/newsfirstlive-kannada/media/post_attachments/wp-content/uploads/2024/11/Rohit-Sharma_IND-Test.jpg)
ಪ್ರತಿಷ್ಠಿತ ಬಾರ್ಡರ್​-ಗವಾಸ್ಕರ್ ಟೆಸ್ಟ್​ ಸರಣಿಗೆ ಕೌಂಟ್​ಡೌನ್ ಶುರುವಾಗಿದೆ. ತವರಿನಲ್ಲಿ ಕಿವೀಸ್​ ಎದುರು ವೈಟ್​​ವಾಷ್​ ಮುಖಭಂಗ ಅನುಭವಿಸಿರುವ ಟೀಮ್​ ಇಂಡಿಯಾ ಕಾಂಗರೂ ನಾಡಲ್ಲಿ ಸೋಲಿನ ಕಹಿ ನೆನಪು ಮರೆಯೋ ಲೆಕ್ಕಾಚಾರದಲ್ಲಿದೆ. ಅಖಾಡಕ್ಕಿಳಿಯುವ ಮುನ್ನವೇ ಟೀಮ್ ಇಂಡಿಯಾ ಗೊಂದಲದ ಗೂಡಾಗಿ ಮಾರ್ಪಟ್ಟಿದೆ.
ನವೆಂಬರ್ 22. ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್​ ಸರಣಿಯ ಕಿಕ್​ ಸ್ಟಾರ್ಟ್ ಆಗಲಿದೆ. ಆಸ್ಟ್ರೇಲಿಯಾ ನೆಲದಲ್ಲಿ ಟೀಮ್ ಇಂಡಿಯಾ ಗೆದ್ದೇ ತೀರುವ ಹಠದಲ್ಲಿದೆ. ಅದರಲ್ಲೂ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ದೃಷ್ಟಿಯಿಂದ ಚಮತ್ಕಾರ ಮಾಡಲು ಹವಣಿಸುತ್ತಿದೆ.
ಟೆನ್ಶನ್.. ಟೆನ್ಶನ್..!
ಇದನ್ನೂ ಓದಿ:ಭದ್ರ ಹುಲಿ ಸಂರಕ್ಷಿತ ಅರಣ್ಯದಿಂದ ಗ್ರಾಮಗಳಿಗೆ ನುಗ್ಗುತ್ತಿವೆ ವನ್ಯಮೃಗಗಳು! ಸಫಾರಿ ವಿರುದ್ಧ ಸಿಡಿದೆದ್ದ ಸ್ಥಳೀಯರು!
/newsfirstlive-kannada/media/post_attachments/wp-content/uploads/2024/11/ROHIT_SHARMA-5.jpg)
ಟೆಸ್ಟ್​ ಸರಣಿಗೆ ಪ್ರಿಪರೇಷನ್ ಜೋರಾಗಿ ನಡೆಯುತ್ತಿದೆ. ತೆರೆಯ ಹಿಂದೆ ಸ್ಟ್ರಾಟರ್ಜಿಗಳು, ಗೇಮ್​ಪ್ಲಾನ್​ಗಳು ರೆಡಿಯಾಗ್ತಿವೆ. ಒಂದೆಡೆ ಭರ್ಜರಿ ತಯಾರಿ ನಡೆಯುತ್ತಿದ್ದರೆ ಇನ್ನೊಂದೆಡೆ ಟೀಮ್​ ಇಂಡಿಯಾದಲ್ಲಿ ಉದ್ಭವಿಸಿರುವ ಎರಡು ಬಿಗ್ ಪ್ರಾಬ್ಲಂಗಳಿಗೆ ಉತ್ತರವೇ ಸಿಗ್ತಿಲ್ಲ. ಒಂದು ಬ್ಯಾಟಿಂಗ್​ನ ಸಮಸ್ಯೆ, ಮತ್ತೊಂದು ಬೌಲಿಂಗ್ ಸಮಸ್ಯೆ.
ಓಪನರ್​ ಯಾರು..?
ಟೀಮ್ ಇಂಡಿಯಾದಲ್ಲಿ ಮೂಡಿರುವ ಬಹುದೊಡ್ಡ ಪ್ರಶ್ನೆ ಓಪನರ್ ಯಾರು? ಅನ್ನೋದು. ಮೊದಲ ಟೆಸ್ಟ್​ ಪಂದ್ಯಕ್ಕೆ ರೋಹಿತ್ ಶರ್ಮಾ​ ಅಲಭ್ಯತೆರಾಗೋ ಸಾಧ್ಯತೆ ದಟ್ಟವಾಗಿದೆ. ರೋಹಿತ್​ ಅಲಭ್ಯತೆಯಲ್ಲಿ ಜೈಸ್ವಾಲ್​ ಜೊತೆ ಇನ್ನಿಂಗ್ಸ್​ ಆರಂಭಿಸೋದ್ಯಾರು ಅನ್ನೋದು ಪ್ರಶ್ನೆಯಾಗಿದೆ. ತಂಡದಲ್ಲಿರೋ ಕೆ.ಎಲ್.ರಾಹುಲ್, ಅಭಿಮನ್ಯು ಈಶ್ವರನ್ ತಂಡದಲ್ಲಿರೋ ಬ್ಯಾಕ್​ ಅಪ್​​ ಓಪನರ್ಸ್​. ಆದ್ರೆ ಇವರಿಬ್ಬರು ಫ್ಲಾಪ್​ ಸ್ಟಾರ್ಸ್​.
ಯಾರಿಗೆ ಚಾನ್ಸ್​..? ​
ಕೆ.ಎಲ್.ರಾಹುಲ್, ಅಭಿಮನ್ಯು ಈಶ್ವರನ್, ಇವರಿಬ್ಬರನ್ನೂ ಟೆಸ್ಟ್​ ಸರಣಿಗೂ ಮುನ್ನ ಸಿದ್ಧತೆಯ ಭಾಗವಾಗಿ ಆಸ್ಟ್ರೇಲಿಯಾ ಎ ವಿರುದ್ಧ ಅನ್​ಅಫಿಶಿಯಲ್​ ಟೆಸ್ಟ್​ ಪಂದ್ಯದಲ್ಲಿ ಆಡಿಸಲಾಗಿತ್ತು. ಇಬ್ಬರೂ ಫ್ಲಾಪ್​ ಶೋ ನೀಡಿದ್ದಾರೆ. ಆಸ್ಟ್ರೇಲಿಯಾ ಎ ವಿರುದ್ಧವೇ ಪರದಾಡಿರುವ ಅಭಿಮನ್ಯು ಈಶ್ವರನ್​​​​​​​, 4 ಇನ್ನಿಂಗ್ಸ್​ಗಳಿಂದ ಕೇವಲ 36 ರನ್ ಕಲೆ ಹಾಕಿದ್ದಾರೆ.
ನ್ಯೂಜಿಲೆಂಡ್​ ಎದುರು ಫೇಲ್ಯೂರ್ ಆಗಿದ್ದ ಕೆ.ಎಲ್.ರಾಹುಲ್​​​​​​​​​, ಆಸ್ಟ್ರೇಲಿಯಾ ಎ ಎದುರು ಕಳಪೆ ಪ್ರದರ್ಶನ ನೀಡಿದ್ದಾರೆ. ಆಡಿದ ಒಂದು ಪಂದ್ಯದಲ್ಲಿ ರಾಹುಲ್ ಕೇವಲ 14 ರನ್​ಗಳಿಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ 4 ರನ್​ಗೆ ಆಟ ಮುಗಿಸಿದ್ರೆ, ಎರಡನೇ ಇನ್ನಿಂಗ್ಸ್​ನಲ್ಲಿ 10 ರನ್​ಗಳಿಸಿ ಅಚ್ಚರಿಯ ರೀತಿಯಲ್ಲಿ ಔಟಾಗಿದ್ದಾರೆ.
ಆಸ್ಟ್ರೇಲಿಯಾ ಎ ವಿರುದ್ಧ ಇಬ್ಬರು ಬ್ಯಾಕ್​ ಅಪ್​ ಓಪನರ್ಸ್​ ಕಳಪೆ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಇಬ್ಬರು ಫ್ಲಾಪ್​ ಸ್ಟಾರ್​​ಗಳ ಪೈಕಿ ಯಾರನ್ನು ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸೋಕೆ ಕಳಿಸಬೇಕು ಅನ್ನೋದು ಉತ್ತರ ಸಿಗದ ಪ್ರಶ್ನೆಯಾಗಿ ಟೀಮ್​ ಮ್ಯಾನೇಜ್​ಮೆಂಟ್​ನ​ ಕಾಡ್ತಿದೆ.
/newsfirstlive-kannada/media/post_attachments/wp-content/uploads/2024/11/Kohli_Rohit_Test.jpg)
ಬೂಮ್ರಾಗೆ ಪಾರ್ಟನರ್ ಯಾರು?
ಆಸ್ಟ್ರೇಲಿಯನ್ ಕಂಡೀಷನ್ಸ್​ನಲ್ಲಿ ಪೇಸರ್​ಗಳ ನಡೆಯೋದು ದರ್ಬಾರ್ ಫಿಕ್ಸ್. ಜಸ್​​ಪ್ರಿತ್​ ಫಸ್ಟ್​ ಚಾಯ್ಸ್​ ವೇಗಿ ಅನ್ನೋದು ಕನ್​ಫರ್ಮ್​. ಜಸ್​ಪ್ರಿತ್ ಬೂಮ್ರಾ ಜೊತೆ ಚೆಂಡು ಹಂಚಿಕೊಳ್ಳುವುದು ಯಾರು ಅನ್ನೋ ಪ್ರಶ್ನೆ ಕಾಡ್ತಿದೆ. ಮೊಹಮ್ಮದ್​ ಸಿರಾಜ್ ತವರಿನಲ್ಲಿ ಆಡಿದ ಟೆಸ್ಟ್​ನಲ್ಲಿ ವಿಕೆಟ್ ಪಡೆಯಲು ಪರದಾಡಿದ್ದಾರೆ. ಆಸ್ಟ್ರೇಲಿಯನ್ ಕಂಡೀಷನ್ಸ್​ನಲ್ಲಿ ಸಾಲಿಡ್ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಹೀಗಾಗಿ 2ನೇ ವೇಗಿಯಾಗಿ ಸಿಡಿಗುಂಡು ಸಿರಾಜ್ ಚೆಂಡು ಹಂಚಿಕೊಳ್ಳೋ ಸಾಧ್ಯತೆ ದಟ್ಟವಾಗಿದೆ. ಮೂರನೇ ವೇಗಿ ಯಾರು ಆಗ್ತಾರೆ ಅನ್ನೋ ಪ್ರಶ್ನೆಗೆ ಸದ್ಯ ಉತ್ತರ ಇಲ್ಲ.
3ನೇ ವೇಗಿಯಾಗಿ ಕಣಕ್ಕಿಳಿಯಲು ಪ್ರಸಿದ್ಧ್​ ಕೃಷ್ಣ, ಆಕಾಶ್ ದೀಪ್, ಹರ್ಷಿತ್ ರಾಣಾ ರೇಸ್​ನಲ್ಲಿದ್ದಾರೆ. ಈ ಪೈಕಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೆಸ್ಟ್​ ಚಾಯ್ಸ್​ ಎನಿಸಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ಎ ಎದುರು ಅನ್ ​ಅಫಿಶಿಯಲ್​ ಟೆಸ್ಟ್​ನಲ್ಲಿ ವಿಕೆಟ್​​​​​ ಬೇಟೆಯಾಡಿರುವ ಪ್ರಸಿದ್ಧ್​, 2 ಪಂದ್ಯಗಳಿಂದ 10 ವಿಕೆಟ್ ಉರುಳಿಸಿದ್ದಾರೆ. ಜೊತೆಗೆ ಆಸ್ಟ್ರೇಲಿಯನ್ ಕಂಡೀಷನ್ಸ್​ನಲ್ಲಿ ಕಮಾಲ್ ಮಾಡಬಲ್ಲ ಸಾಮರ್ಥ್ಯ ಪ್ರಸಿದ್ದ್​ಗಿದೆ.
ಒಳ್ಳೆ ಪೇಸ್​ ಹೊಂದಿರುವ ಹರ್ಷಿತ್​ ರಾಣಾನ ಆಸಿಸ್​ ಕಂಡಿಷನ್ಸ್​ನಲ್ಲಿ ತಳ್ಳಿ ಹಾಕುವಂತಿಲ್ಲ. ಆಕಾಶ್​ ದೀಪ್​ ಕೂಡ ಡಿಸೆಂಟ್​ ಪರ್ಫಾಮೆನ್ಸ್​ನಿಂದ ಗಮನ ಸೆಳೆದಿದ್ದಾರೆ. ಹೀಗಾಗಿ 3ನೇ ವೇಗಿಯಾಗಿ ಕಣಕ್ಕಿಳಿಯಲು ಪೈಪೋಟಿ ಜೋರಾಗಿದ್ದು, ಇದು ಟೀಮ್ ಮ್ಯಾನೇಜ್​ಮೆಂಟ್​ಗೆ ದೊಡ್ಡ ತಲೆ ನೋವಾಗಿದೆ. ​ ಬಾರ್ಡರ್​ ಗವಾಸ್ಕರ್ ಟೆಸ್ಟ್​ ಸರಣಿಗೂ ಮುನ್ನ ಟೀಮ್ ಇಂಡಿಯಾ ಗೊಂದಲದ ಗೂಡಾಗಿದೆ. ಎರಡು ಪ್ರಶ್ನೆಗಳಿಗೆ ಉತ್ತರ ಹುಡುಕೋದು ಮ್ಯಾನೇಜ್​ಮೆಂಟ್​, ಟೆನ್ಶನ್​​ ಹೆಚ್ಚಿಸಿದೆ. ಡಿಸಿಷನ್​ ಮೇಕಿಂಗ್​ನಲ್ಲಿ ಸ್ವಲ್ಪ ಎಡವಿದ್ರೂ, ತಂಡಕ್ಕೆ ಹಿನ್ನಡೆಯಾಗಲಿದೆ. ಹೀಗಾಗಿ ಕೋಚ್​ ಗಂಭೀರ್​ & ಟೀಮ್​ನ ನಿರ್ಧಾರ ಎನಿರಲಿದೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಟೀಂ ಇಂಡಿಯಾಗೆ ಹೀನಾಯ ಸೋಲು; ಸೋತರೂ ದಕ್ಷಿಣ ಆಫ್ರಿಕಾಗೆ ನಡುಕ ಹುಟ್ಟಿಸಿದ ಚಕ್ರವರ್ತಿ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us