/newsfirstlive-kannada/media/post_attachments/wp-content/uploads/2024/10/VIRAT_KOHLI-5.jpg)
ರನ್ ಮೆಷಿನ್ ಎಂದರೆ ಅದು ವಿರಾಟ್ ಕೊಹ್ಲಿ ಮಾತ್ರ. ಕೊಹ್ಲಿ ಕ್ರೀಸ್ನಲ್ಲಿದ್ದರೆ ಸಾಕು ರನ್ಗಳು ಹಾಗೆ ಹರಿದು ಬರುತ್ತಿರುತ್ತವೆ. ಭಾರತದ ಅದ್ಭುತವಾದ ಬ್ಯಾಟ್ಸ್‌ಮನ್ ಆಗಿರುವ ವಿರಾಟ್ ಕೊಹ್ಲಿ ಇದುವರೆಗೆ ಐಪಿಎಲ್‌ನಲ್ಲಿ 252 ಪಂದ್ಯಗಳನ್ನು ಆಡಿದ್ದು ಒಟ್ಟು 8,004 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಇದೀಗ ಹೊಸ ಚರ್ಚೆ ಏನೆಂದರೆ, ವಿರಾಟ್ ಕೊಹ್ಲಿರನ್ನ ಐಪಿಎಲ್‌ನಲ್ಲಿ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ ಯಾರು?.
ಇದನ್ನೂ ಓದಿ:KPSC; ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ಪೂರ್ವಭಾವಿ ಮರು ಪರೀಕ್ಷೆ ಯಾವಾಗ..? ಇಲ್ಲಿದೆ ಮಾಹಿತಿ
ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಸೀಸನ್ 2025ರಲ್ಲಿ ಆರಂಭವಾಗಲಿದೆ. ಕಳೆದ ಸೀಸನ್ನಲ್ಲಿ ವಿರಾಟ್ ಕೊಹ್ಲಿ ಹೆಚ್ಚು ರನ್ ಗಳಿಸಿದ್ದರು. ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಅಧಿಕ ರನ್ ಗಳಿಸಿದ ಈ ದಿಗ್ಗಜ ಬ್ಯಾಟ್ಸ್‌ಮನ್‌ನನ್ನು ಭಾರತದ ಯುವ ಬೌಲರ್ ಹೆಚ್ಚು ಬಾರಿ ಔಟ್ ಮಾಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ಟೀಮ್ನಲ್ಲಿ ಇರುವ ಮೀಡಿಯಂ ಪೇಸ್ ಬೌಲರ್ ಆಗಿರುವ ಸಂದೀಪ್ ಶರ್ಮಾ ಅವರು ಕೊಹ್ಲಿರನ್ನ ಹೆಚ್ಚು ಬಾರಿ ಔಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿಗೆ ಸಂದೀಪ್ ಶರ್ಮಾ ಬೌಲಿಂಗ್ ಅನ್ನು ಸರಿಯಾಗಿ ಜಡ್ಜ್ ಮಾಡಲು ಬರುವುದಿಲ್ಲ ಎನ್ನಲಾಗಿದೆ. ಹೀಗಾಗಿ ಅವರ ಬೌಲಿಂಗ್ನಲ್ಲೇ ಹೆಚ್ಚು ಬಾರಿ ಅಂದರೆ ಒಟ್ಟು 07 ಬಾರಿ ಔಟ್ ಆಗಿದ್ದಾರೆ. ಇವರ ನಂತರ ಟೀಮ್ ಇಂಡಿಯಾದ ಮಾಜಿ ಪೇಸ್ ಬೌಲರ್ ಆಶಿಶ್ ನೆಹ್ರಾ ಅವರ ಬೌಲಿಂಗ್ನಲ್ಲಿ ವಿರಾಟ್ ಕೊಹ್ಲಿ 06 ಬಾರಿ ಐಪಿಎಲ್‌ನಲ್ಲಿ ಔಟ್ ಆಗಿದ್ದಾರೆ. ಇನ್ನು ಮುಂಬೈ ಟೀಮ್ನ ಬೂಮ್ರಾ ಬೌಲಿಂಗ್ಗೆ ಬ್ಯಾಟಿಂಗ್ ಮಾಡಲು ಕೊಹ್ಲಿ ತಡಬಡಿಸುತ್ತಾರೆ. ಹೀಗಾಗಿಯೇ ವಿರಾಟ್ ಕೊಹ್ಲಿರನ್ನ ಬೂಮ್ರಾ 5 ಸಲ ಔಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ