/newsfirstlive-kannada/media/post_attachments/wp-content/uploads/2025/06/Ahamadabad-Plane-Crash.jpg)
ಆ ಒಂದು ದುರಂತದಿಂದ ಇಡೀ ವಿಶ್ವವೇ ಬೆಚ್ಚಿಬಿದ್ದಿತ್ತು. ವಿಮಾನ ಪತನಗೊಂಡ ಪರಿಣಾಮ ಬರೋಬ್ಬರಿ 274 ಜನರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ದುರಂತದಲ್ಲಿ ಪೈಲಟ್ ತಪ್ಪೋ? ತಾಂತ್ರಿಕ ದೋಷವೋ? ಇಂಜಿನ್ ವೈಫಲ್ಯವೇ? ಅಥವಾ ಬಾಹ್ಯ ಕಾರಣಗಳಿಂದ ವಿಮಾನ ಪತನವಾಗಿದೆಯಾ ಎಂಬ ನಾನಾ ಪ್ರಶ್ನೆಗಳು ಮೂಡಿದ್ದವು.
ಇದನ್ನೂ ಓದಿ:ಬೆಣ್ಣೆಯಂತೆ ಕೊಬ್ಬು ಕರಗಿಸೋ ಬಟರ್ ಫ್ರೂಟ್.. ಇದರ ಆರೋಗ್ಯ ಪ್ರಯೋಜನ ಕೇಳಿದ್ರೆ ಶಾಕ್ ಆಗ್ತೀರಾ!
ಇದೀಗ ಅಹ್ಮದಾಬಾದ್ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಪ್ರಾಥಮಿಕ ವರದಿ ಬಹಿರಂಗಗೊಂಡಿದೆ. ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳ ನಂತರ ವಿಮಾನದ ಎರಡೂ ಎಂಜಿನ್‌ಗಳು ಇದ್ದಕ್ಕಿದ್ದಂತೆ ಸ್ವಯಂಚಾಲಿತವಾಗಿ ಸ್ಥಗಿತಗೊಂಡಿದ್ದು, ಇದರಿಂದಾಗಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಏರ್ ಇಂಡಿಯಾ ಅಪಘಾತದ ಬಗ್ಗೆ ಭಾರತೀಯ ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) Aircraft Accident Investigation Bureau ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ.
ಅಷ್ಟೇ ಅಲ್ಲದೇ ವಿಮಾನ ಟೇಕಾಫ್ ವೇಳೆ ಪೈಲಟ್ಗಳ ಮಾತುಕತೆಯ ವಿವರ ಬಿಡುಗಡೆಯಾಗಿದೆ. ಪೈಲಟ್ ಸುಮಿತ್ ಸಭರ್ವಾಲ್ ತಮ್ಮ ಸಹ-ಪೈಲಟ್ ಡ್ರೈವ್ ಕುಂದರ್ ಅವರನ್ನು ನೀವು ಎಂಜಿನ್ ಇಂಧನವನ್ನು ಏಕೆ ಆಫ್ ಮಾಡಿದ್ದೀರಿ?' ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಸಹ-ಪೈಲಟ್ ಡ್ರೈವ್ ಕುಂದರ್, 'ನಾನು ಏನೂ ಮಾಡಲಿಲ್ಲ' ಎಂದು ಹೇಳಿದ್ದಾರೆ. ಆಗ ಎರಡು ಇಂಜಿನ್ಗಳಿಗೆ ಇಂಧನ ಪೂರೈಕೆಯಾಗಿಲ್ಲ. ಇಂಜಿನ್ 1 ಮತ್ತು ಇಂಜಿನ್ 2 ಕ್ಕೂ ಇಂಧನದ ಬಟನ್ ಕಟ್ ಆಫ್ ಸ್ಥಿತಿಯಲ್ಲಿದ್ದವು. ಇದರಿಂದ ವಿಮಾನದ ಇಂಜಿನ್ಗೆ ಇಂಧನ ಪೂರೈಕೆಯಾಗದೇ ಇಂಜಿನ್ ವರ್ಕ್ ಆಗಿಲ್ಲ. ಪೈಲಟ್ ತಕ್ಷಣವೇ ಇಂಜಿನ್ಗೆ ಇಂಧನ ಪೂರೈಸಲು ರನ್ ಬಟನ್ ಒತ್ತಿದ್ದಾರೆ. ಆದರೆ ತಕ್ಷಣವೇ ಇಂಧನ ಪೂರೈಕೆಯಾಗಿಲ್ಲ. ಆಗ ಇಂಜಿನ್ 1 ವರ್ಕ್ ಆಗಿಲ್ಲ. ಇಂಜಿನ್ 2 ವರ್ಕ್ ಆದರೂ ಪೂರ್ತಿಯಾಗಿ ವರ್ಕ್ ಆಗಿಲ್ಲ. ಬಳಿಕ ಪೈಲಟ್ ಎಟಿಸಿಗೆ ‘ಮೇಡೇ’ ಕಾಲ್ ನೀಡಿದ್ದಾರೆ. ವಿಮಾನಕ್ಕೆ ಯಾವುದೇ ಹಕ್ಕಿ ಡಿಕ್ಕಿ ಹೊಡೆದಿಲ್ಲ ಅಂತ 15 ಪುಟಗಳ ವರದಿಯನ್ನು ಏರ್ ಕ್ರಾಫ್ಟ್ ಆಕ್ಸಿಡೆಂಟ್ ಇನ್ ವೆಸ್ಟಿಗೇಷನ್ ಬ್ಯೂರೋದ ಅಧಿಕಾರಿಗಳು ಸಲ್ಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ