BSFನಲ್ಲಿ ಅನುಭವಸ್ಥರಿಗೆ ಉದ್ಯೋಗ ಅವಕಾಶ.. ಮಾಸಿಕ ವೇತನ ಶ್ರೇಣಿ 85,000 ರೂಪಾಯಿ

author-image
Bheemappa
Updated On
BSFನಲ್ಲಿ ಅನುಭವಸ್ಥರಿಗೆ ಉದ್ಯೋಗ ಅವಕಾಶ.. ಮಾಸಿಕ ವೇತನ ಶ್ರೇಣಿ 85,000 ರೂಪಾಯಿ
Advertisment
  • ಯಾವ ಯಾವ ಪದವಿ ಮಾಡಿದವರು ಇವುಗಳಿಗೆ ಅರ್ಹರು?
  • ನೀವು ಅರ್ಜಿ ಸಲ್ಲಿಕೆ ಮಾಡಬಹುದಾ ಎಂದು ಇದನ್ನು ಓದಿ.?
  • ಮಹಿಳೆಯರು, ಪುರುಷರು ಇಬ್ಬರೂ ಈ ಕೆಲಸಕ್ಕೆ ಅರ್ಹರು

ಗಡಿ ಭದ್ರತಾ ಪಡೆ (ಬಿಎಸ್​ಎಫ್​) ನೇಮಕಾತಿ ಮಾಡುತ್ತಿದ್ದು ನುರಿತ ಹಾಗೂ ಉದ್ಯೋಗದಲ್ಲಿ ಸಾಕಷ್ಟು ಅನುಭವ ಇರುವವರಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅಂದರೆ ಈ ಉದ್ಯೋಗಗಳು ಹಿರಿಯ ವ್ಯಕ್ತಿಗಳಿಗೆ ಸಂಬಂಸಿದ್ದು ಆಗಿವೆ. ಇವೆಲ್ಲಾ ಕೇಂದ್ರ ಸರ್ಕಾರದಡಿ ಬರುವ ಇಲಾಖೆಯ ಉದ್ಯೋಗಗಳು ಆಗಿದ್ದರಿಂದ ಉತ್ತಮ ಮಟ್ಟದ ವೇತನ ಶ್ರೇಣಿ ಇರುತ್ತಿದೆ. ಹೀಗಾಗಿ ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹದು.

ಇವೆಲ್ಲಾ ಉನ್ನತ ಹುದ್ದೆಗಳಾಗಿದ್ದು ಉದ್ಯೋಗದಲ್ಲಿ ಹೆಚ್ಚು ಅನುಭವ ಇರುವವರಿಗೆ ಅವಕಾಶ ನೀಡಲಾಗಿದೆ. ಮಹಿಳಾ ಮತ್ತು ಪುರುಷ ಇಬ್ಬರಿಗೂ ಇಲ್ಲಿ ಅವಕಾಶ ಇದೆ. ಇಂತಿಷ್ಟು ವರ್ಷ ಎಂದು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಕೊನೆ ದಿನಾಂಕದ ಒಳಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈ ಕೆಲಸಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ, ಅನುಭವ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಇತ್ಯಾದಿ ಮಾಹಿತಿ ಇಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಆಸಕ್ತಿಯಿಂದ ಈ ಎಲ್ಲವನ್ನು ಓದಿಕೊಳ್ಳಬೇಕು.

ಎಷ್ಟು ಉದ್ಯೋಗಗಳು- 25

ಕೆಲಸದ ಹೆಸರುಗಳು- ಸರ್ಜನ್ (Surgeon), Gynac and Obs, ರೆಡಿಯೋಲಾಜಿಸ್ಟ್​ (Radiologist), Pathologist, Anaesthesit, Ophthalmologist- 16 ಹುದ್ದೆಗಳಿವೆ.
General Duty Medical Officer (GDMO)- 9 ಹುದ್ದೆಗಳು ಇವೆ

ವಯಸ್ಸಿನ ಮಿತಿ- 67 ವರ್ಷದ ಒಳಗಿನವರಿಗೆ ಅವಕಾಶ

ವಿದ್ಯಾರ್ಹತೆ- ಎಂಬಿಬಿಎಸ್​, ಸ್ನಾತಕೋತ್ತರ ಪದವಿ/ ಡಿಪ್ಲೊಮಾ

ಇದನ್ನೂ ಓದಿ:SSLC, PUC, ಪದವೀಧರರಿಗೆ ಗುಡ್​ನ್ಯೂಸ್.. ITBP 500ಕ್ಕೂ ಹೆಚ್ಚು ಉದ್ಯೋಗ ಅವಕಾಶ

publive-image

ವೇತನ ಶ್ರೇಣಿ-

ಸರ್ಜನ್ (Surgeon), Gynac and Obs, ರೆಡಿಯೋಲಾಜಿಸ್ಟ್​ (Radiologist), Pathologist, Anaesthesit, Ophthalmologist- 85,000 ರೂಪಾಯಿ
General Duty Medical Officer (GDMO)- 75,000 ರೂಪಾಯಿ

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ..?

ವಾಕ್-ಇನ್ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ

ಗಡಿ ಭದ್ರತಾ ಪಡೆಯ ಅಧಿಕೃತ ಅಧಿಸೂಚನೆಯಲ್ಲಿ ನೀಡಲಾದ ಸೂಚನೆಗಳ ಪ್ರಕಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಬಿಎಸ್​ಎಫ್​ನ ವೆಬ್​ಸೈಟ್​ಗೆ ಭೇಟಿ ನೀಡಿ ಅಪ್ಲೇ ಮಾಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment