Advertisment

ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ.. BBMP ಲಾರಿ ಡಿಕ್ಕಿ ಹೊಡೆದು ಯುವಕ, ಯುವತಿ ಸಾವು

author-image
Ganesh
Updated On
ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ.. BBMP ಲಾರಿ ಡಿಕ್ಕಿ ಹೊಡೆದು ಯುವಕ, ಯುವತಿ ಸಾವು
Advertisment
  • ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರು
  • ರಾತ್ರಿ ಊಟ ಮಾಡಿ ಬರುತ್ತಿದ್ದಾಗ ಲಾರಿ ಅಪಘಾತ
  • ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸಾವು

ಬೆಂಗಳೂರು: ಬಿಬಿಎಂಪಿಯ ಕಸದ ಲಾರಿ ಡಿಕ್ಕಿ ಹೊಡೆದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಕೆ.ಆರ್.ಸರ್ಕಲ್ ಬಳಿ ನಡೆದಿದೆ. ಪ್ರಶಾಂತ್ (25), ಶಿಲ್ಪ ಮೃತ ದುರ್ದೈವಿಗಳು.

Advertisment

ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಭೀಕರ ಅಪಘಾತ ನಡೆದಿದೆ. ಪ್ರಶಾಂತ್ ಮೂಲತಃ ಬೆಂಗಳೂರಿನ ಯುವಕ. ಪ್ರಶಾಂತ್ ಮತ್ತು ಯುವತಿ ಇಬ್ಬರು ಕೂಡ ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಐಟಿಪಿಎಲ್ ಟಿಸಿಎಸ್​ನಲ್ಲಿ ಕೆಲಸ ಮಾಡ್ತಿದ್ದರು. ಮೃತ ಶಿಲ್ಪ(27) ಆಂಧ್ರ ಪ್ರದೇಶದವರು. ಪಿಜಿಯಲ್ಲಿ ವಾಸ ಮಾಡ್ತಿದ್ದ ಯುವತಿ ಶಿಲ್ಪ, ಊಟಕ್ಕೆ ಎಂದು ಹೊರಗೆ ಬಂದಾಗ ಅಪಘಾತ ಸಂಭವಿಸಿದೆ.

ಇದನ್ನೂ ಓದಿ:RCB ಇಂದ ಈ 3 ಆಟಗಾರರು ಮಾತ್ರ ರಿಟೈನ್; ಉಳಿದವರಿಗೆ ಗೇಟ್​ಪಾಸ್​..!

ಮೆಜೆಸ್ಟಿಕ್​​ನಿಂದ ಕೆ.ಆರ್.ಸರ್ಕಲ್ ಮಾರ್ಗವಾಗಿ ಬೈಕ್​ನಲ್ಲಿ ಬರುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಸಿಐಡಿ ಸಿಗ್ನಲ್ ಮಾರ್ಗದಿಂದ ಕೆ.ಆರ್.ಸರ್ಕಲ್ ಕಡೆ ವೇಗವಾಗಿ ಬಂದ ಕಸದ ಲಾರಿ, ಏಕಾಏಕಿಯಾಗಿ ಬಂದು ಗುದ್ದಿದೆ. ಮೃತರ ಮೇಲೆ ಹರಿದು ಲಾರಿ ಸುಮಾರು 10 ಮೀಟರ್ ನಷ್ಟು ದೂರ ದೇಹಗಳನ್ನ ಎಳೆದೊಯ್ದಿದೆ. ಪರಿಣಾಮ ರಸ್ತೆ ಮೇಲೆ ರಕ್ತ ಚೆಲ್ಲಿದೆ. ಕೂಡಲೇ ಅಪಘಾತಕ್ಕೊಳಗಾದವರನ್ನ ಆಸ್ಪತ್ರೆಗೆ ಸಾಗಿಸುವ ಕೆಲಸ ನಡೆದಿತ್ತು, ಆದರೆ ಮಾರ್ಗದಲ್ಲಿಯೇ ಸಾವನ್ನಪ್ಪಿದ್ದಾರೆ. ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:60 ಲಕ್ಷ ರೂಪಾಯಿ ಬೆಲೆಯ ಪ್ಲಾಟ್​ 30 ಕೋಟಿಗೆ ಬಿಡ್; ಬೆಚ್ಚಿಬಿದ್ರು ಹರಾಜು ನಡೆಸಿದ ಅಧಿಕಾರಿಗಳು..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment