QR ಕೋಡ್​​ನಲ್ಲಿ ಒಂದು ದಿನಕ್ಕೆ ಹುಡುಗ ಸಿಗುತ್ತಾನೆ; ವ್ಯಾಲೆಂಟೈನ್ಸ್ ಡೇ ಬೆಂಗಳೂರಲ್ಲಿ ಹೊಸ ಸಂಚಲನ

author-image
Ganesh
Updated On
QR ಕೋಡ್​​ನಲ್ಲಿ ಒಂದು ದಿನಕ್ಕೆ ಹುಡುಗ ಸಿಗುತ್ತಾನೆ; ವ್ಯಾಲೆಂಟೈನ್ಸ್ ಡೇ ಬೆಂಗಳೂರಲ್ಲಿ ಹೊಸ ಸಂಚಲನ
Advertisment
  • ಹೆಣ್ಮಕ್ಕಳ ಗಮನ ಸೆಳೆದ ‘ಹುಡುಗಾ ಬೇಕಾ’ QR ಕೋಡ್
  • QR ಕೋಡ್ ನೋಡ್ತಿದ್ದಂತೆ ರೊಚ್ಚಿಗೆದ್ದ ಸಾರ್ವಜನಿಕರು
  • ‘Rent a BOYFRIEND’ ಪೋಸ್ಟರ್​ನ ಅಸಲಿ ಸತ್ಯ ಏನು?

ಪ್ರೇಮಿಗಳು ಇವತ್ತು ಪ್ರೇಮೋಲ್ಲಾಸದಲ್ಲಿದ್ದಾರೆ. ತಮ್ಮ ದಿನವನ್ನ ಸ್ವಂತವಾಗಿಸಿಕೊಳ್ಳಲು ಪ್ರೇಮ ಲೋಕಕ್ಕೆ ಜಾರಿದ್ದಾರೆ. ಆದರೆ ಕೆಲವು ಸಂಗಾತಿ ಇಲ್ಲದೇ ಕೊರಗುತ್ತಿರೋರೂ ಇದ್ದಾರೆ. ಅವರಲ್ಲಿ ಹುಡುಗ, ಹುಡುಗಿ ಇಬ್ಬರೂ ಸೇರಿದ್ದಾರೆ. ವಿಷಯ ಹೀಗಿರುವಾಗ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕೆಲವು ಪೋಸ್ಟರ್​​ಗಳು ರಾರಾಜಿಸುತ್ತಿದ್ದು ಸಂಚಲನ ಸೃಷ್ಟಿಸಿವೆ.

ಏನು ಪೋಸ್ಟರ್​​..?

‘Rent a BOYFRIEND’ ಹೆಸರಲ್ಲಿ ಕ್ಯೂ-ಆರ್ ಕೋಡ್​ ಸೃಷ್ಟಿಸಿ ಸಂಗಾತಿ ಇಲ್ಲದವರ ಎದೆಬಡಿತ ಹೆಚ್ಚಿಸಿದ್ದಾರೆ. ನಿಮಗೆ ಯಾರೂ ಬಾಯ್​​ ಫ್ರೆಂಡ್ ಇಲ್ವಾ? ಹಾಗಿದ್ದರೆ ಯಾಕೆ ಚಿಂತೆ ಮಾಡ್ತೀರಿ. ಇಲ್ಲಿರುವ QR ಕೋಡ್​​ಗೆ ಸ್ಕ್ಯಾನ್ ಮಾಡಿ ಕೇವಲ 389 ರೂಪಾಯಿ ಪೇ ಮಾಡಿ. ಒಂದು ದಿನ ಸೆಲೆಬ್ರೇಟ್ ಮಾಡೋಕೆ ಹುಡುಗ ಸಿಗ್ತಾನೆ ಎಂದು ಪೋಸ್ಟರ್ ಹೇಳ್ತಿದೆ.

ಇದನ್ನೂ ಓದಿ: Valentine’s Day: ಒಂದೇ ಒಂದು ಅಪ್ಪುಗೆ, ದೇಹಕ್ಕೆ ಅದ್ಭುತ ಲಾಭ.. ಪ್ರೇಮಿಗಳೇ ನಿಮಗೆ ಈ 5 ಶಕ್ತಿ ಗೊತ್ತಿರಲಿ..!

publive-image

ಅಸಲಿ ಕತೆ ಏನು..?

ಈ QR ಕೋಡ್​ ಸ್ಕ್ಯಾನ್ ಮಾಡಿದ್ರೆ ಗೆಳೆಯ ಸಿಗಲ್ಲ. ಇದೊಂದು ಮಾರ್ಕೆಟಿಂಗ್ ತಂತ್ರಗಾರಿಕೆ. ಪ್ರೇಮಿಗಳ ದಿನವನ್ನು ಬಂಡವಾಳವನ್ನಾಗಿಸಿಕೊಂಡ ಕಿಡಿಗೇಡಿಗಳು ಈ ರೀತಿಯ ಪೋಸ್ಟರ್ ಅಂಟಿಸುತ್ತಿದ್ದಾರೆ. ಒಂದು ವೇಳೆ QR ಕೋಡ್ ಸ್ಕ್ಯಾನ್ ಮಾಡಿದ್ರೆ, ಹೆಣ್ಮಕ್ಕಳಿಗೆ ಬೇಕಾಗಿರುವ ಬ್ಯೂಟಿ ಪ್ರಾಡೆಕ್ಟ್​​ಗಳ ಕುರಿತ ಮಾಹಿತಿ ಸಿಗಲಿದೆ. ಇಷ್ಟವಾದರೆ ಖರೀದಿ ಮಾಡಬಹುದಾಗಿದೆ.

ಎಲ್ಲೆಲ್ಲಿ ಪೋಸ್ಟರ್​..?

ಜಯನಗರ, ಬನಶಂಕರಿ ಏರಿಯಾದ ಗೋಡೆಗಳ ಮೇಲೆ ವಿಚಿತ್ರ ಪೋಸ್ಟರ್ ಅಂಟಿಸಿದ್ದಾರೆ. ಇದನ್ನು ಗಮನಿಸಿರುವ ಸಾರ್ವಜನಿಕರು ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ‘ಪ್ರೀತಿ ಅಂದರೆ..’ ಪ್ರೇಮಿಗಳಿಗಾಗಿ ಸ್ಪೆಷಲ್ಲಾಗಿ ಕವಿತೆ ಬರೆದ ಸಿಂಗಾರ ಸಿರಿಯೇ ಖ್ಯಾತಿಯ ಪ್ರಮೋದ್ ಮರವಂತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment