9 ವರ್ಷದ ತಂಗಿಯನ್ನೇ ಅತ್ಯಾಚಾರ ಮಾಡಿ ಕೊಂದ ನೀಚ
ಮಗನ ಪಾಪಕಾರ್ಯವನ್ನು ಮುಚ್ಚಿಡಲು ನಿಂತ ನೀಚನ ತಾಯಿ
ಪೊಲೀಸರ ವಿಚಾರಣೆಯಲ್ಲಿ ಇಡೀ ಕುಟುಂಬ ಸಿಕ್ಕಿಬಿದ್ದಿದ್ದು ಹೇಗೆ?
ಭೋಪಾಲ್: ಮಧ್ಯಪ್ರದೇಶದ ರೇವಾ ಜಿಲ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೊಂದು ಭೀಕರ ಘಟನೆ ನಡೆದಿದೆ. ರಾತ್ರಿಯಿಡಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸಿದ 13 ವರ್ಷದ ಬಾಲಕ ತನ್ನ ಪಕ್ಕದಲ್ಲಿ ಮಲಗಿದ್ದ 9 ವರ್ಷದ ತಂಗಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ. ಇದಕ್ಕಿಂತ ನೀಚ ಕೆಲಸ ಅಂದ್ರೆ ಅವನ ತಾಯಿ ಹಾಗೂ ಅವನ ಇಬ್ಬರು ಸಹೋದರಿಯರು ಆತನನ್ನು ರಕ್ಷಿಸುವ ಉದ್ದೇಶದಿಂದ ತನಿಖೆ ವೇಳೆ ಪೊಲೀಸರ ದಿಕ್ಕು ತಪ್ಪಿಸುವಂತಹ ಕೆಲಸ ಮಾಡಿರುವ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ: IAS ಕೋಚಿಂಗ್ ಸೆಂಟರ್ಗೆ ನೀರು ನುಗ್ಗಿ ಅನಾಹುತ; ಪ್ರಾಣ ಕಳೆದುಕೊಂಡ ಮೂರು ವಿದ್ಯಾರ್ಥಿಗಳು.. ಆಗಿದ್ದೇನು?
ಏಪ್ರಿಲ್ 24 ರಂದು ಕೊಲೆಯಾದ ಬಾಲಕಿಯ ಮನೆಯ ಹತ್ತಿರದ ಮೈದಾನವೊಂದರಲ್ಲಿ ಪೊಲೀಸರಿಗೆ 9 ವರ್ಷದ ಬಾಲಕಿಯ ಮೃತದೇಹವೊಂದು ಪತ್ತೆಯಾಗಿತ್ತು. ಪೋಸ್ಟ್ ಮಾರ್ಟಮ್ನಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ವರದಿ ಬಂದ ಕೂಡಲೇ ತನಿಖೆಯನ್ನು ಚುರುಕುಗೊಳಿಸಿದ ರೇವಾ ಜಿಲ್ಲೆಯ ಪೊಲೀಸರು ಕೊಲೆಯಾದ ಬಾಲಕಿಯ ಮನೆಯವರನ್ನೆಲ್ಲಾ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಪೊಲೀಸರ ದಿಕ್ಕು ತಪ್ಪಿಸುವ ರೀತಿಯಲ್ಲಿ ಅವರು ಹೇಳಿಕೆಯನ್ನು ಕೊಟ್ಟಿದ್ದಾರೆ. ಅವಳಿಗೆ ಯಾವುದೋ ವಿಷಕಾರಿ ಹುಳ ಕಡಿದ ಸತ್ತಿರಬಹುದು ನಮಗೆ ಇದರ ಬಗ್ಗೆ ಏನು ಗೊತ್ತಿಲ್ಲ ಅನ್ನುವಂತಹ ಹೇಳಿಕೆಯನ್ನು ಕೊಟ್ಟಿದ್ದಾರೆ. ನಂತರ ವಿಚಾರಣೆ ತೀವ್ರಗೊಂಡ ಸಂದರ್ಭದಲ್ಲಿ ಇಡೀ ಕುಟುಂಬ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದೆ.
ಇದನ್ನೂ ಓದಿ: ಭೀಕರ ಹಿಟ್ ಅಂಡ್ ರನ್.. ಹಿಂದಿನಿಂದ ಆಟೋಗೆ ಬಂದು ಗುದ್ದಿದ ಕಾರು; ಚಾಲಕನ ಸ್ಥಿತಿ ಏನಾಯ್ತು?
ಅಂದು ರಾತ್ರಿ ಆಗಿದ್ದೇನು..?
ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿರುವ ಸಂತ್ರಸ್ತೆಯ 13 ವರ್ಷದ ಸಹೋದರ, ರಾತ್ರಿ ವೇಳೆ ತನ್ನ ತಂಗಿ ತನ್ನ ಪಕ್ಕದಲ್ಲಿಯೇ ಮಲಗಿದ್ದಳು. ಈ ವೇಳೆ ತಾನು ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುತ್ತಿದ್ದೆ. ಇದರಿಂದ ಪ್ರಚೋದನೆಗೊಂಡು ತಂಗಿಯ ಮೇಲೆ ಅತ್ಯಾಚಾರ ನಡೆಸಿದೆ. ಈ ವೇಳೆ ಆಕೆ ನನ್ನ ತಂದೆಯ ಎದುರು ಎಲ್ಲವನ್ನೂ ಹೇಳುವುದಾಗಿ ಹೇಳಿದಳು ಇದರಿಂದ ಭಯಗೊಂಡು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದೆ. ನಂತರ ತಾಯಿಯ ಹತ್ತಿರ ಹೋಗಿ ನಡೆದ ವಿಚಾರವನ್ನು ಹೇಳಿದೆ. ಬಳಿಕ ಮತ್ತೆ ಕೋಣೆಗೆ ಬಂದು ನೋಡಿದಾಗ ಆಕೆ ಉಸಿರಾಡುತ್ತಿದ್ದು ಕಾಣಿಸಿತು. ಮತ್ತೊಮ್ಮೆ ಆಕೆಯ ಕತ್ತನ್ನು ಹಿಸುಕಿ ಕೊಲೆ ಮಾಡಿದೆ ಎಂದು ತಪ್ಪೊಪ್ಪಿಗೆ ನೀಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ