/newsfirstlive-kannada/media/post_attachments/wp-content/uploads/2024/12/JAISWAL-3.jpg)
ಬಾಕ್ಸಿಂಡ್ ಡೇ ಟೆಸ್ಟ್ ಪಂದ್ಯವನ್ನು ಎದುರಾಳಿ ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಬೆನ್ನಲ್ಲೇ ಮೆಲ್ಬೋರ್ನ್ನಲ್ಲಿ ಥರ್ಡ್ ಅಂಪೈರ್ ವಿರುದ್ಧ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ.
ಅಸಲಿಗೆ ಆಗಿದ್ದು ಏನು..?
ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಂಥ ಪರಿಸ್ಥಿತಿಯಲ್ಲಿ ಆರಂಭಿಕ ಆಟಗಾರನಾಗಿ ಬಂದಿದ್ದ ಜೈಸ್ವಾಲ್, ಕ್ರೀಸ್ ಕಚ್ಚಿ ನಿಂತಿದ್ದರು. ಆಸಿಸ್ ಬೌಲರ್ಗಳನ್ನು ಮನಸೋ ಇಚ್ಛೆ ಬೆಂಡೆತ್ತಿದ್ದರು. 208 ಬಾಲ್ಗಳನ್ನು ಎದುರಿಸಿದ್ದ ಜೈಸ್ವಾಲ್, 84 ರನ್ಗಳಿಸಿ ತಂಡವನ್ನು ಗೆಲ್ಲಿಸುವ ಲೆಕ್ಕಾಚಾರದಲ್ಲಿದ್ದರು. ಅಷ್ಟರಲ್ಲೇ ಅಂಪೈರ್ಗಳ ಮೋಸದಾಟಕ್ಕೆ ಟೀಂ ಇಂಡಿಯಾ ಜೈಸ್ವಾಲ್ ವಿಕೆಟ್ ಕಳೆದುಕೊಂಡಿದೆ.
ಇದನ್ನೂ ಓದಿ:IND vs AUS ಟೀಂ ಇಂಡಿಯಾಗೆ ಭಾರೀ ಮುಖಭಂಗ.. 4ನೇ ಟೆಸ್ಟ್ನಲ್ಲಿ ಹೀನಾಯ ಸೋಲು
84 ರನ್ಗಳಿಸಿ ಆಡ್ತಿದ್ದ ಜೈಸ್ವಾಲ್ಗೆ ಆಸಿಸ್ ನಾಯಕ ಕಮ್ಮಿನ್ಸ್ ಬೌನ್ಸರ್ ಎಸೆದರು. ಅದನ್ನು ಜೈಸ್ವಾಲ್ ಲೆಗ್ ಸೈಡ್ನತ್ತ ತಿರುಗಿಸಲು ಪ್ರಯತ್ನಿಸಿದರು. ಆದರೆ ಚೆಂಡು ಅವರ ಬ್ಯಾಟ್ ಮತ್ತು ಗ್ಲೌಸ್‌ನ ಹತ್ತಿರ ಹಾದುಹೋಗಿ ಕೀಪರ್ ಕೈಗೆ ಹೋಯಿತು. ಆಸ್ಟ್ರೇಲಿಯದಿಂದ ಜೈಸ್ವಾಲ್ ಔಟ್ಗಾಗಿ ಮನವಿ ಬಂದಿತ್ತು. ಫೀಲ್ಡ್ ಅಂಪೈರ್ ಔಟ್ ನೀಡಲಿಲ್ಲ. ನಂತರ ಆಸ್ಟ್ರೇಲಿಯಾ ಕ್ಯಾಪ್ಟನ್ ಥರ್ಡ್ ಅಂಪೈರ್ಗೆ ಮನವಿ ಮಾಡಿಕೊಂಡರು.
ಮೂರನೇ ಅಂಪೈರ್ ಅದನ್ನು ಪರಿಶೀಲಿಸಿದರು. ಸ್ನಿಕೋಮೀಟರ್ (Snickometer) ಅನ್ನು ಡಿಸಿಷನ್ ರಿವ್ಯೂ ವೇಳೆ ತೋರಿಸಲಾಗಿದೆ. ಎಲ್ಲಿಯೂ ಕೂಡ ಬಾಲ್ ಜೈಸ್ವಾಲ್ ಅವರ ಬ್ಯಾಟ್ ಅಥವಾ ಗ್ಲೌಸ್‌ಗೆ ತಾಗಿಲ್ಲ. ಸ್ನಿಕೋಮೀಟರ್‌ನಲ್ಲಿ ಯಾವುದೇ ರೀತಿಯ ಚಲನೆಯೂ ಇರಲಿಲ್ಲ. ಹೀಗಿದ್ದೂ ಜೈಸ್ವಾಲ್ ಔಟ್ ಎಂದು ಘೋಷಣೆ ಮಾಡಿಲಾಯಿತು. ಅಂಪೈರ್ ಅವರ ನಿರ್ಧಾರದಿಂದ ಟೀಂ ಇಂಡಿಯಾ ಸೋಲನ್ನು ಎದುರಿಸಿತು. ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ:ರೋಹಿತ್, ವಿರಾಟ್ ವೃತ್ತಿ ಜೀವನದ ಕೊನೆಯ ಟೆಸ್ಟ್ ಆಡುತ್ತಿದ್ದಾರಾ..? ಮುಗಿಯಿತಾ ಕೊಹ್ಲಿ, ಶರ್ಮಾ ಯುಗ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್