ಪಾರಿವಾಳ ಉಳಿಸಲು ಹೋಗಿ ನರಳಿ ನರಳಿ ಪ್ರಾಣ ಬಿಟ್ಟ ಬಾಲಕ.. ಅಲ್ಲಿ ಆಗಿದ್ದೇನು..?

author-image
Ganesh
Updated On
ಪಾರಿವಾಳ ಉಳಿಸಲು ಹೋಗಿ ನರಳಿ ನರಳಿ ಪ್ರಾಣ ಬಿಟ್ಟ ಬಾಲಕ.. ಅಲ್ಲಿ ಆಗಿದ್ದೇನು..?
Advertisment
  • 12 ವರ್ಷದ ಬಾಲಕ ರಾಮಚಂದ್ರ ದಾರುಣ ಸಾವು
  • ನೇತಾಡುತ್ತಿದ್ದ ಮಗನ ಶವ ಕಂಡು ಪೋಷಕರು ಕಣ್ಣೀರು
  • ಸ್ಥಳಕ್ಕೆ ರಾಂಪುರ ಠಾಣಾ PSI ಮಹೇಶ ಹೊಸಪೇಟಿ ಭೇಟಿ

ಚಿತ್ರದುರ್ಗ: ಪಾರಿವಾಳದ ಪ್ರಾಣ ಉಳಿಸಲು ಹೋಗಿ ಬಾಲಕ ವಿದ್ಯುತ್ ಶಾಕ್​​ಗೆ ಬಲಿಯಾದ ಘಟನೆ ಮೊಳಕಾಲ್ಮೂರು ತಾಲೂಕಿನ ಸಂತೇಗುಡ್ಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಹನುಮಾಪುರದಲ್ಲಿ ನಡೆದಿದೆ. ರಾಮಚಂದ್ರ (12) ಮೃತ ದುರ್ದೈವಿ.

ಆಗಿದ್ದೇನು..?
ಪಾರಿವಾಳವೊಂದು ವಿದ್ಯುತ್ ತಂತಿಗೆ ಸಿಲುಕಿ ಒದ್ದಾಡುತ್ತಿತ್ತು. ಇದನ್ನು ನೋಡಿದ ರಾಮಚಂದ್ರ ಪಾರಿವಾಳ ರಕ್ಷಣೆಗೆ ವಿದ್ಯತ್ ಕಂಬ ಏರಿದ್ದಾನೆ. ಪಾರಿವಾಳ ರಕ್ಷಣೆ ವೇಳೆ ವಿದ್ಯುತ್ ತಗುಲಿ ಕಂಬದಲ್ಲೇ ರಾಮಚಂದ್ರ ಸಾವನ್ನಪ್ಪಿದ್ದಾನೆ.

ಮೃತ ರಾಮಚಂದ್ರ 6ನೇ ತರಗತಿಯಲ್ಲಿ ಓದುತ್ತಿದ್ದ. ಕಂಬದಲ್ಲೇ ನೇತಾಡುತ್ತಿದ್ದ ಬಾಲಕನ ಶವ ಕಂಡು ಕುಟುಂಬಸ್ಥರು ಕಣ್ಣೀರು ಇಟ್ಟಿದ್ದಾರೆ. ರಾಮಚಂದ್ರ ಸಾವಿಗೆ ಇಡೀ ಗ್ರಾಮ ಮಮ್ಮಲ ಮರುಗಿದೆ. ಸ್ಥಳಕ್ಕೆ ರಾಂಪುರ ಠಾಣಾ ಪಿಎಸ್ಐ ಮಹೇಶ ಹೊಸಪೇಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪ್ರೀತಿಗೆ ಅಡ್ಡಿ ಆಗಲಿಲ್ಲ ವಯಸ್ಸು.. ಅಳಿಯನ ವರ್ಷ ತಿಳಿದು ದಂಗಾದ ಪೋಷಕರು.. ಠಾಣೆಯಲ್ಲಿ ಹೈಡ್ರಾಮಾ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment