ಬ್ರಹ್ಮಗಂಟು ನಟಿ ಶೋಭಿತಾ ಶಿವಣ್ಣ ಬದುಕಿನಲ್ಲಿ ಅಸಲಿಗೆ ಆಗಿದ್ದೇನು? ಮದುವೆಯಾದ ಮೇಲೆ ಏನಾಯ್ತು?

author-image
admin
Updated On
ನಟಿ ಶೋಭಿತಾ ಶಿವಣ್ಣ ಕೇಸ್‌ಗೆ ಮೇಜರ್ ಟ್ವಿಸ್ಟ್‌; ಬೆಡ್‌ ರೂಂನಲ್ಲಿ ಎರಡೇ ಸಾಲಿನ ಡೆ*ತ್‌ ನೋಟ್‌ ಪತ್ತೆ!
Advertisment
  • ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಶೋಭಿತಾ ಎಂಟ್ರಿ
  • ಕನ್ನಡಿಗರ ಮನೆ ಮಾತಾಗಿದ್ದ ನಟಿ ಶೋಭಿತಾ ಶಿವಣ್ಣ ಇನ್ನು ನೆನಪು ಮಾತ್ರ
  • ಹೈದರಾಬಾದ್‌ನಲ್ಲಿ ಮದುವೆಯಾಗಿ ಅಲ್ಲಿಯೇ ನೆಲೆಸಿದ್ದ ಬ್ರಹ್ಮಗಂಟು ‘ಪಿಂಕಿ’

ಕನ್ನಡದ ಬ್ರಹ್ಮಗಂಟು ಸೀರಿಯಲ್​ ನಟಿ ಶೋಭಿತಾ ಶಿವಣ್ಣ ದುರಂತ ಅಂತ್ಯ ಕಂಡಿದ್ದಾರೆ. ಕಿರುತೆರೆಯಲ್ಲಿ ನಟಿಸಿ ಕನ್ನಡಿಗರ ಮನೆ ಮಾತಾಗಿದ್ದ ನಟಿ ಶೋಭಿತಾ ಇನ್ನು ನೆನಪು ಮಾತ್ರ. ಶೋಭಿತಾ ಶಿವಣ್ಣ ಅವರು ಇನ್ನಿಲ್ಲ ಅನ್ನೋ ಸುದ್ದಿ ಕೇಳಿ ಕನ್ನಡ ಕಿರುತೆರೆಯ ನಟ, ನಟಿಯರು ಶಾಕ್​ ಆಗಿದ್ದಾರೆ.

ಹಾಸನ ಸಕಲೇಶಪುರ ಮೂಲದ ನಟಿ ಶೋಭಿತಾ, ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಮೀನಾಕ್ಷಿ ಮದುವೆ ಸೇರಿ ಹತ್ತು ಹಲವು ಧಾರಾವಾಹಿಯಲ್ಲಿ ನಟಿಸಿ ಕಿರುತೆರೆಯಲ್ಲಿ ತಮ್ಮದೇ ಆದ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು.

publive-image

ಬ್ರಹ್ಮಗಂಟು ಸೀರಿಯಲ್​ನಲ್ಲಿ ‘ಪಿಂಕಿ’ ಆಗಿ ಮಿಂಚಿದ್ದ ಶೋಭಿತಾ
ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಶೋಭಿತಾ ಶಿವಣ್ಣ, ಬ್ರಹ್ಮಗಂಟು ಧಾರವಾಹಿ ಮೂಲಕ ಖ್ಯಾತಿಗಳಿಸಿದ್ದರು. ಸೀರಿಯಲ್​​ನಲ್ಲಿ ಪಿಂಕಿ ಅನ್ನೋ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶೋಭಿತಾ ತಮ್ಮ ನಟನೆಯ ಮೂಲಕವೇ ಎಲ್ಲರ ಮನಗೆದ್ದಿದ್ದರು.

publive-image

ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲೂ ಶೋಭಿತಾ ಮಿಂಚು
ನಟಿ ಶೋಭಿತಾ ಕೇವಲ ಕನ್ನಡ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲೂ ಮಿಂಚು ಹರಿಸಿದ್ರು. ವಂದನಾ, 'ಅಟೆಂಪ್ಟ್‌ ಟು ಮರ್ಡರ್‌', 'ಜಾಕ್‌ಪಾಟ್' ಸಿನಿಮಾಗಳಲ್ಲಿ ನಟಿಸಿದ್ದರು. ಅಲ್ಲದೇ ತೆಲುಗಿನ ಧಾರಾವಾಹಿಗಳಲ್ಲಿ ಸಹ ನಟಿಸಿದ್ದರು.

publive-image

ಮದುವೆ ಬಳಿಕ ಶೋಭಿತಾ ಕಿರುತೆರೆಯಿಂದ ಅಂತರ
ಶೋಭಿತಾ ಶಿವಣ್ಣ ಅವರು 2023ರ ಮೇನಲ್ಲಿ ಹೈದ್ರಾಬಾದ್​​ ಸಾಫ್ಟ್‌ವೇರ್ ಎಂಜಿನಿಯರ್ ಸುಧೀರ್‌ ಅನ್ನು ಮದುವೆಯಾಗಿ ಅಲ್ಲಿಯೇ ಸೆಟಲ್​ ಆಗಿದ್ದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನಟನೆಯಿಂದ ಅಂತರ ಕಾಯ್ದುಕೊಂಡು ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿದ್ದರು. ಆದ್ರೆ ಎಲ್ಲೂ ಕೂಡ ತಮ್ಮ ಪತಿಯ ಬಗ್ಗೆ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಶೋಭಿತಾ ಸಾವಿನ ಕಾರಣ ನಿಗೂಢವಾಗಿದ್ದು, ಮರಣೋತ್ತರ ಪರೀಕ್ಷೆ ನಂತರವೇ ಅಸಲಿ ಕಾರಣ ಏನು ಅನ್ನೋದು ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment