/newsfirstlive-kannada/media/post_attachments/wp-content/uploads/2025/05/Preethi-Srinivasa.jpg)
ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೌಂದರ್ಯನ ಕಂಡ್ರೆ ವೀಕ್ಷಕರು ಅದೆಷ್ಟು ಶಾಪ ಹಾಕ್ತಾರೋ ಗೊತ್ತಿಲ್ಲ. ಗಂಡ ಬೇಡ, ಮಗು ಅಂತೂ ಮೊದಲೇ ಬೇಡ. ಸೌಂದರ್ಯಗೆ ತನ್ನ ಅಂದ ಚಂದ, ಆಸ್ತಿ, ಅಂತಸ್ತೆ ಮುಖ್ಯ. ಹೈ ಪೈ ಲೈಫ್ ಸ್ಟೈಲ್ಗೋಸ್ಕರ ಏನು ಬೇಕಾದ್ರೂ ಮಾಡೋಕೆ ರೆಡಿ ಇರೋ ಪಾತ್ರ ಸೌಂದರ್ಯ.
ಇದನ್ನೂ ಓದಿ: ಮಂಗಳೂರಲ್ಲಿ ಕರುಳು ಚುರ್ ಅನ್ನೋ ದೃಶ್ಯ.. ಗುಡ್ಡ ಕುಸಿತದಲ್ಲಿ ಸಿಲುಕಿ ಕೈ ಅಲ್ಲಾಡಿಸ್ತಿದೆ ಪುಟ್ಟ ಕಂದಮ್ಮ..
ಇದಿಷ್ಟು ತೆರೆಮೇಲಿನ ಸ್ಟೋರಿಯಾದರೇ, ಸೌಂದರ್ಯ ಪಾತ್ರಕ್ಕೆ ಬಣ್ಣ ಹಚ್ಚಿರೋ ನಟಿಯ ಹೆಸರು ಪ್ರೀತಿ ಶ್ರೀನಿವಾಸ್. ಅಂದಗಾತಿ ಅನ್ನೋದು ಬಿಟ್ಟರೇ ಪಾತ್ರಕ್ಕೂ ಇವರ ರಿಯಲ್ ಲೈಫ್ಗೂ ಸಂಬಂಧನೇ ಇಲ್ಲ. ಪಾತ್ರಕ್ಕೂ ನಿಜ ಜೀವನಕ್ಕೂ ತದ್ವಿರುದ್ಧ.
ಪ್ರೀತಿ ಸಿಕ್ಕಾಪಟ್ಟೆ ಸಾಫ್ಟ್ ವ್ಯಕ್ತಿತ್ವದವ್ರು. ಕುಟುಂಬವನ್ನ ತುಂಬಾ ಪ್ರೀತಿಸ್ತಾರೆ. ಹೀಗಾಗಿನೇ ಸಂಬಂಧಿಕರ ಹುಡುಗನನ್ನ ಅರೇಂಜ್ ಮ್ಯಾರೇಜ್ ಆಗಿದ್ರು. ಇವರ ಪತಿ ಡಾಕ್ಟರ್ ಆಗಿದ್ದಾರೆ.
ಪ್ರೀತಿ ಅವರ ಫ್ಯಾಮಿಲಿ ಬಗ್ಗೆ ಹೇಳೋಕೆ ಕಾರಣ ಮಗನ ಉಪನಯನದ ಕಾರ್ಯಕ್ರಮ. ಹೌದು, ಮಗನಿಗೆ ಬ್ರಹ್ಮೋಪದೇಶ ಕಾರ್ಯಕ್ರಮ ಮಾಡಿದ್ದಾರೆ ದಂಪತಿ. ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ಗ್ರ್ಯಾಂಡ್ ಆಗಿ ಕಾರ್ಯಕ್ರಮ ಜರುಗಿದೆ.
ಪ್ರೀತಿ ಶ್ರೀನಿವಾಸ್ ಅವರು ಮಗನಿಗೆ ಶಾಸ್ತ್ರೋಕ್ತವಾಗಿ ಉಪನಯನ ಮಾಡಿದ್ದಾರೆ. ಹಿರಿಯರು, ಆತ್ಮಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಗನಿಗೆ ಆಶೀರ್ವದಿಸಿರೋ ಖುಷಿಯನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ನಟಿ.
ಇನ್ನೂ, ನಟಿ ಎಲ್ಲಿ ಜಾರಿತೋ ಮನವೋ, ಸಂಬಂಧ, ಬಂಗಾರ, ಮಾಂಗಲ್ಯ, ಸಂಗೀತಾ, ಸರಸ್ವತಿ, ಜೀವನ ಚೈತ್ರ, ವರಲಕ್ಷ್ಮೀ ಸ್ಟೋರ್ಸ್ ಧಾರವಾಹಿಯಲ್ಲಿ ಬಣ್ಣ ಹಚ್ಚಿ, ತಮ್ಮ ಅದ್ಭುತ ಅಭಿನಯದ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ