/newsfirstlive-kannada/media/post_attachments/wp-content/uploads/2024/11/ROHIT-SHARMA.jpg)
ಮೆಲ್ಬೋರ್ನ್​​ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಎದುರಾಳಿ ಆಸ್ಟ್ರೇಲಿಯಾ ಮುನ್ನಡೆ ಕಾಯ್ದುಕೊಂಡಿದೆ. ಟಾಸ್​​ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
ಅಂತೆಯೇ ಆಸ್ಟ್ರೇಲಿಯಾ ಒಂದು ವಿಕೆಟ್ ಕಳೆದುಕೊಂಡು 120 ರನ್​ಗಳಿಸಿ ಮುನ್ನುಗ್ಗುತ್ತಿದೆ. ಇನ್ನು ಆಸ್ಟ್ರೇಲಿಯಾ ಪರ ಮೊದಲ ಬಾರಿಗೆ ಡೆಬ್ಯು ಮಾಡಿದ ಸ್ಯಾಮ್ ಕಾನ್ಸ್​ಸ್ಟಸ್ ಇಂಪ್ರೆಸೀವ್ ಆಟವಾಡಿ ಟೀಂ ಇಂಡಿಯಾಗೆ ಕಾಟ ಕೊಟ್ಟರು. 65 ಬಾಲ್ ಎದುರಿಸಿ 6 ಬೌಂಡರಿ, ಎರಡು ಸಿಕ್ಸರ್ ಹೊಡೆದು 60 ರನ್​ಗಳಿಸಿದರು. 18 ವರ್ಷದ ಸ್ಯಾಮ್ ಅವರನ್ನು ಔಟ್ ಮಾಡುವಲ್ಲಿ ಜಡೇಜಾ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:VIDEO: ಕ್ಷಣ ಮಾತ್ರದಲ್ಲಿ ಉಸಿರು ನಿಲ್ಲಿಸಿದ 38 ಪ್ರಯಾಣಿಕರು.. ಘೋರ ದುರಂತದ ಕೊನೆ ಕ್ಷಣದ ವಿಡಿಯೋ ಸೆರೆ
ಇನ್ನು ಟೀಂ ಇಂಡಿಯಾದ ಪ್ಲೇಯಿಂಗ್-11ನಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಶುಬ್ಮನ್ ಗಿಲ್ ಅವರಿಗೆ ಪ್ಲೇಯಿಂಗ್-11ನಿಂದ ಕೊಕ್ ನೀಡಲಾಗಿದೆ. ಅವರ ಬದಲಿಗೆ ಆಲ್​ರೌಂಡರ್ ವಾಷಿಂಗ್ಟನ್ ಸುಂದರ್​ಗೆ ಅವಕಾಶ ಮಾಡಿಕೊಡಲಾಗಿದೆ. ಅದೇ ರೀತಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಆರ್ಡರ್ ಸ್ಥಾನ ಬದಲಾಗಿದ್ದು, ಗಿಲ್ ಅವರ ಮೂರನೇ ಕ್ರಮಾಂಕದಲ್ಲಿ ರೋಹಿತ್ ಬ್ಯಾಟ್ ಬೀಸಲಿದ್ದಾರೆ.
ಹೇಗಿದೆ ಟೀಂ ಇಂಡಿಯಾ..?
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ರೋಹಿತ್ ಶರ್ಮಾ (ಕ್ಯಾಪ್ಟನ್), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಬುಮ್ರಾ, ಸಿರಾಜ್, ಆಕಾಶ್ ದೀಪ್​​.
ಇದನ್ನೂ ಓದಿ:ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮಕ್ಕೆ ಕುಂದಾನಗರಿ ಸಜ್ಜು; ಹೇಗಿರಲಿದೆ ಕೈ ಪಾಳಯದ ಸಮಾವೇಶ?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us