/newsfirstlive-kannada/media/post_attachments/wp-content/uploads/2024/09/JOBS_GOVT.jpg)
ಕೇಂದ್ರ ಸರ್ಕಾರದ ಪಶುಸಂಗೋಪನಾ ನಿಗಮ ಭಾರತೀಯ ಲಿಮಿಟೆಡ್ (ಬಿಪಿಎನ್​ಎಲ್​) ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ, ಜಾನುವಾರು ಸಾಕಣೆ ಹೂಡಿಕೆ ಸಹಾಯಕ ಹಾಗೂ ಜಾನುವಾರು ಸಾಕಣೆ ಕಾರ್ಯಾಚರಣಾ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು ಈಗಾಗಲೇ ಅರ್ಜಿಗಳು ಆರಂಭವಾಗಿವೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಈ ನೇಮಕಾತಿ ಅಭಿಯಾನದಲ್ಲಿ ಎರಡು ಸಾವಿರಕ್ಕೂ ಅಧಿಕ ಉದ್ಯೋಗಗಳು ಇವೆ. ನೇಮಕಾತಿಗೆ ಸಂಬಂಧಿಸಿದ ಅರ್ಹತೆ, ಮಾನದಂಡಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ ಸೇರಿ ಇತರೆ ಮಾಹಿತಿ ಇಲ್ಲಿ ನೀಡಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ಸಂಬಳ ನಿಗದಿ ಮಾಡಲಾಗಿದೆ. ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆಯನ್ನು ಒಳಗೊಂಡಿದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ನಂತರ ದಾಖಲೆ ಪರಿಶೀಲನೆ ಮತ್ತು ಒಂದು ದಿನದ ತರಬೇತಿ ಅವದಿಯನ್ನು ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.
ಹುದ್ದೆಯ ವಿವರಗಳು
ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ- 362
ಜಾನುವಾರು ಸಾಕಣೆ ಹೂಡಿಕೆ ಅಂಗಸಂಸ್ಥೆ- 1,428
ಜಾನುವಾರು ಸಾಕಣೆ ಕಾರ್ಯಾಚರಣಾ ಸಹಾಯಕ- 362
ಒಟ್ಟು ಹುದ್ದೆಗಳು- 2,152 ಕೆಲಸಗಳು ಇವೆ
ಮಾಸಿಕ ವೇತನ?
ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ- 38,200 ರೂಪಾಯಿಗಳು
ಜಾನುವಾರು ಸಾಕಣೆ ಹೂಡಿಕೆ ಅಂಗಸಂಸ್ಥೆ- 30,500 ರೂಪಾಯಿಗಳು
ಜಾನುವಾರು ಸಾಕಣೆ ಕಾರ್ಯಾಚರಣಾ ಸಹಾಯಕ- 20,000 ರೂಪಾಯಿ
ಇದನ್ನೂ ಓದಿ: KEA- ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ಹುದ್ದೆಗಳ ಪರೀಕ್ಷೆ ದಿನಾಂಕ ಘೋಷಣೆ
/newsfirstlive-kannada/media/post_attachments/wp-content/uploads/2025/02/COW_Buffalo_Milk.jpg)
ವಿದ್ಯಾರ್ಹತೆ
10ನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಪದವಿ
ಹುದ್ದೆಗೆ ತಕ್ಕಂತೆ ವಿದ್ಯಾರ್ಹತೆ​ ನಿಗದಿ ಮಾಡಲಾಗಿದೆ
ವಯೋಮಿತಿ
18 ರಿಂದ 45 ವರ್ಷದ ಒಳಗಿನವರಿಗೆ ಅವಕಾಶ
ಹುದ್ದೆಗೆ ತಕ್ಕಂತೆ ವಯಸ್ಸನ್ನು ನಿಗದಿ ಮಾಡಲಾಗಿದೆ
ಪ್ರಮುಖ ದಿನಾಂಕಗಳು ಮಾಹಿತಿ ಹೀಗಿದೆ
ಅರ್ಜಿ ಆರಂಭಗೊಂಡ ದಿನಾಂಕ- 20 ಫೆಬ್ರವರಿ 2025
ಅರ್ಜಿ ಕೊನೆಯ ದಿನಾಂಕ- 12 ಮಾರ್ಚ್ 2025
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
- ಆನ್​ಲೈನ್ ಪರೀಕ್ಷೆ
- ಸಂದರ್ಶನ
- ದಾಖಲಾತಿ ಪರಿಶೀಲನೆ
- ಒಂದು ದಿನದ ತರಬೇತಿ ಬಳಿಕ ಉದ್ಯೋಗಕ್ಕೆ ಆಯ್ಕೆ
ಅರ್ಜಿಗಾಗಿ ವೆಬ್​ಸೈಟ್​- http://www.bharatiyapashupalan.com
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us