/newsfirstlive-kannada/media/post_attachments/wp-content/uploads/2024/12/Shobhita-Shivanna-Hassan.jpg)
ಹಾಸನ: ಸಕಲೇಶಪುರದ ಪುಟ್ಟ ಗ್ರಾಮದಲ್ಲಿ ಬೆಳೆದು ಹಲವಾರು ಸೀರಿಯಲ್, ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ಶೋಭಿತಾ ಶಿವಣ್ಣ ಅವರು ಇಂದು ಶವವಾಗಿ ಹುಟ್ಟೂರಿಗೆ ಮರಳಿದ್ದಾರೆ. ಪ್ರತಿ ಬಾರಿ ಊರಿಗೆ ಬಂದಾಗ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದ ಶೋಭಿತಾ ಶಿವಣ್ಣ ಅವರು ಈಗ ಚಿರನಿದ್ರೆಗೆ ಜಾರಿದ್ದಾರೆ. ಶೋಭಿತಾ ಅವರ ಮೃತದೇಹವನ್ನು ನೋಡಿದ ನೂರಾರು ಸ್ನೇಹಿತರು, ಬಂಧುಗಳು ಕಣ್ಣೀರು ಹಾಕಿದ್ದಾರೆ.
ಕಳೆದ 2 ದಿನಗಳ ಹಿಂದೆ ಕಿರುತೆರೆ ನಟಿ ಶೋಭಿತಾ ಶಿವಣ್ಣ ಅವರು ಹೈದರಾಬಾದ್‌ನಲ್ಲಿ ಸಾವನ್ನಪ್ಪಿದ್ದರು. ಪೋಸ್ಟ್ ಮಾರ್ಟಂ ಹಾಗೂ ಪೊಲೀಸರ ಪರಿಶೀಲನೆ ಬಳಿಕ ಮೃತದೇಹವನ್ನು ಶೋಭಿತಾ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.
ಇದನ್ನೂ ಓದಿ:VIDEO: ಶೋಭಿತಾ ಡಿಪ್ರೆಶನ್‌ಗೆ ಹೋಗಿದ್ದಾಳೆ ಅಂದ್ರೆ ನಂಬೋಕೆ ಆಗಲ್ಲ.. ನಟ ಚಂದು ಗೌಡ ಬೇಸರ
ಶೋಭಿತಾ ಶಿವಣ್ಣ ಅವರ ಮೃತದೇಹವನ್ನು ಇಂದು ಸಕಲೇಶಪುರ ತಾಲ್ಲೂಕಿನ ಹೇರೂರಿಗೆ ತರಲಾಗಿತ್ತು. ನೂರಾರು ಸ್ನೇಹಿತರು, ಅಕ್ಕಂದಿರು, ಕುಟುಂಬ ಸದಸ್ಯರು ಅಗಲಿದ ನಟಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ತಮ್ಮೂರಿನ ಹೆಮ್ಮೆಯ ಮಗಳನ್ನ ಕಳೆದುಕೊಂಡಿದ್ದಕ್ಕೆ ಹುಟ್ಟೂರಿನ ಜನ ಕಣ್ಣೀರಿಟ್ಟಿದ್ದಾರೆ.
ಶೋಭಿತಾ ಅವರ ದುರಂತದ ಸುದ್ದಿ ಕೇಳಿ ಸ್ನೇಹಿತರು ಶಾಕ್ ಆಗಿದ್ದು, ಶೋಭಿತಾ ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುತ್ತೇವೆ ಎಂದಿದ್ದಾರೆ. ಇನ್ನು ಹುಟ್ಟೂರಿನ ಜನರು ಶೋಭಿತಾ ತಂದೆ ಶಿವಣ್ಣ ಅವರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು.
ಇದನ್ನೂ ಓದಿ: ನಟಿ ಶೋಭಿತಾ ಶಿವಣ್ಣ ಕೇಸ್‌ಗೆ ಮೇಜರ್ ಟ್ವಿಸ್ಟ್; ಬೆಡ್ ರೂಂನಲ್ಲಿ ಎರಡೇ ಸಾಲಿನ ಡೆ*ತ್ ನೋಟ್ ಪತ್ತೆ!
ಬಹಳ ಕಷ್ಟದಲ್ಲಿ ಬೆಳೆದ ಶೋಭಿತಾ ಶಿವಣ್ಣ ಅವರು ಹುಟ್ಟೂರಿನಲ್ಲಿ ಒಂದು ಮನೆಯನ್ನು ಕಟ್ಟಿಸಿದ್ದರು. ಮದುವೆಯಾಗಿ ಒಂದೂವರೆ ವರ್ಷ ಆಗಿತ್ತು ಅಷ್ಟೇ. ದೇವರ ಕಾರ್ಯಕ್ಕೆ ಬಂದು ಹೋಗುತ್ತಿದ್ದರು. ಶೋಭಿತಾ ಅವರು ಸಾಕಷ್ಟು ಎತ್ತರಕ್ಕೆ ಬೆಳೆಯಬೇಕಿತ್ತು. ಅಕ್ಕ-ತಂಗಿಯರು, ಮನೆಯವರು ಸಾಕಷ್ಟು ಪ್ರೋತ್ಸಾಹ ನೀಡಿದ್ದರು ಎಂದು ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರು ತಿಳಿಸಿದ್ದಾರೆ.
ಶೋಭಿತಾ ಅವರ ತಂದೆಯ ಜಮೀನಿನಲ್ಲಿ ಕುಟುಂಬ ಸದಸ್ಯರು ನಟಿ ಶೋಭಿತಾ ಶಿವಣ್ಣ ಅವರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಶೋಭಿತಾ ಅವರ ಈ ದುಡುಕಿನ ನಿರ್ಧಾರ ಮತ್ತು ಘೋರ ದುರಂತಕ್ಕೆ ಹೇರೂರು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ