newsfirstkannada.com

ಯುವಕರೇ ಲವರ್​​ಗಾಗಿ ರಿಸ್ಕ್​ ತೆಗದುಕೊಳ್ಳುವ ಮುನ್ನ ಎಚ್ಚರ! ನೀವು ಓದಲೇಬೇಕಾದ ಸ್ಟೋರಿ!

Share :

Published March 14, 2024 at 5:57am

Update March 14, 2024 at 6:00am

  ಟಾಟಾ ಮಾಡಲು ಹೋಗಿ ವ್ಯಕ್ತಿ ಸೇರಿದ್ದು ಜೈಲಿಗೆ

  ಪೊಲೀಸ್ ತನಿಖೆಯಲ್ಲಿ ಅಸಲಿ ಕಹಾನಿ ರಿವೀಲ್​

  ಪ್ರೇಯಸಿ ದೆಹಲಿಗೆ, ಬಾಯ್ ಫ್ರೆಂಡ್ ಹೋಗಿದ್ದು ಜೈಲಿಗೆ

ಬೆಂಗಳೂರು: ತನ್ನ ಪ್ರೇಯಸಿ ಮುಮ್ತಾಜ್​​ಗಾಗಿ ಷಹಜಹಾನ್​ ತಾಜ್ ಮಹಲ್ ಕಟ್ಸಿದ್ದ. ರೋಮಿಯೋ ಜೂಲಿಯೆಟ್​​ಗಾಗಿ ಪ್ರಾಣವನ್ನೇ ಬಿಟ್ಟಿದ್ದ. ಆದರೆ ತನ್ನದೇ ರೀತಿಯಲ್ಲಿ ಪ್ರೇಮಿಗಾಗಿ ತೆಗೆದುಕೊಂಡ ರಿಸ್ಕ್ ಆತನನ್ನೇ ಪೇಚಿಗೆ ಸಿಲುಕಿಸಿಬಿಟ್ಟಿದೆ. ತನ್ನ ಗರ್ಲ್ ಫ್ರೆಂಡ್​​ಗೆ ಟಾಟಾ ಮಾಡಲಿಕ್ಕೆ ಹೋಗಿ ಜೈಲುಪಾಲಾಗಿದ್ದಾನೆ ಈ ಆಸಾಮಿ. ಪೊಲೀಸರ ಅಥಿತಿಯಾಗಿರೋ ವ್ಯಕ್ತಿ ಹೆಸರು ಪ್ರಕಾರ್ ಶ್ರೀವತ್ಸ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಪ್ರಕಾರ್ ಗೆಳೆತಿ ಇತ್ತೀಚೆಗೆ‌ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದಳು. ಮಾರ್ಚ್ 8ರಂದು ಮತ್ತೆ ದೆಹಲಿಗೆ ವಾಪಸ್ ಆಗಲು ಏರ್ ಇಂಡಿಯಾ ಫ್ಲೈಟ್ ಬುಕ್ ಮಾಡಿದ್ದಳು. ಗೆಳತಿಯನ್ನು ಡ್ರಾಪ್ ಮಾಡಲಿಕ್ಕೆ ಪ್ರಕಾರ್ ಕೂಡ ಏರ್ಪೋರ್ಟ್​ಗೆ ಬಂದಿದ್ದ. ಇದೇ ವೇಳೆ ಪ್ರಕಾರ್​ ಟಿಕೆಟ್ ಇಲ್ಲದೇ ನಕಲಿ ಐಡಿ ಪ್ರೂಫ್ ನೀಡಿ ಟರ್ಮಿನಲ್ ಒಳಗೆ ಪ್ರವೇಶ ಮಾಡಿದ್ದ. ತನ್ನ ಗೆಳತಿಯಿದ್ದ ಫ್ಲೈಟ್ ಬೆಂಗಳೂರಿನಿಂದ ಟೇಕ್ ಆಫ್ ಆಗುತ್ತಿದ್ದಂತೆ ಅಲ್ಲೇ ನಿಂತುಕೊಂಡಿದ್ದ ಪ್ರಕಾರ್​ನನ್ನು ವಿಮಾನ ನಿಲ್ದಾಣದ ಕೇಂದ್ರಿಯ ಭದ್ರತಾ ಪಡೆ ಸಿಬ್ಬಂದಿ ವಿಚಾರಿಸಿದ್ದಾರೆ. ಈ ವೇಳೆ ಪಪ್ಯಾಸೆಂಜರ್ ಕಾರ್ಡ್​​ ಎಡಿಟ್ ಮಾಡಿರೋದು ಪತ್ತೆಯಾಗಿದೆ. ಕೂಡಲೇ ಪ್ರಕಾರ್ ನನ್ನ CISF ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸದ್ಯ ಪ್ರಕಾರ್ ಮೊಬೈಲ್ ಸೀಜ್ ಮಾಡಿರೋ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ವಿಚಾರಣೆ ವೇಳೆ ತನ್ನ ಗೆಳತಿಗೆ ಸೆಂಡ್ ಅಫ್ ಕೊಡಲಿಕ್ಕೆ ವಿಮಾನ ಹೊರಡುವ ಮುನ್ನಾ ಟಾಟ ಬಾಯ್ ಎಂದು ಹೇಳಲಿಕ್ಕೆ ಈ ರೀತಿ ಮಾಡಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವಕರೇ ಲವರ್​​ಗಾಗಿ ರಿಸ್ಕ್​ ತೆಗದುಕೊಳ್ಳುವ ಮುನ್ನ ಎಚ್ಚರ! ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/03/fake-7.jpg

Load More