Advertisment

ಬಿಹಾರದಲ್ಲಿ ನಡೆಯುತ್ತಿವೆ ವಿಲಕ್ಷಣ ಮದುವೆಗಳು.. ಶಾಲಾ ಶಿಕ್ಷಕರಾದವರು ಕಿಡ್ನಾಪ್ ಆಗುತ್ತಿರುವುದೇಕೆ?

author-image
Gopal Kulkarni
Updated On
ಬಿಹಾರದಲ್ಲಿ ನಡೆಯುತ್ತಿವೆ ವಿಲಕ್ಷಣ ಮದುವೆಗಳು.. ಶಾಲಾ ಶಿಕ್ಷಕರಾದವರು ಕಿಡ್ನಾಪ್ ಆಗುತ್ತಿರುವುದೇಕೆ?
Advertisment
  • ಬಿಹಾರದಲ್ಲಿ ದಿನೇ ದಿನೇ ಹೆಚ್ಚುತ್ತಿವೆ ಪಕಡ್ವಾ ವಿವಾಹ
  • ಸರ್ಕಾರಿ ನೌಕರಿ ಸೇರಿದ ಯುವಕರೇ ಇದಕ್ಕೆ ಟಾರ್ಗೆಟ್​
  • ಶಾಲಾ ಶಿಕ್ಷರಾದರಂತೂ ಕಿಡ್ನಾಪ್ ಆಗೋದು ಪಕ್ಕಾ !

ಬಿಹಾರದಲ್ಲಿ ಶಾಕಿಂಗ್ ಘಟನೆಯೊಂದು ನಡೆದು ಹೋಗಿದೆ. ಇತ್ತೀಚೆಗೆ ಶಾಲಾ ಶಿಕ್ಷಕನಾಗಿ ನೇಮಕಗೊಂಡಿದ್ದ ಯುವಕನನ್ನು ಗುಂಜನ  ಎಂಬ ಹುಡುಗಿಯ ಕಡೆಯ ಸಂಬಂಧಿಕರು ಕಿಡ್ನಾಪ್ ಮಾಡಿ ಒತ್ತಾಯದಿಂದ ಹುಡುಗಿಯೊಂದಿಗೆ ಮದುವೆ ಮಾಡಿದ್ದಾರೆ.ಶುಕ್ರವಾರದಂದು ಶಿಕ್ಷಕ ಅವಿನಾಶ್ ತಮ್ಮ ಪಾಡಿಗೆ ತಾವು ಕತಿಹಾರದಲ್ಲಿ ಶಾಲೆಯತ್ತ ಹೋಗುತ್ತಿದ್ದರು. ಈ ವೇಳೆ ಅಡ್ಡಹಾಕಿದ ಎರಡು ಸ್ಕಾರ್ಪಿಯೋ ಕಾರುಗಳಲ್ಲಿ ಬಂದ 12 ಜನ ಕಿರಾತಕರು ಆತನನ್ನು ಎತ್ತಿ ಕಾರಿನೊಳಗೆ ಮೂಟೆಯಂತೆ ಎಸೆದಿದ್ದಾರೆ. ಏನಾಗುತ್ತಿದೆ ಎನ್ನುವುದು ತಿಳಿಯುವಷ್ಟರಲ್ಲಿ ಅವಿನಾಶ್​ ಹುಡುಗಿಯ ಮನೆಯನ್ನು ಮುಟ್ಟಿದ್ದ.

Advertisment


">December 14, 2024

ಅಲ್ಲಿ ಎಲ್ಲ ರೀತಿಯ ಏರ್ಪಾಡುಗಳು ನಡೆದಿದ್ದವು. ಮದುಮಗಳಾಗಿ ಗುಂಜನ ಕೂಡ ಸಿದ್ಧಗೊಂಡಿದ್ದಳು. ಇದನ್ನು ಕಂಡ ಅವಿನಾಶ್​ ಮದುವೆಯ ಆಚರಣೆಗಳಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ್ದಾನೆ. ಆದರೂ ಕೂಡ ಆತನನ್ನು ಒತ್ತಾಯದಿಂದ ಮದುವೆಯ ಎಲ್ಲಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ. ಅಲ್ಲಿಂದ ಹಾಗೂ ಹೀಗೂ ಅವಿನಾಶ್ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಆದರೂ ಕೂಡ ಗುಂಜನ ಫ್ಯಾಮಿಯವರು ಆತನನ್ನು ಬಿಟ್ಟಿಲ್ಲ. ವಾಪಸ್ ಅವನ್ನು ಕರೆದುಕೊಂಡು ಗುಂಜನ ಮನೆಗೆ ಬಂದಿದೆ.

ಇದನ್ನೂ ಓದಿ:‘ಕೆಂಪುಕೋಟೆ ನಮಗೆ ಬಿಟ್ಟು ಕೊಡಬೇಕು’- ಹೈಕೋರ್ಟ್‌ನಲ್ಲಿ ಮೊಘಲ್ ವಂಶಸ್ಥರ ಅರ್ಜಿ; ಏನಿದು ವಿವಾದ?

Advertisment

ಗುಂಜನ್ ಕುಟುಂಬದವರು ಹೇಳುವ ಪ್ರಕಾರ ಅವಿನಾಶ್ ಹಾಗೂ ಗುಂಜನ ನಡುವೆ ಕಳೆದ ನಾಲ್ಕು ವರ್ಷಗಳಿಂದ ಪ್ರೇಮ ಪ್ರಣಯ ಜೋರಾಗಿ ನಡೆದಿತ್ತು ಹೀಗಾಗಿ ಅವನಿಂದಲೇ ಅವನಿಗೆ ತಾಳಿ ಕಟ್ಟಿಸಲಾಗಿದೆ ಎಂದು ಹೇಳಿದರೆ. ಅವಿನಾಶ್ ಮಾತ್ರ ಗುಂಜನ ಜೊತೆ ಯಾವುದೇ ರೀತಿಯ ಪ್ರಯಣವನ್ನು ನಡೆಸಿಲ್ಲ ಎಂದು ಹೇಳುತ್ತಿದ್ದಾರೆ. ಗುಂಜನ ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾಳೆ. ನಮ್ಮ ನಡುವೆ ಯಾವ ರೀತಿಯ ಸಂಬಂಧಗಳು ಇರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:46 ವರ್ಷಗಳ ನಂತರ ಮತ್ತೆ ದೇಗುಲ ಪತ್ತೆ; ಕಳ್ಳರ ಹುಡುಕಿ ಹೊರಟಾಗ ಶಿವನ ಸ್ಥಳ ಕಂಡಿದೆ..!

ಸದ್ಯ ಎರಡು ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸದ್ಯ ಬಿಹಾರದಲ್ಲಿ ಒಂದು ಶಬ್ದ ಜೋರಾಗಿ ಓಡುತ್ತಿದೆ. ಅದು ಪಕಡ್ವಾ ವಿವಾಹ್. ಅಂದ್ರೆ ಯುವಕರನ್ನು ಕಿಡ್ನಾಪ್ ಮಾಡಿ ಅವರಿಗೆ ಇಷ್ಟ ಇಲ್ಲದಿದ್ದರೂ ಕೂಡ ಹುಡುಗಿಯೊಂದಿಗೆ ಮದುವೆ ಮಾಡುವ ಕೆಲಸ. ಇದು 2024ರಲ್ಲಿ ಅತಿ ಹೆಚ್ಚು ಆಗಿತ್ತಿದೆ. ಅದರಲ್ಲಿಯೂ ಶಾಲಾ ಶಿಕ್ಷಕರ ಮೇಲೆಯೇ ಇಂತಹ ಕಿಡ್ನಾಪ್​ನಂತಹ ಘಟನೆಗಳು ನಡೆಯುತ್ತಿವೆ. 2024ರಲ್ಲಿ ಇದರ ಸಂಖ್ಯೆ ಹೆಚ್ಚಾಗುತ್ತಿದೆ.
ಸದ್ಯ ಅವಿನಾಶ್​ ಹಾಗೂ ಗುಂಜನ ವಿವಾಹ ಒತ್ತಾಯಪೂರ್ವಕವಾಗಿ ನಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿವಾಹದ ಕಾರ್ಯಗಳಲ್ಲಿ ಅವಿನಾಶ್ ಭಾಗಿಯಾಗಲು ಸಂಪೂರ್ಣವಾಗಿ ನಿರಾಕರಿಸುತ್ತಿರುವ ದೃಶ್ಯವೂ ಕೂಡ ಕಾಣಬಹುದು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment