/newsfirstlive-kannada/media/post_attachments/wp-content/uploads/2024/12/TEAM-INDIA-10.jpg)
ಬಾರ್ಡರ್ ಗವಾಸ್ಕರ್​ ಟ್ರೋಫಿಯ 4ನೇ ಟೆಸ್ಟ್​ ಗೆದ್ದು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪ್ರವೇಶ ಕನಸು ಕಂಡಿದ್ದ ಟೀಂ ಇಂಡಿಯಾಗೆ ಮುಖಭಂಗ ಆಗಿದೆ. ಬಾಕ್ಸಿಂಗ್ ಡೇ ಟೆಸ್ಟ್​ ಮುಕ್ತಾಯಗೊಂಡಿದ್ದು, ಆಸ್ಟ್ರೇಲಿಯಾ 184 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ.
ಐದನೇ ದಿನವಾದ ಇಂದು ಭಾರತಕ್ಕೆ ಗೆಲ್ಲುವ ಅವಕಾಶ ಇತ್ತು. ಅದನ್ನು ಕೈಯಾರೆ ಚೆಲ್ಲಿದೆ. ಕೊನೆ ಕ್ಷಣದಲ್ಲಿ ಮನಸ್ಸು ಮಾಡಿದ್ದರೂ ಪಂದ್ಯ ಡ್ರಾ ಮಾಡಿಕೊಳ್ಳಬಹುದಿತ್ತು. ಆದರೆ ಟೀಂ ಇಂಡಿಯಾ ಬ್ಯಾಟ್ಸ್​​ಮನ್​​ಗಳ ಮನಸೋ ಇಚ್ಛೆ ಬ್ಯಾಟಿಂಗ್​ನಿಂದಾಗಿ ತಂಡ ಸೋಲಿಗೆ ಶರಣಾಗಿದೆ. ಆ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.
ಇದನ್ನೂ ಓದಿ:ಸುದೀಪ್ ಬಳಿ ವಿಶೇಷ ಮನವಿ ಮಾಡಿದ ಐಶ್ವರ್ಯ.. ‘ಡನ್’ ಎಂದ ಕಿಚ್ಚ..!
/newsfirstlive-kannada/media/post_attachments/wp-content/uploads/2024/12/VIRAT-ROHIT-2.jpg)
4ನೇ ಟೆಸ್ಟ್​​ನ ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 474 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಭಾರತ 369 ರನ್​ಗಳಿಸಿತ್ತು. ಇದರೊಂದಿಗೆ ಆಸ್ಟ್ರೇಲಿಯಾ 105 ರನ್​ಗಳ ಮುನ್ನಡೆ ಕಾಯ್ದುಕೊಂಡಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ 234 ರನ್​ಗಳಿಸಿದ್ದ ಆಸ್ಟ್ರೇಲಿಯಾ ಭಾರತದ ಗೆಲುವಿಗೆ ಒಟ್ಟು 339 ರನ್​​ಗಳ ಗುರಿಯನ್ನು ನೀಡಿತ್ತು. ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ 155 ರನ್​​ಗಳಿಸಿ ಸೋಲಿಗೆ ಶರಣಾಗಿದೆ.
ಇದನ್ನೂ ಓದಿ:ಸೈಲೆಂಟ್ ಆಗಿಯೇ ಸೂರ್ಯನಿಗೆ ಗುನ್ನಾ.. ಬಿಗ್ ಶಾಕ್ ಕೊಡಲು ಬಿಸಿಸಿಐ ಪ್ಲಾನ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us