/newsfirstlive-kannada/media/post_attachments/wp-content/uploads/2024/12/Boy-Friends.jpg)
ಈಗ ಒಂದು ವಿಚಿತ್ರ ಟ್ರೆಂಡ್​ ಶುರುವಾಗಿದೆ. ಇಷ್ಟು ದಿನ ಗಾಡಿಗಳನ್ನು, ಬಟ್ಟೆಗಳನ್ನು, ಮನೆಗಳನ್ನು, ಆರ್ಟಿಫಿಷಿಯಲ್ ಜ್ಯುವೆಲರಿಗಳನ್ನು ಜನ ಬಾಡಿಗೆಗೆ ಪಡೆಯುತ್ತಾ ಇದ್ದರು. ಆದ್ರೆ ವಿಯಟ್ನಾಮ್​​​ನಲ್ಲಿ ಈಗ ಬಾಯ್​ಫ್ರೆಂಡ್​ಗಳನ್ನು ಬಾಡಿಗೆಗೆ ಪಡಿಯೋ ವಿಚಿತ್ರ ಪದ್ಧತಿ ಶುರುವಾಗಿದೆ.
ಈ ದೇಶದಲ್ಲಿ ಬಾಯ್​ಫ್ರೆಂಡ್​ಗಳು ಬಾಡಿಗೆಗೆ ಸಿಗುತ್ತಾರೆ. ಯಾವ ಥರ ಇದು ಅಂತ ನೀವು ಕೇಳಬಹುದು. ವರ್ಕಿಂಗ್​ ಪ್ರೊಫೆಷನಲ್ಸ್​, ಹಾಗೂ ಮಧ್ಯ ವಯಸ್ಕ ಮಹಿಳೆಯರು ಈ ಟ್ರೆಂಡ್​ನ ತುಂಬಾ ಫಾಲೋ ಮಾಡ್ತಾ ಇದ್ದಾರೆ. ಯಾಕಂದ್ರೆ ಅವರಿಗೆ ತಮ್ಮ ಮನೆಗಳಲ್ಲಿ ಹಾಗೂ ಕುಟುಂಬದಿಂದ ಭಾರೀ ಒತ್ತಡ ಇರೋದ್ರಿಂದ, ತಮ್ಮ ಅಪ್ಪ-ಅಮ್ಮನಿಗೆ ಸಮಾಧಾನ ಪಡಿಸಲು ಜೊತೆಗೆ ಯಾವುದೇ ಕಮಿಟ್​ಮೆಂಟ್​ಗೆ ಒಳಗಾಗದೇ, ಮದುವೆನೂ ಆಗದೇ, ಕೇವಲ ಫ್ಯಾಮಿಲಿ ಫಂಕ್ಷನ್​ಗಳಿಗೆ, ಹೊರಗೆ ಸುತ್ತಾಡೋಕೆ, ಜೊತೆಗೆ ತಮ್ಮ ಅಪ್ಪ-ಅಮ್ಮನ ಜೊತೆ ಕಾಲ ಕಳೆದು, ಅಳಿಯನ ಫೀಲ್ ಕೊಡೋಕೆ ಈ ರೀತಿಯಾದ ಆಯ್ಕೆಯನ್ನು ಅಲ್ಲಿನ ಯುವತಿಯರು ಮಾಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/08/LOVERS_NEW.jpg)
ವಿಶೇಷ ಅಂದ್ರೆ ತಮ್ಮ ಹಣವನ್ನೇ ಖರ್ಚು ಮಾಡಿ ಬಾಯ್​​ಫ್ರೆಂಡ್​ನ​ ಹುಡುಗೀರು ಹುಡುಕಾಡ್ತಾ ಇದ್ದಾರಂತೆ. ಜೊತೆಗೆ ಈ ರೆಂಟಲ್​ ಬಾಯಫ್ರೆಂಡ್​​ನ ಒಂದು ದಿನದ ಮಟ್ಟಕ್ಕೆ ಬಾಡಿಗೆಗೆ ಪಡೀಬಹುದು ಅಂತ ವರದಿಯಾಗಿದೆ. ಸೋ ಒಂದು ದಿನಕ್ಕೆ ಒಬ್ಬ ಬಾಯ್​​ಫ್ರೆಂಡ್​ನ ಬಾಡಿಗೆ 10-20 ಡಾಲರ್ ಅಂದ್ರೆ ನಮ್ಮ ಭಾರತದ ರೂಪಾಯಿ ಪ್ರಕಾರ 800 ರಿಂದ 1700 ರೂಪಾಯಿ ಆಗುತ್ತೆ.
ಈ ಬಾಡಿಗೆಯ ಷರತ್ತುಗಳು ಡಿಮ್ಯಾಂಡ್​ಗೆ ತಕ್ಕಂತೆ ಚೇಂಜ್​ ಆಗುತ್ತೆ. ಜೊತೆಗೆ ಸುತ್ತಾಡೋದಾದ್ರೆ ಇಷ್ಟೇ ಇರುತ್ತೆ. ಒಂದ್ವೇಳೆ ಆ ಹುಡುಗಿ ಕುಟುಂಬವನ್ನು ಮೀಟ್​ ಮಾಡಬೇಕಾದ್ರೆ, ಇನ್ನೊಂದು ಸ್ವಲ್ಪ ಜಾಸ್ತಿ ಖರ್ಚಾಗುತ್ತೆ. ಅಂದ್ರೆ 3400ಕ್ಕೆ ಇದು ಹೈಕ್ ಆಗುತ್ತೆ. ಜೊತೆಗೆ ಫ್ಯಾಮಿಲಿ ಮೀಟ್​ ಮಾಡಿ ಅವರ ಜೊತೆ ಊಟ ಅಂದ್ರೆ ಅದಕ್ಕೆ ಸೆಪರೇಟ್​ ರೇಟ್​, ಫ್ಯಾಮಿಲಿ ಜೊತೆಗೆ ಹೊರಗಡೆ ಸುತ್ತಾಡಿದ್ರೆ ಅದಕ್ಕೂ ಬೇರೆ ರೇಟ್, ಹೀಗೆ ಪ್ರತಿಯೊಂದಕ್ಕೂ ಅದರದ್ದೇ ಆದ ರೇಟ್​ ಇದೆ.
ಇದನ್ನೂ ಓದಿ: ನಾಗಚೈತನ್ಯ ಮದುವೆ ಸಂಭ್ರಮ.. ಕೆಂಪು ಸೀರೆಯಲ್ಲಿ ಮಿಂಚಿದ ನಟಿ ಶೋಭಿತಾ; ಬ್ಯೂಟಿಫುಲ್ ಫೋಟೋ ಇಲ್ಲಿದೆ
ಹೀಗಾಗಿ ಮದುವೆ ಅದು ಇದು ಅಂತ ಯಾಕ್​ ಸುಮ್ಮನೆ ಕಮ್ಮಿಟ್​ಮೆಂಟ್​ ಕೊಡಬೇಕು, ನಮ್ಮ ಫ್ರೀಡಂನ ಯಾಕೆ ಕಮ್ಮಿ ಮಾಡಿಕೊಳ್ಳಬೇಕು ಅಂತ ವಿಯಟ್ನಾಮ್​ನ ಯುವತಿಯರು ಆಲೋಚನೆ ಮಾಡ್ತಾ ಇದ್ದಾರೆ. ಇದಕ್ಕಾಗಿ ಸ್ನೇಹಿತೆಯರೇ ಹೊಟ್ಟೆ ಕಿಚ್ಚು ಪಡುವ ಹಾಗೆ ಹ್ಯಾಂಡ್​ಸಮ್ ಹುಡುಗನನ್ನೇ ಹುಡುಕುತ್ತಿದ್ದಾರೆ. ಆ ಹುಡುಗನಿಗೆ ಆಡುಗೆ ಮಾಡೋಕೆ ಬರಬೇಕು, ಒಳ್ಳೆ ಮಾತುಗಾರನಾಗಿರಬೇಕು, ಫ್ಯಾಮಿಲಿ ಜೊತೆ ಹೊಂದಿಕೊಳ್ಳಬೇಕು. ಹೀಗೆ ಪೋಷಕರು ಬಯಸೋ ಅಳಿಯನ ರೀತಿಯಲ್ಲೇ ಯುವತಿಯರು ಹುಡುಕುತ್ತಿದ್ದಾರೆ. ಹುಡುಗೀರು ಹುಡುಕೋ ಬಾಡಿಗೆ ಅಳಿಯಂದ್ರು ಕೂಡ ಪೋಷಕರಿಗೆ ಇಷ್ಟವಾಗ್ತಾ ಇದ್ದಾರಂತೆ.
ನೋಡಿ ಎಂತಹ ಟ್ರೆಂಡ್​ ಸೃಷ್ಟಿಯಾಗ್ತಾ ಇದೆ ಅಂತ. ಏನೇನೋ ಬಾಡಿಗೆಗೆ ಸಿಗ್ತಾ ಇತ್ತು. ಆದ್ರೆ ಈಗ ಬಾಯ್​ಫ್ರೆಂಡ್​ ಕೂಡನಾ ಅಂತ ಜನ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತೋ.. ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us