/newsfirstlive-kannada/media/post_attachments/wp-content/uploads/2024/07/JAISWAL-4.jpg)
ಬಾಕ್ಸಿಂಗ್ ಡೇ ಟೆಸ್ಟ್ ರೋಚಕ ಘಟ್ಟ ತಲುಪಿದೆ. ಎರಡೂ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸ್ತಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಟೀಂ ಇಂಡಿಯಾಗೆ ಆಸರೆಯಾದ ಜೈಸ್ವಾಲ್..!
ಟೀಂ ಇಂಡಿಯಾಗೆ ಯಶಸ್ವಿ ಜೈಸ್ವಾಲ್ ಹೊಸ ಭರವಸೆ ಮೂಡಿಸಿದ್ದಾರೆ. ಕ್ರೀಸ್ ಕಚ್ಚಿ ನಿಂತಿದ್ದು, ಗೆಲ್ಲಿಸಿಕೊಡುವ ಭರವಸೆ ಮೂಡಿಸಿದ್ದಾರೆ. ಈಗಾಗಲೇ 137 ಬಾಲ್ಗಳನ್ನು ಎದುರಿಸಿರುವ ಜೈಸ್ವಾಲ್ 7 ಬೌಂಡರಿಗಳೊಂದಿಗೆ 57 ರನ್ಗಳಿಸಿ ಆಡುತ್ತಿದ್ದಾರೆ. ಜೈಸ್ವಾಲ್ಗೆ ರಿಷಬ್ ಪಂತ್ ಸಾಥ್ ನೀಡಬೇಕಿದೆ.
ಇದನ್ನೂ ಓದಿ: 181 ಮಂದಿಯಲ್ಲಿ ಬದುಕಿದ್ದು ಇಬ್ಬರು ಮಾತ್ರ! ಪ್ರಜ್ಞೆ ಬರ್ತಿದ್ದಂತೆ ವೈದ್ಯರಿಗೇ ಗಾಯಾಳು ಆಘಾತಕಾರಿ ಪ್ರಶ್ನೆ
ಅಚ್ಚರಿ ಎನ್ನುವಂತೆ ಪಂತ್ 55 ಬಾಲ್ಗಳನ್ನು ಎದುರಿಸಿ 17 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಪಂತ್ ಹಾಗೂ ಸೈಸ್ವಾಲ್ ಜವಾಬ್ದಾರಿಯತವಾಗಿ ಬ್ಯಾಟ್ ಬೀಸಿದ್ರೆ 4ನೇ ಟೆಸ್ಟ್ ಸುಲಭವಾಗಿ ಗೆಲ್ಲಬಹುದು. ಈ ಮಧ್ಯೆ ಭಾರತ ತಂಡ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ 9 ರನ್ಗಳಿಗೆ ಆಟ ಮುಗಿಸಿದ್ರೆ, ಕೆ.ಎಲ್.ರಾಹುಲ್ ಸೊನ್ನೆ ಸುತ್ತಿದ್ದಾರೆ. ಇನ್ನು ವಿರಾಟ್ ಕೊಹ್ಲಿ 5 ರನ್ಗಳಿಸಿ ನಿರಾಸೆ ಮೂಡಿಸಿದರು.
ಹಿರಿಯ ಆಟಗಾರರು ಜವಾಬ್ದಾರಿ ಮರೆತು ಪೆವಿಲಿಯನ್ ಪರೇಡ್ ನಡೆಸ್ತಿರುವಾಗ, ಜೈಸ್ವಾಲ್ ಹಾಗೂ ಪಂತ್ ಗೆಲುವಿನ ಭರವಸೆ ಮೂಡಿಸಿದ್ದಾರೆ. ಹೀಗಾಗಿ ಇವತ್ತಿನ ಪಂದ್ಯ ತುಂಬಾನೇ ಕುತೂಹಲ ಮೂಡಿಸಿದೆ. ಇನ್ನು ಟೀಂ ಇಂಡಿಯಾಗೆ ಗೆಲ್ಲಲು 245 ರನ್ಗಳ ಅಗತ್ಯ ಇದೆ.
ಇದನ್ನೂ ಓದಿ:ಸುದೀಪ್ ಬಳಿ ವಿಶೇಷ ಮನವಿ ಮಾಡಿದ ಐಶ್ವರ್ಯ.. ‘ಡನ್’ ಎಂದ ಕಿಚ್ಚ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ