/newsfirstlive-kannada/media/post_attachments/wp-content/uploads/2023/12/US-Police1.jpg)
ಫೋನ್ ಕೊಡದಿದ್ದಕ್ಕೆ ಅಪ್ರಾಪ್ತ ಬಾಲಕನೊಬ್ಬ ತನ್ನ ತಂದೆ, ತಾಯಿ ಹಾಗೂ ಸಹೋದರಿಯ ಮೇಲೆ ಫೈರಿಂಗ್ ಮಾಡಿ ಕೊಲೆಗೈದಿದ್ದಾನೆ. ಈ ಘಟನೆಯು ಬ್ರೆಜಿಲ್ನ ರಿಯೋ ಡಿ ಜನೈರೊದ ಸಾವೊ ಪಾಲೊದಲ್ಲಿನ ವಿಲಾ ಜಗ್ವಾರಾದಲ್ಲಿ ನಡೆದಿದೆ.
ಕೊಲೆ ಮಾಡಿದ ಹಂತಕ ಅಪ್ರಾಪ್ತನಾಗಿದ್ದರಿಂದ ಹೆಸರನ್ನು ಪೊಲೀಸರು ಹೇಳಿಲ್ಲ. ಇನ್ನು ಹತ್ಯೆಯಾದವರನ್ನು ಪೊಲೀಸ್ ಅಧಿಕಾರಿ ಐಸಾಕ್ ತವರೆಸ್ ಸ್ಯಾಂಟೋಸ್ (57), ಇವರ ಪತ್ನಿ ಸೊಲಾಂಗೆ ಅಪರೆಸಿಡಾ ಗೋಮ್ಸ್ (50) ಮತ್ತು ಇವರ ಮಗಳು ಲೆಟಿಸಿಯಾ ಗೋಮ್ಸ್ ಸ್ಯಾಂಟೋಸ್ ಎಂದು ಗುರುತಿಸಲಾಗಿದೆ. ಇವರ ಸಣ್ಣ ಮಗನೆ ಮೂವರ ಸಾವಿಗೆ ಕಾರಣವಾಗಿದ್ದಾನೆ ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಸದ್ಯ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಅವಳಿ ಮಕ್ಕಳಿಗೆ ಜನ್ಮ ನೀಡಿ ಕಣ್ಮುಚ್ಚಿದ ಜನನಿ.. ಲಕ್ಷ ಲಕ್ಷ ಬಿಲ್ ಮಾಡಿದ್ದ ಆಸ್ಪತ್ರೆ ಏನು ಮಾಡ್ತು ಗೊತ್ತಾ?
ತನ್ನ ಶಾಲೆಗೆ ಸಂಬಂಧಿಸಿದ ಕೆಲಸಕ್ಕೆ ಮೊಬೈಲ್ ಬೇಕಾಗಿತ್ತು. ಆದ್ರೆ ಪೋಷಕರು ಮೊಬೈಲ್ ಕೊಡದಿದ್ದಕ್ಕೆ ಮನೆಯಲ್ಲಿ ಬಾಲಕ ತನ್ನ ತಂದೆ ಗನ್ ಅನ್ನು ತೆಗೆದುಕೊಂಡಿದ್ದಾನೆ. ಮೊದಲು ತನ್ನ ತಂದೆಯನ್ನು ಶೂಟ್ ಮಾಡಿದ್ದಾನೆ. ಗನ್ ಸೌಂಡ್ ಕೇಳಿದ ಸಹೋದರಿ ಬಂದು ಈ ಬಗ್ಗೆ ಕೇಳುವಾಗಿ ಆಕೆ ಮೇಲೂ ಫೈರಿಂಗ್ ಮಾಡಿದ್ದಾನೆ. ನಂತರ ಕೆಲಸದ ನಿಮಿತ್ತ ಹೊರ ಹೋಗಿದ್ದ ತಾಯಿ ಬಂದು ಮಗನನ್ನು ಪ್ರಶ್ನೆ ಮಾಡಿದ್ದಾಳೆ. ಅಷ್ಟೇ ತಾಯಿಗೂ ಶೂಟ್ ಮಾಡಿ ಆರೋಪಿ ಬಾಲಕ ಕೊಲೆಗೈದಿದ್ದಾನೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 3 ಕಿಲೋ ಮೀಟರ್ ದೂರ ಕೇಳಿಸಿದ ಸ್ಫೋಟದ ಸದ್ದು.. 6 ಮಂದಿ ಸಾವು; ಆಗಿದ್ದೇನು?
ಇನ್ನು ಎರಡು ದಿನ ಆದ್ರೂ ಬಾಲಕ ಹತ್ಯೆಯ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಅಲ್ಲದೇ ಈ ಘಟನೆಯನ್ನು ಯಾರು ಕೂಡ ನೋಡಿರಲಿಲ್ಲ. ಆದ್ದರಿಂದ 2 ದಿನ ಮನೆಯಲ್ಲಿ ಮೃತದೇಹಗಳು ಇದ್ದವು. ಬಳಿಕ ಯಾರೋ ಪೊಲೀಸರಿಗೆ ಕರೆ ಮಾಡಿ ವಿಷ್ಯ ತಿಳಿಸಿದ ಮೇಲೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಎಲ್ಲವನ್ನು ತನಿಖೆ ನಡೆಸಿ ಬಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ