Advertisment

ಮೆದುಳು ಸದಾ ಚುರುಕಾಗಿ, ಆ್ಯಕ್ಟಿವ್​ ಆಗಿ ಕೆಲಸ ಮಾಡಬೇಕಾ..? ಹಾಗಾದ್ರೆ ಮಾಡಬೇಕಾಗಿದ್ದು ಇಷ್ಟೇ!

author-image
Bheemappa
Updated On
ಮೆದುಳು ಸದಾ ಚುರುಕಾಗಿ, ಆ್ಯಕ್ಟಿವ್​ ಆಗಿ ಕೆಲಸ ಮಾಡಬೇಕಾ..? ಹಾಗಾದ್ರೆ ಮಾಡಬೇಕಾಗಿದ್ದು ಇಷ್ಟೇ!
Advertisment
  • ಎಷ್ಟೇ ವಯಸ್ಸಾದ್ರೂ ಥಟ್​ ಅಂತ ಮೆದುಳು ವರ್ಕ್​ ಆಗಬೇಕಾ?
  • ಹೆಚ್ಚು ನಿದ್ದೆ ಮಾಡುವುದರಿಂದ ಮೆದುಳಿಗೆ ವಿಶ್ರಾಂತಿ ನೀಡಬಹುದು
  • ಮೆದುಳು ಸದಾ ಆ್ಯಕ್ಟಿವ್​ ಆಗಿರಲು ನಾವು ಎನೇನು ಮಾಡಬೇಕು?

ಮೆದುಳು ನಮ್ಮ ದೇಹದ ಪ್ರಮುಖವಾದ ಅಂಗ. ಈ ಒಂದು ಅಂಗದಿಂದ ದೇಹದ ಎಲ್ಲ ಅಂಗಗಳು ನಿರ್ದಿಷ್ಟವಾಗಿ ಕೆಲಸ ಮಾಡಲು ಶುರು ಮಾಡುತ್ತವೆ. ಮಗುವಿನಿಂದ ಹಿಡಿದು ವೃದ್ಧರವರೆಗೆ ಮೆದುಳು ವಯಸ್ಸಿಗೆ ತಕ್ಕಂತೆ ಕೆಲಸ ಮಾಡುತ್ತದೆ. ಮಕ್ಕಳಲ್ಲಿ ಮೆದುಳಿನ ಸೆಲ್​ಗಳು ಸರಿಯಾಗಿ ಬೆಳವಣಿಗೆ ಆಗದ ಕಾರಣದಿಂದ ಮಕ್ಕಳು ಕೆಲವೊಂದು ವಿಚಾರಗಳನ್ನು ಬೇಗ ಅರ್ಥೈಸಿಕೊಳ್ಳಲು ಆಗಲ್ಲ. ವಯಸ್ಸಿಗೆ ತಕ್ಕಂತೆ ಮೆದುಳು ಬೆಳೆದಂತೆ ಜ್ಞಾನ ಕೂಡ ಬೆಳೆಯುತ್ತೆ.

Advertisment

ವೃದ್ಧರು ಆಗುತ್ತಿದ್ದಂತೆ ಮೆದುಳಿನ ಕೆಲವೊಂದು ಸೆಲ್​ಗಳು ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತವೆ. ಹೀಗಾಗಿ ಅವರಲ್ಲಿ ಮರೆವು ಸಹಜವಾಗಿ ಮೂಡುತ್ತದೆ. ಇದನ್ನೇ ನಾವು 60ರ ಅರುವು ಮರವು ಎಂದು ಕರೆಯುವುದುಂಟು. ಇಳಿ ವಯಸ್ಸಿನಲ್ಲಿ ಮೆದುಳು ಸಮಸ್ಯೆ ಬರುವುದು ಸಾಮಾನ್ಯ. ಈ ವೇಳೆ ವೈದ್ಯರ ಸಲಹೆ ಪಡೆದು ಆರೋಗ್ಯಕರವಾದ ಆಹಾರ ಸೇವನೆ ಮಾಡಿದ್ರೆ ಒಂದಿಷ್ಟು ನೆನಪಿನ ಶಕ್ತಿ ಕಾಪಾಡಿಕೊಂಡು ಹೋಗಬಹುದು.

publive-image

ಮೆದುಳು ಸದಾ ಕ್ರಿಯೇಟಿವ್​ ಆಗಿರಲು ಏನು ಮಾಡಬೇಕು?

ಮೆದುಳಿಗೆ ಹೊಸದನ್ನು ಕಲಿಯಬೇಕು ಎಂದರೇ ಇಷ್ಟ. ಹೀಗಾಗಿ ಹೊಸ ಭಾಷೆಗಳು, ಮ್ಯೂಸಿಕ್​, ಸಾಂಗ್ಸ್​ ಅನ್ನು ಕೇಳುವುದರ ಜೊತೆ ಜೊತೆಗೆ ಹೇಗೆ ಸಂಯೋಜನೆ ಮಾಡುವುದೆಂದು ಕಲಿಯುತ್ತಿದ್ದರೇ ನಿಮ್ಮ ಜ್ಞಾನ ವಿಸ್ತರಿಸುತ್ತದೆ.

ನಿಯಮಿತ ಧ್ಯಾನವು ಮಾನಸಿಕ ಆರೋಗ್ಯಕ್ಕೆ ಹಲವಾರು ಪ್ರಯೋಜನ ನೀಡುತ್ತದೆ. ಒತ್ತಡ, ಆತಂಕ, ಖಿನ್ನತೆ ಕಡಿಮೆ ಮಾಡುತ್ತದೆ. ಇದು ಶಾಂತತೆಯನ್ನು ಉತ್ತೇಜಿಸುತ್ತದೆ. ಸ್ಮರಣೆಯನ್ನು ಸುಧಾರಿಸಿ ಮೆದುಳಿನ ಕಾರ್ಯ ಹೆಚ್ಚಿಸುತ್ತದೆ.

Advertisment

publive-image

ಮೆದುಳು ಕ್ರಿಯಾಶೀಲವಾಗಿರಲು ಸದಾ ದೈಹಿಕ ಚಟುವಟಿಕೆಗಳಲ್ಲಿ ತೊಡಗಬೇಕು. ಸಂಬಂಧಿಕರ ಅಥವಾ ಸ್ನೇಹಿತರೊಂದಿಗೆ ಬೆಳಗ್ಗೆ, ಸಂಜೆ ವಾಕ್​​​ ಮಾಡುವುದು ಉತ್ತಮ.

ವಿಡಿಯೋ ಗೇಮ್ಸ್​ ಹಾಗೂ ಮೊಬೈಲ್​ನಲ್ಲಿ ಗೇಮ್ಸ್​ ಆಡುವುದರಿಂದ ಮೆದುಳನ್ನು ಸಕ್ರಿಯಗೊಳಿಸಬಹುದು. ಆದ್ರೆ ಇದನ್ನು ತೀವ್ರ ಮಿತಿಯಲ್ಲಿ ಆಡಬೇಕು. ಗೇಮ್ಸ್​ಗೆ ಅಡಿಕ್ಟ್​ ಆಗಬಾರದು.

ದೇಹದಂತೆ ಮೆದುಳಿಗೆ ವಿಶ್ರಾಂತಿ ಬೇಕೇ ಬೇಕು. ಹೆಚ್ಚು ನಿದ್ದೆ ಮಾಡುವುದರಿಂದ ಮೆದುಳನ್ನು ರೀಚಾರ್ಜ್ ಮಾಡಬಹುದು.

Advertisment

ಚೆಸ್​, ಕೇರಂ, ಟೇಬಲ್​ ಟೆನ್ನಿಸ್​, ಸೆಟ್ಲ್​ ಕಾಕ್, ಖೋ ಖೋನಂತಹ ಆಟಗಳನ್ನು ಆಡುವುದರಿಂದ ಮೆದುಳು ಆರೋಗ್ಯವಾಗಿರುತ್ತೆ.

ನಾವು ನಿತ್ಯ ಯಾವುದಾದ್ರೂ ವಿಷಯಕ್ಕೆ ನಗುವುದರಿಂದ ಮೆದುಳನ್ನು ತಾಜಾ ಮತ್ತು ಆರೋಗ್ಯಕರವಾಗಿ ಇಡಬಹುದು.

ಇದನ್ನೂ ಓದಿ: ಯೋಗ ಇದ್ದಲ್ಲಿ ಆರೋಗ್ಯ ಭಾಗ್ಯ -ಯೋಗ ಆಚರಣೆಗೆ ಸಂಬಂಧಿಸಿದ ಮುತ್ತಿನಂಥ ಮಾತುಗಳು..!

Advertisment

publive-image

ನೆನಪಿನ ಶಕ್ತಿ ವೃದ್ಧಿಗೆ ಈ ದಿನಚರಿ ಪಾಲಿಸಿ

  • ಮಕ್ಕಳಾಗಲಿ, ವೃದ್ಧರಗಾಲಿ ಅಥವಾ ಮಹಿಳೆಯರೇ ಆಗಲಿ, ತಮ್ಮ ನೆನಪಿನ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕಾದ್ರೆ ಹೀಗೆ ಮಾಡಿ
  • ನೆನಪಿನ ಶಕ್ತಿ ವೃದ್ಧಿಗೆ ನಿತ್ಯ 2 ಚಮಚ ಜೇನುತುಪ್ಪವನ್ನು ಹಾಲಿಗೆ ಹಾಕಿ ಕುಡಿಯಬೇಕು.
  • ಇತ್ತೀಚಿನ ಸಂಶೋಧನೆ ಪ್ರಕಾರ ತಲೆಗೆ ಶ್ಯಾಂಪು ಬಳಸುವುದರಿಂದ ನೆನಪಿನ ಶಕ್ತಿ ಕುಂದುತ್ತದೆ ಎನ್ನಲಾಗ್ತಿದೆ
  • ಮಲಗುವಾಗ ತಲೆ ದಿಂಬು ದೊಡ್ಡದಾಗಿ ಇರಬಾರದು, ಜೊತೆಗೆ ವಿಪರೀತ ಮಾನಸಿಕ ಒತ್ತಡ ಅನುಭವಿಸಬಾರದು.
  • ತುಳಸಿ ಕಷಾಯ ಸೇವಿಸಬೇಕು. ಆಗಾಗ ಜೀರಿಗೆ ಕಷಾಯ ಕೂಡ ಸೇವಿಸುವುದು ಮೆದುಳಿಗೆ ಒಳ್ಳೆಯದು.
  • ಮೆದುಳಿಗೆ ಸಮಸ್ಯೆ ಆಗಬಾರದು ಎಂದರೆ 1 ಲೋಟ ಹಸು ಹಾಲಿನ ಜೊತೆಗೆ 2 ಚಮಚ ಜೇನುತುಪ್ಪ, 1 ಚಮಚ ಹಸು ತುಪ್ಪ ಸೇರಿಸಿ ಕುಡಿಯಬೇಕು.
  • ನಿತ್ಯ ವ್ಯಾಯಾಮದಿಂದ ಮೆದುಳು ಚುರುಕುಗೊಳ್ಳುತ್ತದೆ. ವ್ಯಾಯಾಮ ಮಾಡುವಾಗ ಮೆದುಳಿಗೆ ರಕ್ತದ ಹರಿವು ಹೆಚ್ಚಿ ಆರೋಗ್ಯ ಸುಧಾರಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment