newsfirstkannada.com

ಮೆದುಳು ತಿನ್ನೋ ಅಮೀಬಾ.. ಮೂವರ ಸಾವಿನ ಬೆನ್ನಲ್ಲೇ ಮತ್ತೊಬ್ಬ ಬಾಲಕನಲ್ಲಿ ಪತ್ತೆ; ಬೆಚ್ಚಿ ಬಿದ್ದ ಕೇರಳ!

Share :

Published July 6, 2024 at 10:21pm

  ಮೇ ತಿಂಗಳಿನಿಂದ ಮೆದುಳು ತಿನ್ನುವ ಅಮೀಬಾಗೆ ಮೂವರು ಬಲಿ

  ಇದೀಗ ಮತ್ತೊಬ್ಬ ಬಾಲಕನಲ್ಲಿ ಮೆದುಳು ತಿನ್ನೋ ಅಮೀಬಾ ಪತ್ತೆ

  ವಿದೇಶದಿಂದ ಔಷಧ ತರಿಸಿ ಬಾಲಕನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ದೇಶದಲ್ಲಿ ಮೆದುಳು ತಿನ್ನುವ ವಿಚಿತ್ರ ಅಮೀಬಾದ ಅಟ್ಟಹಾಸ ಜೋರಾಗಿದೆ. ಕೇರಳದಲ್ಲಿ ಇದುವರೆಗೂ ವಿಚಿತ್ರ ಮಿದುಳು ತಿನ್ನುವ ಅಮೀಬಾದಿಂದ ಮೂವರು ಸಾವನ್ನಪ್ಪಿದ್ದಾರೆ. ದಿನಕಳೆದಂತೆ ಮತ್ತೊಬ್ಬ ಬಾಲಕನಲ್ಲಿ ಅಮೀಬಾ ದೃಢಪಟ್ಟಿರೋದು ಆತಂಕ ಹೆಚ್ಚಿಸಿದೆ.

ಕೇರಳದಲ್ಲಿ ಮೇ ತಿಂಗಳಿನಿಂದ ಮೆದುಳು ತಿನ್ನುವ ಅಮೀಬಾಗೆ 15 ವರ್ಷದೊಳಗಿನ ಮೂವರು ಬಾಲಕರ ಸಾವನ್ನಪ್ಪಿದ್ದಾರೆ. ಇದೀಗ ಕೊಯಿಕ್ಕೋಡ್‌ನಲ್ಲಿ ನಾಲ್ಕನೇ ಪ್ರಕರಣ ಪತ್ತೆಯಾಗಿದೆ. ಪಯೋಲಿಯ ಅನ್ನೋ 14 ವರ್ಷದ ಬಾಲಕನಲ್ಲಿ ಮೆದುಳು ತಿನ್ನುವ ಅಮೀಬಾ ಪತ್ತೆಯಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: VIDEO: ಆ್ಯಸಿಡ್​ ದಾಳಿಗೆ ನರಳಾಡುತ್ತಿರೋ ವಿದ್ಯಾರ್ಥಿನಿ.. ಎಂಥಾ ಕಲ್ಲೆದೆಯು ಈ ದೃಶ್ಯ ಕಂಡಾಗ ಕರಗದೆ ಇರದು! 

ಇತ್ತೀಚೆಗೆ ಅಂದ್ರೆ ಜುಲೈ 1ರಂದು 14 ವರ್ಷದ ಬಾಲಕ ಆಸ್ಪತ್ರೆಗೆ ದಾಖಲಾಗಿದ್ದ. ಪರೀಕ್ಷೆ ನಡೆಸಿದ ವೈದ್ಯರು ಅಮೀಬಾ ಇರೋದನ್ನ ಪತ್ತೆ ಮಾಡಿದ್ದಾರೆ. ಸದ್ಯ ವಿದೇಶದಿಂದ ಔಷಧ ತರಿಸಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಮೀಬಾ ಹೇಗೆ ಬರುತ್ತೆ?
ಮೆದುಳು ತಿನ್ನುವ ಈ ವಿಚಿತ್ರ ಅಮೀಬಾ ನೀರಿನಿಂದ ಮಕ್ಕಳ ದೇಹ ಸೇರುತ್ತದೆ. ಸ್ವಿಮ್ಮಿಂಗ್ ಫೂಲ್, ಕೆರೆ ಕಟ್ಟೆಗಳ ನೀರಿನಿಂದ ಅಮೀಬಾ ಮಕ್ಕಳ ದೇಹ ಸೇರುತ್ತದೆ.

ಕೇರಳ ಸಿಎಂ ಉನ್ನತ ಸಭೆ
ಅಮೀಬಾ ನಾಲ್ಕನೇ ಪ್ರಕರಣ ಪತ್ತೆಯಾದ ಕೂಡಲೇ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕಲುಷಿತ ನೀರಿನಲ್ಲಿ ಸ್ನಾನ ಮಾಡದಂತೆ ಜನರಿಗೆ ಮಹತ್ವದ ಸೂಚನೆ ನೀಡಲಾಗಿದೆ. ಜೊತೆಗೆ ಸ್ವಿಮ್ಮಿಂಗ್ ಫೂಲ್, ಕೆರೆ ಕಟ್ಟೆಗಳ ನೀರು ಅನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆದುಳು ತಿನ್ನೋ ಅಮೀಬಾ.. ಮೂವರ ಸಾವಿನ ಬೆನ್ನಲ್ಲೇ ಮತ್ತೊಬ್ಬ ಬಾಲಕನಲ್ಲಿ ಪತ್ತೆ; ಬೆಚ್ಚಿ ಬಿದ್ದ ಕೇರಳ!

https://newsfirstlive.com/wp-content/uploads/2024/07/brain-eating-amoeba.jpg

Load More