ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಶಿವಣ್ಣ ದುರಂತ ಅಂತ್ಯ.. ಆಗಿದ್ದೇನು?

author-image
Veena Gangani
Updated On
ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಶಿವಣ್ಣ ದುರಂತ ಅಂತ್ಯ.. ಆಗಿದ್ದೇನು?
Advertisment
  • ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ನಿಧನ
  • ನಟಿಯ ಸಾವಿನ ಸುದ್ದಿ ಕೇಳಿ ಕಿರುತೆರೆ ನಟ ನಟಿಯರು ಶಾಕ್
  • ತಾನು ಇಷ್ಟಪಟ್ಟಿದ್ದ ಹುಡುಗನ ಜೊತೆಗೆ ಮದುವೆಯಾಗಿದ್ದ ನಟಿ

ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಸಾವನ್ನಪ್ಪಿದ್ದಾರೆ. ಕಿರುತೆರೆ ಸ್ಟಾರ್​ ನಟಿ ಹೈದರಾಬಾದ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ ಎಂಬ ಮಾಹಿತಿ ನ್ಯೂಸ್​ ಫಸ್ಟ್​ಗೆ ಲಭ್ಯವಾಗಿದೆ.

ಇದನ್ನೂ ಓದಿ:ಕರ್ಣಾಟಕ ಬ್ಯಾಂಕ್​ನಿಂದ ಗುಡ್​ನ್ಯೂಸ್; ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

publive-image

ಬ್ರಹ್ಮಗಂಟು, ನಿನ್ನಿಂದಲೇ ಹೀಗೆ ಹಲವು ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ನಟಿ ಶೋಭಿತಾ ಶಿವಣ್ಣ. ಅದರಲ್ಲೂ ಬ್ರಹ್ಮಗಂಟು ಸೀರಿಯಲ್​​ನಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ನಟಿ ಶೋಭಿತಾ ಶಿವಣ್ಣ ಅವರಿಗೆ ಸಾಕಷ್ಟು ಫ್ಯಾನ್ಸ್​ ಬಳಗ ಇತ್ತು.

publive-image

ಇನ್ನೂ ನಟಿ ಶೋಭಿತಾ ಶಿವಣ್ಣ ಅವರು ಮೇ 22 2023ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ನಟಿ ಶೋಭಿತಾ ಶಿವಣ್ಣ ಅವರು ಮದುವೆಯಾದ ಹುಡುಗನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

publive-image

ಆದರೆ ಮದುವೆಯ ನಂತರ ನಟಿ ಹೈದರಾಬಾದ್‌ನಲ್ಲಿ ವಾಸವಾಗಿದ್ದರು. ಮಧ್ಯರಾತ್ರಿ ಶೋಭಿತಾ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ, ಈ ಶಾಕಿಂಗ್ ಸುದ್ದಿ ತಿಳಿದ ಶೋಭಿತಾ ಕುಟುಂಬಸ್ಥರು ಆಪ್ತ ಸ್ನೇಹಿತರು ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment