ಬ್ರೇಕ್ ಅಪ್ ಸಾಂಗ್‌ ಬರೆದ್ರಾ ಚಂದನ್ ಶೆಟ್ಟಿ.. ಹೊಸ ಹಿಟ್ ಜೋಡಿ! ಯಾರು ಈ ಚಂದ್ರ ಚಕೋರಿ?

author-image
admin
Updated On
ಬ್ರೇಕ್ ಅಪ್ ಸಾಂಗ್‌ ಬರೆದ್ರಾ ಚಂದನ್ ಶೆಟ್ಟಿ.. ಹೊಸ ಹಿಟ್ ಜೋಡಿ! ಯಾರು ಈ ಚಂದ್ರ ಚಕೋರಿ?
Advertisment
  • ಬಿಗ್‌ ಬಾಸ್ ಮಾಜಿ ಸ್ಪರ್ಧಿ ನಿವೇದಿತಾ ಅವರಿಗೆ ಡಿವೋರ್ಸ್‌
  • ರಿಲೀಸ್ ಆದ ಒಂದೇ ದಿನಕ್ಕೆ ಟ್ರೆಂಡ್‌ ಆದ ಕಾಟನ್ ಕ್ಯಾಂಡಿ!
  • ಒಡೆದ ಹೃದಯ ಒಳ್ಳೆಯ ಸಾಹಿತ್ಯ ಬರೆಯುತ್ತದೆ ಎಂದ ಫ್ಯಾನ್ಸ್‌

ಕನ್ನಡದ ಱಪ್ ಸಿಂಗರ್ ಚಂದನ್ ಶೆಟ್ಟಿ ಬಹಳ ದಿನಗಳ ಬಳಿಕ ಮತ್ತೆ ತಮ್ಮ ಅಭಿಮಾನಿಗಳ ಹಾರ್ಟ್ ಬೀಟ್ ಜಾಸ್ತಿ ಮಾಡಿದ್ದಾರೆ. ಕನ್ನಡದಲ್ಲಿ ಹಲವು ಹಿಟ್ ಸಾಂಗ್‌ಗಳನ್ನು ನೀಡಿರುವ ಚಂದನ್ ಶೆಟ್ಟಿ ಅವರು ಹೊಸ ಸಾಂಗ್ ಬಿಡುಗಡೆಯಾಗಿದೆ. ರಿಲೀಸ್ ಆದ ಒಂದೇ ದಿನದಲ್ಲಿ ಕಾಟನ್ ಕ್ಯಾಂಡಿ ಹಾಡು ಸಖತ್ ಹಿಟ್ ಆಗಿದ್ದು, ಹೊಸ ಟ್ರೆಂಡ್‌ಗೆ ಸೇರ್ಪಡೆಯಾಗಿದೆ.

ಬಿಗ್‌ ಬಾಸ್ ಮಾಜಿ ಸ್ಪರ್ಧಿ ನಿವೇದಿತಾ ಅವರಿಗೆ ಡಿವೋರ್ಸ್‌ ಕೊಟ್ಟ ಬಳಿಕ ಗಾಯಕ ಚಂದನ್ ಶೆಟ್ಟಿ ಅವರು ಒಂದು ಒಳ್ಳೆಯ ಕಮ್‌ ಬ್ಯಾಕ್‌ಗಾಗಿ ಕಾಯುತ್ತಿದ್ದರು. ಕಾಟನ್ ಕ್ಯಾಂಡಿ ಹಾಡು ಚಂದನ್ ಶೆಟ್ಟಿ ಅವರ ಖದರ್ ಮರುಕಳಿಸುವಂತೆ ಮಾಡಿದ್ದು, ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

publive-image

ಕಾಟನ್ ಕ್ಯಾಂಡಿ ಹಾಡಿನಲ್ಲಿ ಚಂದನ್ ಶೆಟ್ಟಿ ಅವರು ಬ್ರೇಕ್ ಅಪ್ ಆದ ಹುಡುಗಿ ಡ್ರಾಪ್ ಕೇಳಿದಾಗ ಕಾರು ನಿಲ್ಲಿಸಿದ್ದಾರೆ. ಆಗ ಏನಾಯ್ತು ಅಂತ ಚಂದನ್ ಶೆಟ್ಟಿ ಕೇಳುತ್ತಾರೆ. ಡ್ರಾಪ್ ಕೇಳಿದ ಹುಡುಗಿ ಇದು ಬ್ರೇಕ್ ಅಪ್ ಎಂದಿದ್ದಾರೆ. ಬ್ರೇಕ್ ಅಪ್ ಹುಡುಗಿಗೆ ಚಂದನ್ ಶೆಟ್ಟಿ ಕೂಡ ನಂದೂ ಅಷ್ಟೇ ಬ್ರೇಕ್ ಅಪ್ ಎಂದು ಲಿಫ್ಟ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಒಂಟಿಯಾದ ಚಂದನ್ ಶೆಟ್ಟಿ ಮನೆಗೆ ಹೊಸ ಅತಿಥಿ; ಏನಿದರ ಸ್ಪೆಷಲ್? ಲೆಜೆಂಡ್‌ ಕಾರಿನ ರೇಟ್ ಎಷ್ಟು? 

ಇವಳೇನಾ ಲಂಡನ್ ಕ್ವೀನು.. ಮಂಗಳೂರು ಬಂಗಡ ಮೀನು.. ತಾನಾಗೇ ಬುಟ್ಟಿಗೆ ಬಿತ್ತು ಎಂದು ಫುಲ್ ಗಮ್ಮತ್ತಿನಲ್ಲಿ ಚಂದನ್ ಶೆಟ್ಟಿ ಮಸ್ತ್‌ ಡ್ಯಾನ್ಸ್ ಮಾಡಿದ್ದಾರೆ. ಕಾಟನ್ ಕ್ಯಾಂಡಿ ಹಾಡಿನಲ್ಲಿ ಸುಶ್ಮಿತಾ ಗೋಪಿನಾಥ್ ಅವರು ಚಂದನ್ ಶೆಟ್ಟಿಗೆ ಸಾಥ್ ನೀಡಿದ್ದಾರೆ. ಈ ಹಾಡು ಮ್ಯೂಸಿಕ್‌ನಲ್ಲಿ ಫುಲ್ ಟ್ರೆಂಡಿಂಗ್‌ನಲ್ಲಿದೆ.

ಕಾಟನ್ ಕ್ಯಾಂಡಿ ಹಾಡು ಕೇಳಿದ ಚಂದನ್ ಶೆಟ್ಟಿ ಅಭಿಮಾನಿಗಳು ಸಾಹಿತ್ಯಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಒಡೆದ ಹೃದಯ ಒಳ್ಳೆಯ ಸಾಹಿತ್ಯ ಬರೆಯುತ್ತದೆ ಅನ್ನೋದಕ್ಕೆ ಇದೇ ಉದಾಹರಣೆ ಎಂದು ಇದು ಚಂದನ್ ಶೆಟ್ಟಿ ಅವರ ಬ್ರೇಕ್ ಅಪ್ ಸಾಂಗ್ ಅನ್ನೋ ಹಣೆ ಪಟ್ಟಿ ಕಟ್ಟಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕಾಟನ್ ಕ್ಯಾಂಡಿ ಹಾಡು ಫುಲ್ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment