newsfirstkannada.com

ಮನೆ, ಸೇತುವೆ, ರಸ್ತೆಗಳೆಲ್ಲಾ ಜಲಸಮ.. ಚಂಡಮಾರುತ ಹೊಡೆತಕ್ಕೆ 37 ಜನರು ಸಾವು, 74 ಜನರು ಕಣ್ಮರೆ

Share :

Published May 4, 2024 at 12:05pm

    ಮಳೆಯ ಅವಾಂತರ.. 10 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರ

    ತುರ್ತು ಪರಿಸ್ಥಿತಿ ಘೋಷಿಣೆ.. 37 ಜನರು ಸಾವು, 74 ಜನರು ನಾಪತ್ತೆ

    ಸಂತ್ರಸ್ತರ ರಕ್ಷಣೆಗಿಳಿದ ಸೈನಿಕರು.. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಕೀನ್ಯಾ, ತಂಜಾನಿಯಾದಲ್ಲಿ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇತ್ತ ಬ್ರೆಜಿಲ್​ನಲ್ಲೂ ಜನರು ಮಳೆ, ಚಂಡಮಾರುತ, ಪ್ರವಾಹದಿಂದ ತತ್ತರಿಸಿಹೋಗಿದ್ದಾರೆ. ಈಗಾಗಲೇ ಕೆಲವರು ಸಾವನ್ನಪ್ಪಿದ್ದ, ಇನ್ನು ಹಲವರು ನಾಪತ್ತೆಯಾಗಿದ್ದಾರೆ.

ಬ್ರೆಜಿಲ್​ನ ದಕ್ಷಿಣ ರಿಯೋ ಗ್ರಾಂಡೆ ಡೊ ಸುಲ್​ ರಾಜ್ಯದಲ್ಲಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಮಣ್ಣು ಕುಸಿತದಿಂದ ಸುಮಾರು 37 ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಸಂಸ್ಥೆ ನೀಡಿದ ವರದಿಯಂತೆ 74 ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದೆ.

ರಿಯೋ ಗ್ರಾಂಡೆ ಡೊ ಸುಲ್​ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಮಳೆಯಿಂದಾಗಿ ಮನೆಗಳು, ಸೇತುವೆಗಳು, ರಸ್ತೆಗಳು ಕುಸಿದಿವೆ. ಮತ್ತೊಂದೆಡೆ ಚಂಡಮಾರುತ ಬೀಸುತ್ತಿವೆ. ಮಳೆಯ ಅವಾಂತರಕ್ಕೆ 36 ಜನರು ಗಾಯಗೊಂಡಿದ್ದಾರೆ. 10 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

ಜನರ ರಕ್ಷಣೆಗಾಗಿ 12 ವಿಮಾನಗಳು, 45 ವಾಹನಗಳು, 12 ದೋಣಿಗಳು ಮತ್ತು 626 ಸೈನಿಕರು ರಕ್ಷಣಾ ಕಾರ್ಯ ಮಾಡುತ್ತಿದ್ದಾರೆ. ಸಂತ್ರಸ್ತ ಜನರಿಗೆ ಆಹಾರ, ನೀರು, ಹಾಸಿಗೆ ಜೊತೆಗೆ ಆಶ್ರಯ ವ್ಯವಸ್ಥೆ ಕಲ್ಪಿಸಿದ್ದಾರೆ.

ರಿಯೋ ಗ್ರಾಂಡೆ ಡೊ ಸುಲ್​ ರಾಜ್ಯದ ಪ್ರಮುಖ ನದಿಯಾದ ಗೈವಾ ಉಕ್ಕಿ ಹರಿಯುತ್ತಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆ, ಸೇತುವೆ, ರಸ್ತೆಗಳೆಲ್ಲಾ ಜಲಸಮ.. ಚಂಡಮಾರುತ ಹೊಡೆತಕ್ಕೆ 37 ಜನರು ಸಾವು, 74 ಜನರು ಕಣ್ಮರೆ

https://newsfirstlive.com/wp-content/uploads/2024/05/Brazil.jpg

Load More