ಕಾಡು ಉಳಿಸೋ ಶೃಂಗಸಭೆ, ಆದ್ರೆ ಸಾವಿರಾರು ಮರಗಳನ್ನೇ ಕಡಿದರು; Amazon ಅಲ್ಲಿ ಅರಣ್ಯರೋಧನ!

author-image
Veena Gangani
Updated On
ಕಾಡು ಉಳಿಸೋ ಶೃಂಗಸಭೆ, ಆದ್ರೆ ಸಾವಿರಾರು ಮರಗಳನ್ನೇ ಕಡಿದರು; Amazon ಅಲ್ಲಿ ಅರಣ್ಯರೋಧನ!
Advertisment
  • ಶೃಂಗಸಭೆಗಾಗಿ ಸಾವಿರಾರು ಎಕರೆಯಲ್ಲಿ ಹೊಸ 4 ಪಥದ ಹೆದ್ದಾರಿ ನಿರ್ಮಾಣ
  • ರಸ್ತೆಗಾಗಿ ಅಮೆಜಾನ್ ಕಾಡಿನಲ್ಲಿ ಸಾವಿರಾರು ಮರಗಳ ಮಾರಣಹೋಮ
  • ದೊಡ್ಡ ದೇಶವಾಗಿರುವ ಬ್ರೆಜಿಲ್‌ನಲ್ಲಿ 20 ಕೋಟಿಗೂ ಅಧಿಕ ಜನರು ವಾಸ

ಬ್ರೆಸಿಲಿಯಾ: ಹವಾಮಾನ ಶೃಂಗಸಭೆಗಾಗಿ ರಸ್ತೆ ನಿರ್ಮಿಸಲು ಬ್ರೆಜಿಲ್ ಅಮೆಜಾನ್ ಮಳೆಕಾಡಿನಲ್ಲಿ ಸಾವಿರಾರು ಮರಗಳನ್ನು ಕಡಿದು ಹಾಕಲಾಗಿದೆ. COP30 ಹವಾಮಾನ ಶೃಂಗಸಭೆಗಾಗಿ ರಸ್ತೆ ನಿರ್ಮಿಸಲು ಅಮೆಜಾನ್ ಮಳೆಕಾಡಿನಲ್ಲಿ ಸಾವಿರಾರು ಮರಗಳನ್ನು ಕಡಿದಿದ್ದಕ್ಕಾಗಿ ಬ್ರೆಜಿಲ್ ಟೀಕೆಗಳನ್ನು ಎದುರಿಸುತ್ತಿದೆ.

ನ್ನೂ ಓದಿ: ಒಂದೇ ಮನೆಯಲ್ಲಿ ನಾಲ್ವರ ದುರಂತ ಅಂತ್ಯ.. ವೈದ್ಯ ಕುಟುಂಬವೇ ಮಾಡಿಕೊಂಡ ಅನಾಹುತ; ಕಾರಣವೇನು?

publive-image

ಅಮೆಜಾನ್ ಅರಣ್ಯ ಪ್ರದೇಶದಲ್ಲಿ ಅತ್ಯಧಿಕ ಖನಿಜ ಸಂಪನ್ಮೂಲಗಳನ್ನು ಹೊಂದಿದೆ. ದಕ್ಷಿಣ ಅಮೆರಿಕಾ ಖಂಡದ ಅತಿ ದೊಡ್ಡ ದೇಶವಾಗಿರುವ ಬ್ರೆಜಿಲ್‌ನಲ್ಲಿ 20 ಕೋಟಿಗೂ ಅಧಿಕ ಜನರು ವಾಸವಾಗಿದ್ದಾರೆ. ಅಮೆಜಾನ್ ಅರಣ್ಯ ಪ್ರದೇಶದ ಶೇ.60ರಷ್ಟು ಭಾಗ ಬ್ರೆಜಿಲ್‌ನಲ್ಲಿಯೇ ಬರುತ್ತದೆ. ಹಾಗಾಗಿ ಬ್ರೆಜಿಲ್ ಅತ್ಯಧಿಕ ನೈಸರ್ಗಿಕ ಸಂಪನ್ಮೂಲ ಹೊಂದಿರುವ ದೇಶವಾಗಿದೆ. ಇಷ್ಟು ದಟ್ಟ ಅರಣ್ಯ ಪ್ರದೇಶ ಹೊಂದಿರುವ ಬ್ರೆಜಿಲ್‌ನ ಬೆಲೆಮ್ ನಗರದಲ್ಲಿ COP30 ಹವಾಮಾನ ಶೃಂಗಸಭೆಗಾಗಿ ಸಾವಿರಾರು ಎಕರೆಯಲ್ಲಿ ಹೊಸ ನಾಲ್ಕು ಪಥದ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ.

publive-image

ಮುಂಬರುವ ನವೆಂಬರ್‌ನಲ್ಲಿ ನಡೆಸುತ್ತಿರೋ ಸಮ್ಮೇಳನದಲ್ಲಿ ವಿಶ್ವ ನಾಯಕರು ಸೇರಿದಂತೆ 50,000 ಕ್ಕೂ ಹೆಚ್ಚು ಜನರು ಭಾಗವಹಿಸಲಿರುವ ಕಾರಣದಿಂದ ಈ ನಗರಕ್ಕೆ ಸಂಚಾರವನ್ನು ಸುಗಮಗೊಳಿಸುವ ಗುರಿಯ ಸಲುವಾಗಿ ಈ ಯೋಜನೆ ಜಾರಿ ಮಾಡಿದೆ. ಅಮೆಜಾನ್ ಅರಣ್ಯ ಪ್ರದೇಶದಲ್ಲಿ ಪ್ರತಿವರ್ಷ ಲಕ್ಷಾಂತರ ಮರಗಳನ್ನು ಕಡಿದು ಜನರು ವ್ಯವಸಾಯ ಮಾಡಲು ಆರಂಭಿಸುತ್ತಿದ್ದಾರೆ.


">March 13, 2025

ಅರಣ್ಯ ಪ್ರದೇಶದಲ್ಲಿ ಮರಗಳ ಮಾರಣಹೋಮ ನಡೆಸಿ ಸಾವಿರಾರು ಎಕರೆಯಲ್ಲಿ ಹೊಸ ನಾಲ್ಕು ಪಥದ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ. ಈ ಹಿಂದೆ 2004ರಲ್ಲಿ 1.98 ಮಿಲಿಯನ್ ಹೆಕ್ಟೇರ್​ನಷ್ಟು ಕಾಡು ನಾಶ ಮಾಡಲಾಗಿತ್ತು. ಆನಂತರ 2021ರ ಆಗಸ್ಟ್‌ನಿಂದ 2022ರ ಜುಲೈವರೆಗೆ ಹೆಚ್ಚು ಅರಣ್ಯ ನಾಶವಾಗಿತ್ತು. ಈ ಅವಧಿಯಲ್ಲಿ ಒಟ್ಟು 11,568 ಚದರ ಕಿಲೋ ಮೀಟರ್, 2023ರಲ್ಲಿ 9,117 ಚ.ಕಿ.ಮೀ.ನಷ್ಟು ಕಾಡನ್ನು ನಾಶ ಮಾಡಲಾಗಿದೆ ಎಂದ ಬ್ರೆಜಿಲ್ ಸರ್ಕಾರವೇ ಮಾಹಿತಿ ನೀಡಿತ್ತು. ಆದರೆ ಇದೀಗ ಮತ್ತೆ ಹೆದ್ದಾರಿಯನ್ನು ನಿರ್ಮಿಸಲು ಅಮೆಜಾನ್ ಕಾಡನ್ನು ನಾಶ ಮಾಡೋದಕ್ಕೆ ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment