅಪಾಯ ಹೆಚ್ಚಾಗಿರುತ್ತದೆ..

ಪೂರ್ಣ ಚಾರ್ಜ್ ನಂತರವೂ ಚಾರ್ಜರ್‌ನಲ್ಲಿ ಪ್ಲಗ್ ಮಾಡಿ ಇಡೋದು..

ಫೋನ್ 100% ಚಾರ್ಜ್ ಆದಾಗಲೂ ಚಾರ್ಜ್‌ನಲ್ಲಿಯೇ ಬಿಡೋದು ತುಂಬಾನೇ ಅಪಾಯ. ಇದರಿಂದ ಬ್ಯಾಟರಿ ಬೇಗ ಹಾನಿ ಆಗುತ್ತದೆ. ಸ್ಫೋಟ ಕೂಡ ಆಗಬಹುದು.

ಎಚ್ಚರಿಕೆ..

ನಿಮ್ಮ ಫೋನ್ ದೀರ್ಘಕಾಲ ಬಾಳಿಕೆ ಬರಬೇಕು ಅಂದರೆ ಈ ಐದು ತಪ್ಪು ಮಾಡಲೇಬೇಡಿ. ಸ್ಮಾರ್ಟ್‌ಫೋನ್ ಒಂದು ತಂತ್ರಜ್ಞಾನ. ನಾವು ಮಾಡುವ ಅಜಾಗರೂಕತೆಯು ದೊಡ್ಡ ಹಾನಿಯನ್ನೇ ಮಾಡಬಹುದು. ಹಾಗಾಗಿ ನಿಮ್ಮ ಫೋನ್​ಗಳ ಮೇಲೆ ಕಾಳಜಿ ಇರಲಿ. ಸಾವಿರ ಸಾವಿರ ಕೊಟ್ಟು ಫೋನ್ ಖರೀದಿಸಿದ ಬೆನ್ನಲ್ಲೇ, ಅದಕ್ಕೆ ಯೋಗ್ಯವಾಗಿರುವ ಚಾರ್ಜರ್​ ಖರೀದಿಸೋದನ್ನು ಮರೆಯದಿರಿ.

ಇದನ್ನೂ ಓದಿ: ಗೋಲ್ಡ್​ ಸುರೇಶ್​​ಗೆ ಬಿಗ್ ಶಾಕ್ ನೀಡಲು ಮುಂದಾದ ಯುವಕ.. ವಂಚನೆ ಕೇಸ್​​ಗೆ ಟ್ವಿಸ್ಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment