ನಟಿ ಶೋಭಿತಾ ಶಿವಣ್ಣ ಕೇಸ್‌ಗೆ ಮೇಜರ್ ಟ್ವಿಸ್ಟ್‌; ಬೆಡ್‌ ರೂಂನಲ್ಲಿ ಎರಡೇ ಸಾಲಿನ ಡೆ*ತ್‌ ನೋಟ್‌ ಪತ್ತೆ!

author-image
admin
Updated On
ನಟಿ ಶೋಭಿತಾ ಶಿವಣ್ಣ ಕೇಸ್‌ಗೆ ಮೇಜರ್ ಟ್ವಿಸ್ಟ್‌; ಬೆಡ್‌ ರೂಂನಲ್ಲಿ ಎರಡೇ ಸಾಲಿನ ಡೆ*ತ್‌ ನೋಟ್‌ ಪತ್ತೆ!
Advertisment
  • 1 ದಿನದ ಬಳಿಕ ಶೋಭಿತಾ ಶಿವಣ್ಣ ಅವರ ಕೇಸ್‌ಗೆ ಮೇಜರ್ ಟ್ವಿಸ್ಟ್
  • ಡೆ*ತ್‌ ನೋಟ್‌ ಬರೆದಿದ್ದು ಶೋಭಿತಾ ಅವರೇನಾ ಅಲ್ವಾ ಅನ್ನೋ ತನಿಖೆ
  • ನಟಿ ಶೋಭಿತಾ ಶಿವಣ್ಣ ಅವರು ಕಡೆ ಬಾರಿ ಕರೆ ಮಾಡಿದ್ದು ಯಾರಿಗೆ?

ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಅವರ ಕೇಸ್‌ಗೆ 1 ದಿನದ ಬಳಿಕ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಹೈದರಾಬಾದ್‌ನಲ್ಲಿ ಗಂಡನ ಜೊತೆ ನೆಲೆಸಿದ್ದ ಶೋಭಿತಾ ಅವರು ನಿಗೂಢವಾಗಿ ಪ್ರಾಣ ಬಿಟ್ಟಿದ್ದಾರೆ. ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡ ಗಚ್ಚಿಬೋಲಿ ಪೊಲೀಸರು ಮಹತ್ವದ ಸುಳಿವು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: VIDEO: ಶೋಭಿತಾ ಡಿಪ್ರೆಶನ್‌ಗೆ ಹೋಗಿದ್ದಾಳೆ ಅಂದ್ರೆ ನಂಬೋಕೆ ಆಗಲ್ಲ.. ನಟ ಚಂದು ಗೌಡ ಬೇಸರ 

ಶೋಭಿತಾ ಶಿವಣ್ಣ ಅವರ ಶಾಕಿಂಗ್ ಸುದ್ದಿಯನ್ನ ಇನ್ನೂ ಕನ್ನಡ ಸೀರಿಯಲ್‌ ಸ್ಟಾರ್‌ಗಳು ನಂಬೋದಕ್ಕೆ ರೆಡಿ ಇಲ್ಲ. ಯಾವಾಗಲೂ ಕೇಳಿ ಬರುವ ಗಾಸಿಪ್ ಸುದ್ದಿಯಂತೆ ಇದೂ ಕೂಡ ಸುಳ್ಳು ಸುದ್ದಿಯಾಗಲು ಎಂದು ಆಸೆ ಪಟ್ಟಿದ್ದರು. ಆದರೆ ಶೋಭಿತಾ ಶಿವಣ್ಣ ದುರಂತ ಅಂತ್ಯ ಖಚಿತವಾಗುತ್ತಿದ್ದಂತೆ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

publive-image

ಶೋಭಿತಾ ಕೇಸ್‌ಗೆ ಮೇಜರ್ ಟ್ವಿಸ್ಟ್‌!
ಸುಧೀರ್ ಹಾಗೂ ಶೋಭಿತಾ ದಂಪತಿ ಹೈದರಾಬಾದ್‌ನ ಕೊಂಡಾಪುರ ಶ್ರೀರಾಮ ಕಾಲೋನಿಯಲ್ಲಿ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಶೋಭಿತಾ ಪತಿ ಸುಧೀರ್ ಅವರು ಕೆಲಸದ ನಿಮಿತ್ತ ಲ್ಯಾಪ್ ಟಾಪ್‌ನಲ್ಲಿ ಕೆಲಸ ಮಾಡುತ್ತಾ ಹಾಲ್‌ನಲ್ಲಿ‌ ನಿದ್ರೆಗೆ ಜಾರಿದ್ದರು. ಶೋಭಿತಾ ಅವರು ಬೆಡ್‌ ರೂಂನಲ್ಲಿ ಇದ್ದರು. ನವೆಂಬರ್‌ 29ರ ತಡರಾತ್ರಿ ಪತಿ ಸುಧೀರ್ ಮನೆಯಲ್ಲಿದ್ದಾಗಲೇ ಶೋಭಿತಾ ಅವರು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

publive-image

ಶೋಭಿತಾ ಶಿವಣ್ಣ ಮಲಗಿದ್ದ ಬೆಡ್‌ರೂಂ ಪರಿಶೀಲನೆ ನಡೆಸಿದ ಪೊಲೀಸರಿಗೆ ಡೆ*ತ್‌ ನೋಟ್ ಕೂಡ ಸಿಕ್ಕಿದೆ. ಅದರಲ್ಲಿ ಶೋಭಿತಾ ಅವರು ಕೇವಲ ಎರಡು ಲೈನ್ ಅಷ್ಟೇ ಬರೆದಿದ್ದಾರೆ ಎನ್ನಲಾಗಿದೆ.
Everything is Perfect
Su*icide You Can do it

ಎಲ್ಲವೂ ಪರಿಪೂರ್ಣವಾಗಿದೆ. ಆತ್ಮ*ಹತ್ಯೆಯನ್ನು ನೀವು ಮಾಡಿಕೊಳ್ಳಬಹುದು ಎಂದು ಬರೆದಿರೋ ಶೋಭಿತಾ ಅವರು ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ಇದೆ. ಡೆ*ತ್‌ ನೋಟ್‌ ವಶಕ್ಕೆ ಪಡೆದಿರೋ ಪೊಲೀಸರು ಇದನ್ನ ಬರೆದಿದ್ದು ಶೋಭಿತಾ ಅವರೇನಾ ಅಲ್ವಾ ಅನ್ನೋ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.

publive-image

ಕೊನೆ ಬಾರಿ ಕಾಲ್ ಮಾಡಿದ್ದು ಯಾರಿಗೆ?
ಸೈಬರಾಬಾದ್‌ ಗಚ್ಚಿಬೋಲಿ ಪೊಲೀಸರು ಡೆ*ತ್‌ ನೋಟ್‌ ಜೊತೆಗೆ ಶೋಭಿತಾ ಶಿವಣ್ಣ ಅವರ ಎರಡು ಮೊಬೈಲ್ ಸೀಜ್ ಮಾಡಿ ತನಿಖೆ ಮುಂದುವರಿಸಿದ್ದಾರೆ. ಶೋಭಿತಾ ಅವರು ಕಡೆ ಬಾರಿ ಬೆಂಗಳೂರಿನಲ್ಲಿ ನೆಲೆಸಿರುವ ತನ್ನ ಸಹೋದರಿಗೆ ಕಾಲ್ ಮಾಡಿದ್ದಾರೆ. ಒಂದು ವಾರದ ಬಳಿಕ ಬೆಂಗಳೂರಿಗೆ ಬರೋದಾಗಿ ಸಹೋದರಿ ಜೊತೆ ಶೋಭಿತ ಫೋನ್‌ನಲ್ಲಿ ಮಾತನಾಡಿದ್ದಾರೆ.

ಪತಿ ಸುಧೀರ್‌ಗೆ ಖಡಕ್ ಸೂಚನೆ!
ತನಿಖೆ ನಡೆಸುತ್ತಿರುವ ಗಚ್ಚಿಬೋಲಿ ಪೊಲೀಸರು ಶೋಭಿತಾ ಪತಿ ಸುಧೀರ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸುಧೀರ್ ಮೊಬೈಲ್ ವಶಕ್ಕೆ ವಶಕ್ಕೆ ಪಡೆದಿದ್ದು, ಸುಧೀರ್ ಹಾಗೂ ಶೋಭಿತಾ ನಡುವಿನ ಚಾಟಿಂಗ್ಸ್ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚೆಗೆ ಶೋಭಿತಾ ಮತ್ತು ಸುಧೀರ್ ಗೋವಾ ಟ್ರಿಪ್‌ಗೆ ಹೋಗಿದ್ದರು. ಗೋವಾ ಹೋಗಿ ಬಂದ ನಂತರ ಶೋಭಿತಾ ಅವರು ಮಂಕಾಗಿದ್ದರು. ಮದುವೆಯಾದಾಗಿನಿಂದ ಸೀರಿಯಲ್‌ಗಳಿಂದ ಶೋಭಿತಾ ಅವರು ದೂರು ಉಳಿದಿದ್ದರು. ಹೀಗಾಗಿ ಅವರು ಶೋಭಿತಾ ಅವರು ಡಿಪ್ರೆಶನ್‌ಗೆ ಒಳಗಾಗಿದ್ರಾ ಅನ್ನೋ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಶೋಭಿತಾ ಅವರ ಪತಿ ಸುಧೀರ್ ಅವರಿಗೆ ಗಚ್ಚಿಬೋಲಿ ಪೊಲೀಸರು ತಮ್ಮ ಅನುಮತಿ ಇಲ್ಲದೇ ಹೈದರಾಬಾದ್ ಬಿಟ್ಟು ತೆರಳದಂತೆ ಖಡಕ್‌ ಸೂಚನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment