ಭಾರತ- ಆಸ್ಟ್ರೇಲಿಯಾ ಟೆಸ್ಟ್​ ಪಂದ್ಯ ದಾಖಲೆ ಮಟ್ಟದಲ್ಲಿ ವೀಕ್ಷಣೆ.. ಸ್ಟೇಡಿಯಂಗೆ ಬಂದ ಜನಸಂಖ್ಯೆ ಎಷ್ಟು?

author-image
Bheemappa
Updated On
ಭಾರತ- ಆಸ್ಟ್ರೇಲಿಯಾ ಟೆಸ್ಟ್​ ಪಂದ್ಯ ದಾಖಲೆ ಮಟ್ಟದಲ್ಲಿ ವೀಕ್ಷಣೆ.. ಸ್ಟೇಡಿಯಂಗೆ ಬಂದ ಜನಸಂಖ್ಯೆ ಎಷ್ಟು?
Advertisment
  • ಎರಡು ತಂಡಗಳಿಗೆ ಮುಖ್ಯವಾಗಿರುವ 4ನೇ ಟೆಸ್ಟ್ ಪಂದ್ಯ
  • ಮೆಲ್ಬೋರ್ನ್ ನಡೆದ ಟೆಸ್ಟ್ ಅನ್ನ ಎಷ್ಟು ಜನ ವೀಕ್ಷಿಸಿದ್ದಾರೆ?
  • ಎಲ್ಲರ ಕೇಂದ್ರ ಬಿಂದುವಾದ ಕೊಹ್ಲಿ- ಸ್ಯಾಮ್ ಕಾನ್​​ಸ್ಟಸ್ ​

ಬಾರ್ಡರ್​ ಗವಾಸ್ಕರ್​ ಟ್ರೋಫಿಯ 4ನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್​​ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯ ಎರಡು ತಂಡಗಳಿಗೆ ಅತಿ ಮುಖ್ಯವಾಗಿದೆ. ಟಾಸ್ ಗೆದ್ದುಕೊಂಡ ಆಸಿಸ್​ ಮೊದಲ ದಿನ ಭರ್ಜರಿ ಬ್ಯಾಟಿಂಗ್ ಮಾಡಿದೆ. 6 ವಿಕೆಟ್ ಕಳೆದುಕೊಂಡಿರುವ ಆಸ್ಟ್ರೇಲಿಯಾ 311 ರನ್​ಗಳನ್ನು ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿದೆ. ಇದೆಲ್ಲಾದರ ಮಧ್ಯೆ ಇಂದಿನ ಟೆಸ್ಟ್ ಪಂದ್ಯ ವೀಕ್ಷಿಸಲು ಎಷ್ಟು ಅಭಿಮಾನಿಗಳು ಸ್ಟೇಡಿಯಂಗೆ ಬಂದಿದ್ದರು ಎಂಬುದು ಕೇಳಿದರೆ ನಿಮಗೆ ಶಾಕ್ ಆಗುತ್ತದೆ.

ಟೆಸ್ಟ್ ಪಂದ್ಯವನ್ನು ವೀಕ್ಷಣೆ ಮಾಡಲು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುತ್ತಾರಾ ಎಂಬುದು ಆಶ್ಚರ್ಯ ಮೂಡುತ್ತದೆ. ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಆಸಿಸ್​ ಓಪನರ್​ ಸ್ಯಾಮ್ ಕಾನ್​​ಸ್ಟಸ್ ನಡುವೆ ನಡೆದ ಘರ್ಷಣೆ ಎಲ್ಲರನ್ನು ಸೆಳೆಯಿತು. ಇದಕ್ಕೆ ವಿರಾಟ್ ಕೊಹ್ಲಿ ದಂಡ ಕಟ್ಟುವಂತೆ ಆಯಿತು. ಅತ್ತ ಯುವ ಆಟಗಾರ ಸ್ಯಾಮ್ ಡೆಬ್ಯೂ ಪಂದ್ಯದಲ್ಲೇ ವೇಗದ ಅರ್ಧ ಶತಕ ಸಿಡಿಸಿ ಬ್ಯಾಟ್ ಎತ್ತಿ ಸಂಭ್ರಮಿಸಿದರು.

ಇದನ್ನೂ ಓದಿ:IND vs AUS; ವಿರಾಟ್ ಕೊಹ್ಲಿ ವರ್ತನೆ ಬಗ್ಗೆ ಆಸಿಸ್ ಓಪನರ್​ ಸ್ಯಾಮ್ ಹೇಳಿದ್ದು ಏನು?

publive-image

ಮೆಲ್ಬೋರ್ನ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಪಂದ್ಯವನ್ನು ಒಟ್ಟು 87,242 ಅಭಿಮಾನಿಗಳು ನೇರ ವೀಕ್ಷಣೆ ಮಾಡಿದ್ದಾರೆ. ಇಷ್ಟೊಂದು ದೊಡ್ಡಮಟ್ಟದಲ್ಲಿ ಬಂದು ಪ್ರೇಕ್ಷಕರು ಟೆಸ್ಟ್ ಮ್ಯಾಚ್ ನೋಡಲು ಒಂದು ಕಾರಣವೂ ಇದೆ. ಕ್ರಿಸ್​ಮಸ್​ ಆದ ಮರುದಿನ ಬಾಕ್ಸಿಂಗ್​ ಡೇ ದಿನ ಎಂದು ಆಸ್ಟ್ರೇಲಿಯಾದಲ್ಲಿ ಸಾರ್ವಜನಿಕ ರಜೆ ಘೋಷಣೆ ಮಾಡಲಾಗಿತ್ತದೆ. ಹೀಗಾಗಿಯೇ 87,242 ಅಭಿಮಾನಿಗಳು ಸ್ಟೇಡಿಯಂನಲ್ಲಿ ಕುಳಿತು ಪಂದ್ಯವನ್ನು ವೀಕ್ಷಣೆ ಮಾಡಿ ಎಂಜಾಯ್ ಮಾಡಿದ್ದಾರೆ.

ಸ್ಟೇಡಿಯಂನ ಟಿಕೆಟ್​ಗಳು ಎರಡು ವಾರಕ್ಕೂ ಮೊದಲೇ ಮಾರಾಟ ಆಗಿದ್ದವು ಎನ್ನಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಕ್ರಿಕೆಟ್​ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಹಾಗೂ​ ಸ್ಯಾಮ್ ಕಾನ್​​ಸ್ಟಸ್ ನಡುವೆ ನಡೆದ ಘರ್ಷಣೆ ರೋಮಾಂಚನಾ ನೀಡಿತು ಎನ್ನಬಹುದು. ಟೆಸ್ಟ್​ಗೆ ಡೆಬ್ಯೂ ಮಾಡಿದ ಯಂಗ್ ಬ್ಯಾಟ್ಸ್​ಮನ್ 19 ವರ್ಷದ ಸ್ಯಾಮ್ ಕಾನ್​​ಸ್ಟಸ್ ಟೆಸ್ಟ್​ನಲ್ಲಿ ವೇಗದ ಅರ್ಧ ಶತಕ ಸಿಡಿಸಿ ಔಟ್​ ಆಗಿದ್ದಾರೆ. ಮೊದಲ ಪಂದ್ಯದಲ್ಲಿ ಚೆನ್ನಾಗಿ ಬ್ಯಾಟ್ ಬೀಸಿದ ಸ್ಯಾಮ್ 6 ಬೌಂಡರಿ, 2 ಸಿಕ್ಸರ್ ಸಮೇತ 52 ಎಸೆತದಲ್ಲಿ ಅರ್ಧ ಶತಕ ಪೂರೈಸಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment