/newsfirstlive-kannada/media/post_attachments/wp-content/uploads/2025/01/TMK-gelatin-sticks2.jpg)
ಕಳೆದ ತಿಂಗಳು ಬಿಗ್ ಬಾಸ್ ಖ್ಯಾತಿಯ ಡ್ರೋಣ್ ಪ್ರತಾಪ್ ಸೋಡಿಯಂ ಬಾಂಬ್ ಸ್ಫೋಟ ಮಾಡಿ ಸೆರೆಮನೆ ವಾಸ ಅನುಭವಿಸಿದ್ರು. ಅದೇ ರೀತಿ ಇಲ್ಲೊಬ್ಬ ಕಾಂಟ್ರಾಕ್ಟರ್ ಯಡವಟ್ಟಿನಿಂದ ಜಿಲೆಟಿನ್ ಸ್ಫೋಟಗೊಂಡು ವಿದ್ಯಾರ್ಥಿಯೊಬ್ಬ ಕೈ ಬೆರಳುಗಳನ್ನ ಕಳೆದು ಕೊಂಡಿದ್ದಾನೆ. ಆದರೆ ಘಟನೆಗೆ ಕಾರಣರಾದ ಕಾಂಟ್ರಾಕ್ಟರ್​ಗೆ ಮಾತ್ರ ಯಾವುದೇ ಶಿಕ್ಷೆ ಆಗಿಲ್ಲವಂತೆ. ಈಗ ಕೈ ಕಳೆದುಕೊಂಡ ಬಾಲಕನ ಕುಟುಂಬ ನ್ಯಾಯಕ್ಕಾಗಿ ಅಂಗಲಾಚುತ್ತಿದೆ.
ಕಾಂಟ್ರಾಕ್ಟರ್ ಯಡವಟ್ಟಿನಿಂದ ಬೆರಳು ಕಳೆದುಕೊಂಡ ವಿದ್ಯಾರ್ಥಿ
ಕಳೆದ ಡಿಸೆಂಬರ್​ನಲ್ಲಿ ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದಲ್ಲಿ ಡ್ರೋಣ್ ಪ್ರತಾಪ್ ಸೋಡಿಯಂ ಬಾಂಬ್ ಸಿಡಿಸಿ ಎಡವಟ್ಟು ಮಾಡಿಕೊಂಡು ಜೈಲು ಸೇರೋ ಹಾಗೆ ಆಗಿತ್ತು. ಈ ರೀತಿ ಯಾವುದೇ ಅನುಮತಿ ಇಲ್ಲದೇ ಸಾರ್ವಜನಿಕವಾಗಿ ಸ್ಫೋಟಕ ಸಿಡಿಸೋದು ಅಪರಾಧ.. ಹೀಗಿರುವಾಗ ಇಂಥದ್ದೇ ಒಂದು ಪ್ರಕರಣ ಗುಬ್ಬಿ ತಾಲೂಕಿನ ಸಿಎಸ್ ಪುರದ ಇಡಗೂರಿನಲ್ಲಿ ನಡೆದಿದೆ.
ಕಳೆದ ಅಕ್ಟೋಬರ್ 9 ರಂದು ಇಡಗೂರು ಹೈಸ್ಕೂಲ್ ಬಳಿ ಜಿಲೆಟಿನ್ ಸ್ಫೋಟ ಗೊಂಡು 10 ನೇ ತರಗತಿ ವಿದ್ಯಾರ್ಥಿ ಮೋನಿಶ್ ಗೌಡ ಗಾಯಗೊಂಡಿದ್ದ. ಸ್ಫೋಟದ ತೀವ್ರತೆಗೆ ಮೋನಿಶ್ ಗೌಡನ ಬಲಗೈನ ಮೂರು ಬೆರಳು ಕಟ್ ಆಗಿತ್ತು. ಇದಕ್ಕೆಲ್ಲಾ ಕಾರಣ ಶಾಲೆಯ ಕಾಂಪೌಂಡ್ ನಿರ್ಮಾಣ ಮಾಡಲು ಗುತ್ತಿಗೆ ತೆಗೆದುಕೊಂಡ ಕ್ಲಾಸ್ ಒನ್ ಕಾಂಟ್ರಾಕ್ಟರ್​ ರಾಜಶೇಖರ್.
ಇದನ್ನೂ ಓದಿ:ನಕ್ಸಲರಿಗೆ 14 ದಿನ ನ್ಯಾಯಾಂಗ ಬಂಧನ.. NIA ತನಿಖೆಗೆ ಆಗ್ರಹಿಸಿ ಕೇಂದ್ರಕ್ಕೆ ಬಿಜೆಪಿ ಮೊರೆ
/newsfirstlive-kannada/media/post_attachments/wp-content/uploads/2025/01/TMK-gelatin-sticks.jpg)
ಗುತ್ತಿಗೆದಾರ ರಾಜಶೇಖರ್ ಮತ್ತು ಆತನ ಮಗ ಸುಶಾಂತ್ ನಿರ್ಲಕ್ಷ್ಯದಿಂದ ಸ್ಫೋಟ ಸಂಭವಿಸಿದೆ ಎಂಬ ಆರೋಪವಿದೆ. ಕಾಂಪೌಂಡ್ ನಿರ್ಮಾಣದ ಸೈಜುಗಲ್ಲಿಗಾಗಿ ಬಂಡೆ ಸ್ಫೋಟ ಮಾಡುವ ಉದ್ದೇಶದಿಂದ ಜಿಲೆಟಿನ್ ಶೇಖರಣೆ ಮಾಡಲಾಗಿತ್ತಂತೆ. ಇನ್ನೂ ಆಟದ ವಸ್ತು ಅಂತಾ ತಿಳಿದ ವಿದ್ಯಾರ್ಥಿ ಮೋನಿಶ್ ಗೌಡ, ಜಿಲೆಟಿನ್ ಕೈಗೆತ್ತಿಕೊಂಡ ಪರಿಣಾಮ ಸಿಡಿದಿದೆ. ಆದರೆ ಪೊಲೀಸರು ಗುತ್ತಿಗೆದಾರನ ಯಡವಟ್ಟು ಗೊತ್ತಿದ್ರೂ ಅಪರಿಚಿತ ವ್ಯಕ್ತಿ ಎಂದು ಎಫ್​​ಐಆರ್​ನಲ್ಲಿ ದಾಖಲಿಸಿ ಕೈ ತೊಳೆದುಕೊಂಡಿದ್ದಾರೆ ಅನ್ನೋ ಮಾತಿದೆ.. ಈಗ ಬೆರಳು ಕಳೆದ್ಕೊಂಡ ಬಾಲಕನ ಕುಟುಂಬ ನ್ಯಾಯಕ್ಕಾಗಿ ಅಂಗಲಾಚುತ್ತಿದೆ.
/newsfirstlive-kannada/media/post_attachments/wp-content/uploads/2025/01/TMK-gelatin-sticks-1.jpg)
ಇನ್ನು ಡ್ರೋಣ್ ಪ್ರತಾಪ್ ವಿರುದ್ಧ ನಮೂದಿಸಿದ ಸೆಕ್ಷನ್ ಅನ್ನೇ ಈ ಪ್ರಕರಣದಲ್ಲೂ ಹಾಕಲಾಗಿದೆ. ಆದರೆ ಸಾಕ್ಷಿ ಇದ್ರೂ ಆರೋಪಿಗಳು ಯಾರೆಂದು ತೋರಿಸದೇ ಸಿಎಸ್ ಪುರ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಆದಾಗ್ಯೂ ಗುತ್ತಿಗೆದಾರರಾದ ರಾಜಶೇಖರ್ ಮತ್ತು ಸುಶಾಂತ್ ನಿರೀಕ್ಷಣಾ ಜಾಮೀನು ಪಡೆದು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ.
ಇದನ್ನೂ ಓದಿ:ಒಲವಿನ ಉಡುಗೊರೆ ಕೊಡಲೇನು ಖ್ಯಾತಿಯ ಗಾಯಕ ಪಿ.ಜಯಚಂದ್ರನ್ ಇನ್ನಿಲ್ಲ
ಘಟನೆಗೆ ಕಾರಣರಾದ ಗುತ್ತಿಗೆದಾರರಿಗೆ ಶಿಕ್ಷೆಯಾಗಬೇಕು. ಕೈ ಬೆರಳುಗಳನ್ನ ಬಾಲಕನಿಗೆ ವಿಕಲಚೇತನ ಸರ್ಟಿಫಿಕೇಟ್ ಕೊಡಬೇಕು. ಹಾಗೂ ಸರ್ಕಾರಿ ನೌಕರಿ ಒದಗಿಸಬೇಕು ಎಂದು ಬಾಲಕನ ಕುಟುಂಬ ಆಗ್ರಹಿಸಿದೆ. ಇದರ ಜೊತೆಗೆ ಗುತ್ತಿಗೆದಾರರ ರುದ್ಧವೂ ಕ್ರಮ ಆಗಬೇಕು ಅಂತ ಒತ್ತಾಯಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us