newsfirstkannada.com

ಬೋರ್​ವೆಲ್​ಗೆ ಬಿದ್ದ ಬಾಲಕನ ಚಲನವಲನ CCTVಯಲ್ಲಿ ಸೆರೆ.. 70ft ಆಳದ​ ಕೊಳವೆ ಬಾವಿಯಲ್ಲಿ ಜೀವಕ್ಕಾಗಿ ಹೋರಾಟ

Share :

Published April 13, 2024 at 1:28pm

Update April 13, 2024 at 3:28pm

    ಬೋರ್​ವೆಲ್​ಗೆ ಬಿದ್ದ ಬಾಲಕನ ರಕ್ಷಣೆಗೆ ಅಡ್ಡಿ ಪಡಿಸುತ್ತಿರುವ ಮಳೆ

    ಸ್ನೇಹಿತರೊಂದಿಗೆ ಆಟವಾಡುತ್ತಾ 70ft ಆಳದ ಬೋರ್​ವೆಲ್ ಬಿದ್ದ ಬಾಲಕ

    ಸಿಸಿಟಿವಿಯಲ್ಲಿ ಸೆರೆಯಾಯ್ತು ಕೊಳವೆ ಬಾವಿಯಲ್ಲಿರುವ ಬಾಲಕನ ಚಲನವಲನ

ಆರು ವರ್ಷದ ಬಾಲಕನೋರ್ವ ತೆರೆದ ಬೋರ್​ವೆಲ್ ಒಳಕ್ಕೆ ಬಿದ್ದ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ಬೆಳಕಿಗೆ ಬಂದಿದೆ. ಮಯೂರ್​ ಎಂಬ ಬಾಲಕ ಆಟವಾಡುತ್ತಾ ಕೊಳವೆ ಬಾವಿಯೊಳಕ್ಕೆ ಬಿದ್ದಿದ್ದಾನೆ. ಸದ್ಯ ಆತನಿಗಾಗಿ ರಕ್ಷಣಾ ಕಾರ್ಯ ಮುಂದುವರೆದಿದೆ.

ಪೊಲೀಸರ ಪ್ರಕಾರ, ಮಯೂರ್​ ನಿನ್ನೆ ಮದ್ಯಾಹ್ನ ಸುಮಾರು 3:30ರ ಸುಮಾರಿಗೆ ಕೊಳವೆ ಬಾವಿಗೆ ಬಿದ್ದಿದ್ದಾನೆ. ಗೋಧಿ ಕಟಾವು ವೇಳೆ ಸ್ನೇಹಿತರೊಂದಿಗೆ ಆಟವಾಡುತ್ತಾ ಹೋಗಿ ಬೋರ್​ವೇಲ್​ಗೆ ಬಿದ್ದಿದ್ದಾನೆ.

ಇದನ್ನೂ ಓದಿ: ಮತ್ತೊಂದು ಅನಾಹುತ, ತೆರೆದ ಬೋರ್​​ವೆಲ್​ಗೆ ಬಿದ್ದ 6 ವರ್ಷದ ಬಾಲಕ

ಹೆಚ್ಚುವರಿ ಪೊಲೀಸ್​ ಅಧಿಕಾರಿ ಅನಿಲ್​​ ಸೋಂಕರ್​ ಮಾತನಾಡಿದ್ದು, ಬೋರ್​ವೆಲ್​ ಸುಮಾರು 70 ಅಡಿ ಅಳವಿದೆ. ಬಾಲಕ 40 ಅಡಿಯಲ್ಲಿ ಸಿಲುಕಿದ್ದಾನೆ. ಆತನಿಗೆ ಆಮ್ಲಜನಕ ಒದಗಿಸಲಾಗಿದೆ ಎಂದು ಹೇಳಿದ್ದಾರೆ.

ಸದ್ಯ ಬಾಲಕನ ರಕ್ಷಣೆಗಾಗಿ ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳದಲ್ಲಿದೆ. ಬಾಲಕನ ಚಲನೆಯನ್ನು ಗಮನಿಸಲು ಸಿಸಿಟಿವಿ ಸಹ ಬೋರ್​ವೆಲ್​ ಒಳಕ್ಕೆ ಇಳಿಸಲಾಗಿದೆ. ಆದರೆ ಮಳೆಯಿಂದಾಗಿ ರಕ್ಷಣಾ ಕಾರ್ಯಚರಣೆಗೆ ಅಡ್ಡಿಯಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೋರ್​ವೆಲ್​ಗೆ ಬಿದ್ದ ಬಾಲಕನ ಚಲನವಲನ CCTVಯಲ್ಲಿ ಸೆರೆ.. 70ft ಆಳದ​ ಕೊಳವೆ ಬಾವಿಯಲ್ಲಿ ಜೀವಕ್ಕಾಗಿ ಹೋರಾಟ

https://newsfirstlive.com/wp-content/uploads/2024/04/Borewell-2.jpg

Load More