/newsfirstlive-kannada/media/post_attachments/wp-content/uploads/2025/04/boys-vs-girls2.jpg)
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಬಾಯ್ಸ್ vs ಗರ್ಲ್ಸ್ (boys vrs girls) ಶೋ ಅಂತ್ಯ ಕಾಣುತ್ತಿದೆ. ಕನ್ನಡದ ಬಿಗ್ಬಾಸ್ ಸೀಸನ್ 11 ಮುಕ್ತಾಯವಾಗುತ್ತಿದ್ದಂತೆ ಈ ಶೋ ಪ್ರಸಾರ ಕಂಡಿತ್ತು. ಇದೀಗ ಬಾಯ್ಸ್ vs ಗರ್ಲ್ಸ್ ಗ್ರ್ಯಾಂಡ್ ಫಿನಾಲೆಗೆ ನಡೆಯುತ್ತಿದೆ.
ಇದನ್ನೂ ಓದಿ:ಕೊರಳಲ್ಲಿ ಹಾರ, ಕೈಯಲ್ಲಿ ಕೇಕ್ ಹಿಡಿದ ರಜತ್ ಪತ್ನಿ ಅಕ್ಷಿತಾ.. ಈ ಖುಷಿಗೆ ಕಾರಣವೇನು?
ಹೌದು, ಅನುಪಮಾ ಗೌಡ ಅವರ ನಿರೂಪಣೆಯ ಸಾರಥ್ಯದಲ್ಲಿ ಮೂಡಿ ಬಂದಿತ್ತು ಬಾಯ್ಸ್ vs ಗರ್ಲ್ಸ್ ಶೋ. ಈ ಶೋನಲ್ಲಿ ಬಾಯ್ಸ್ ತಂಡದ ನಾಯಕ ವಿನಯ್ ಗೌಡ ಆಗಿದ್ದರೇ, ಗರ್ಲ್ಸ್ ತಂಡದ ನಾಯಕಿ ಶುಭಾ ಪೂಂಜಾ ಆಗಿದ್ದರು. ಈ ಇಬ್ಬರು ತಮ್ಮ ತಮ್ ತಂಡವನ್ನು ಹ್ಯಾಂಡಲ್ ಮಾಡುತ್ತಿದ್ದರು.
ಇನ್ನೂ, ಈ ತಂಡಗಳಲ್ಲಿ ಬಿಗ್ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್, ಚೈತ್ರಾ ಕುಂದಾಪುರ, ಧನರಾಜ್ ಆಚಾರ್ಯ, ಶೋಭಾ ಶೆಟ್ಟಿ, ಐಶ್ವರ್ಯ ಶಿಂಧೋಗಿ, ಕಾಮಿಡಿ ಕಿಲಾಡಿಗಳ ಖ್ಯಾತಿಯ ಸೂರಜ್, ಅಂತರಪಟ ಖ್ಯಾತಿಯ ಚಂದನಾ, ಕರಿಮಣಿ ನಾಯಕಿ ಸಾಹಿತ್ಯ ಪಾತ್ರಧಾರಿ ಸ್ಪಂದನಾ, ಗಿಚ್ಚಿಗಿಲಿಗಿಲಿ ಖ್ಯಾತಿಯ ಪ್ರಶಾಂತ್, ಮಂಜು ಪಾವಗಡ, ಸ್ಪೂರ್ತಿ ಗೌಡ, ಕೋಳಿ ರಮ್ಯಾ, ವಿವೇಕ್ ಸಿಂಹ ಸೇರಿದಂತೆ ಹಲವು ನಟ ನಟಿಯರು ಭಾಗಿಯಾಗಿದ್ದರು.
ಜಿಗರ್ ಇರೋ ಹುಡುಗ-ಹುಡುಗೀರ ಜಿದ್ದಾಜಿದ್ದಿ ಎಂಬ ಟ್ಯಾಗ್ ಲೈನ್ನ್ನೊಂದಿಗೆ ಫೆಬ್ರುವರಿ 1ರಿಂದ ಈ ಶೋ ತೆರೆಗೆ ಬಂದಿತ್ತು. ಇದೊಂದು ಸೆಲಿಬ್ರಿಟಿ ಶೋ ಆಗಿತ್ತು. ಸಿಕ್ಕಾಪಟ್ಟೆ ವಾಕ್ ಸಮರ, ಜಬರ್ದಸ್ತ್ ಮನರಂಜನೆ ನೀಡುತ್ತಿದ್ದರು. ಆದ್ರೇ ಇದೀಗ ಬಾಯ್ಸ್ vs ಗರ್ಲ್ಸ್ ಅಂತ್ಯ ಕಾಣುತ್ತಿದೆ. ಹೀಗಾಗಿ ಕೊನೆಯಲ್ಲಿ ಬಾಯ್ಸ್ vs ಗರ್ಲ್ಸ್ ಫಿನಾಲೆಯ ಗೆಲುವಿನ ಪಟ್ಟ ಯಾರ ತೆಕ್ಕೆಗೆ ಸೇರಲಿದೆ ಅಂತ ಕಾದು ನೋಡಬೇಕಿದೆ. ಸದ್ಯ ಕಲರ್ಸ್ ಕನ್ನಡ ತನ್ನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಒಂದೊಂದಾಗಿ ಗ್ರ್ಯಾಂಡ್ ಫಿನಾಲೆಯ ಪ್ರೋಮೋಗಳನ್ನು ರಿಲೀಸ್ ಮಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ