Advertisment

ನೋ ಬಾಲ್‌ಗೆ ಮಕ್ಕಳ ಗಲಾಟೆ.. ಬ್ಯಾಟ್​ನಿಂದ ಹೊಡೆದು ಬಾಲಕನ ಹತ್ಯೆ; ಆದರೂ ಮಾನವೀಯತೆ ಮೆರೆದ ತಾಯಿ!

author-image
Bheemappa
Updated On
ನೋ ಬಾಲ್‌ಗೆ ಮಕ್ಕಳ ಗಲಾಟೆ.. ಬ್ಯಾಟ್​ನಿಂದ ಹೊಡೆದು ಬಾಲಕನ ಹತ್ಯೆ; ಆದರೂ ಮಾನವೀಯತೆ ಮೆರೆದ ತಾಯಿ!
Advertisment
  • ಮೃತಪಟ್ಟ ಮಗುವಿನ ತಾಯಿ ಕೇಸ್ ದಾಖಲು ಮಾಡಲಿಲ್ಲ ಏಕೆ?
  • ಪಾರ್ಕ್​​ನಲ್ಲಿ ಕ್ರಿಕೆಟ್ ಆಡುವಾಗ ಮಕ್ಕಳ ನಡುವೆ ನಡೆದ ಗಲಾಟೆ
  • ತಾಯಿಯ ಮಾತಿಗೆ ಎಂತವರು ಮೆಚ್ಚಲೇಬೇಕು, ಯಾಕೆ ಗೊತ್ತಾ?

ಲಕ್ನೋ: ಮಕ್ಕಳು ಕ್ರಿಕೆಟ್ ಆಡುವಾಗ 10 ವರ್ಷದ ಬಾಲಕನನ್ನು ಬ್ಯಾಟ್​​ನಿಂದ ಹೊಡೆದು 11 ವರ್ಷದ ಬಾಲಕ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಕಾನ್ಪುರದ ಕೆಡಿಎಯ ಏಕ್ತಾ ಪಾರ್ಕ್ ಪ್ರದೇಶದ ಜಜ್ಮೌನಲ್ಲಿ ನಡೆದಿದೆ. ಈ ಸಂಬಂಧ ಸಾವನ್ನಪ್ಪಿದ ಮಗುವಿನ ತಾಯಿಗೆ ಕೇಸ್ ದಾಖಲಿಸುವಂತೆ ಹೇಳಿದರೂ ಮಾನವೀಯತೆ ಮೆರೆದಿದ್ದಾರೆ.​

Advertisment

ಇದನ್ನೂ ಓದಿ:ಅತಿಥಿ ಉಪನ್ಯಾಸಕರಿಗೆ ಗುಡ್​ನ್ಯೂಸ್; ನೇಮಕಕ್ಕೆ ಅರ್ಜಿ ಆಹ್ವಾನ; ಸಂಬಳ ಎಷ್ಟು?

ಕೆಡಿಎಯ ಏಕ್ತಾ ಪಾರ್ಕ್​​ನಲ್ಲಿ ಮಕ್ಕಳು ಕ್ರಿಕೆಟ್​ ಆಡುತ್ತಿರುತ್ತಾರೆ. ಈ ವೇಳೆ 11 ವರ್ಷದ ಬಾಲಕ ಬ್ಯಾಟಿಂಗ್ ಮಾಡುತ್ತಿರುತ್ತಾನೆ. 10 ವರ್ಷದ ಬಾಲಕ ಬೌಲಿಂಗ್ ಮಾಡುತ್ತಿರುತ್ತಾನೆ. ಎಸೆದ ಬಾಲ್​ಗೆ ಬಾಲಕ ಔಟ್ ಆಗಿರುತ್ತಾನೆ. ಆದರೆ ಅದು ನೋ ಬಾಲ್, ನಾನು ಮತ್ತೆ ಬ್ಯಾಟಿಂಗ್ ಮಾಡುವುದಾಗಿ ಹೇಳಿದ್ದಾನೆ. ನೋ ಬಾಲ್ ಸಂಬಂಧ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೆ ಏರಿ ಬಾಲಕ ಬ್ಯಾಟ್​​ನಿಂದ ಹೊಡೆದಿದ್ದಾನೆ. ಪರಿಣಾಮ ಪ್ರಜ್ಞೆ ತಪ್ಪಿ ಬಾಲಕ ನೆಲಕ್ಕೆ ಬಿದ್ದಿದ್ದಾನೆ. ಮಕ್ಕಳೆಲ್ಲ ಗಾಬರಿಗೊಂಡು ನೆಲಕ್ಕೆ ಬಿದ್ದ ಮಗುವನ್ನ ತಕ್ಷಣ ಅವರ ಅಮ್ಮನ ಬಳಿಗೆ ಎತ್ತುಕೊಂಡು ಹೋಗಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ವೈದ್ಯರು ಮಗು ಮೃತಪಟ್ಟಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಅನಂತ್ ಅಂಬಾನಿ ಕೂದಲು ಉದುರುವುದೇಕೆ? ಮಗನ ಕಾಯಿಲೆ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು?

Advertisment

publive-image

ಸದ್ಯ ಈ ಸಂಬಂಧ ಕೇಸ್ ದಾಖಲು ಮಾಡುವಂತೆ ಮಗುವಿನ ತಾಯಿಗೆ ಕುಟುಂಬಸ್ಥರು, ಪೊಲೀಸರು ಒತ್ತಾಯ ಮಾಡಿದ್ದಾರೆ. ಆದರೆ ತಾಯಿ, ನಾವು ಸಣ್ಣವರಿದ್ದಾಗ ಇದೇ ರೀತಿ ಜಗಳ ಮಾಡಿರುತ್ತೇವೆ. ಯಾವುದೇ ಮಕ್ಕಳು ಬೇಕಂತಲೇ, ಸಾಯೋ ತರ ಹೊಡೆಯಲ್ಲ. ಉದ್ದೇಶಪೂರ್ವಕವಾಗಿ ಮಕ್ಕಳು ಕೊಲೆ ಮಾಡಲ್ಲ. ಕ್ರಿಕೆಟ್​​ನಲ್ಲಿ ಜಗಳ ಸಾಮಾನ್ಯ. ದೇವರು ನನ್ನ ಮಗನಿಗೆ ಇಷ್ಟೇ ದಿನ ಬದುಕಲು ಅವಕಾಶ ಕೊಟ್ಟಿದ್ದಾನೆ ಅನಿಸುತ್ತೆ. ನಾನು ಕೇಸ್ ಮಾಡಿದ್ರೆ ಆ ಬಾಲಕನ ಅಮ್ಮನೂ ನರಳಬೇಕಾಗುತ್ತದೆ ಎಂದು ಹೇಳಿ ಆರೋಪಿ ಸ್ಥಾನದ ಮಗುವಿನ ಬಗ್ಗೆ ಮಾನವೀಯತೆ ಮೆರೆದಿದ್ದಾಳೆ. ಇನ್ನು ಮೃತಪಟ್ಟ ಮಗುವಿನ ತಾಯಿಯ ಗಂಡ 9 ವರ್ಷದ ಹಿಂದೆಯೇ ಸಾವನ್ನಪ್ಪಿದ್ದಾನೆ. ಮನೆಯವರು ಮತ್ತೊಂದು ಮದುವೆ ಆಗುವಂತೆ ಹೇಳಿದರು ಮದುವೆ ಆಗಿರಲಿಲ್ಲ. ಸದ್ಯ ಆ ತಾಯಿ ಒಂಟಿಯಾಗಿದ್ದಾಳೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment