newsfirstkannada.com

×

BREAKING: ಬೆಂಗಳೂರಲ್ಲಿ ಮತ್ತೋರ್ವ ಶಂಕಿತ ಉಗ್ರನ ಬಂಧನ; ಐದು ಬಾಂಬ್ ಇಟ್ಟಿದ್ದ ಪ್ರಳಯಾಂತಕ

Share :

Published September 26, 2024 at 3:03pm

Update September 26, 2024 at 3:10pm

    ಬೆಂಗಳೂರಿನ ಜಿಗಣಿಯಲ್ಲಿ ಶಂಕಿತ ಉಗ್ರನನ್ನು ಬಲೆಗೆ ಕೆಡವಿದ ಎನ್​ಐಎ

    ಗಿರಿಶ್ ಬೋರಾ @ ಗೌತಮ್ ಬಂಧಿತ ಶಂಕಿತ ಉಗ್ರನನ್ನು ಬಂಧಿಸಿದ ಎನ್​ಐಎ

    ಗುವಾಹತಿಯಲ್ಲಿ IED ಬಾಂಬ್ ಇಟ್ಟು ಬೆಂಗಳೂರಿಗೆ ಬಂದಿದ್ದ ಶಂಕಿತ

ಬೆಂಗಳೂರಲ್ಲಿ ಅಸ್ಸಾಂ ಮೂಲದ ಶಂಕಿತ ಉಗ್ರನನ್ನು ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಗಿರೀಶ್ ಬೋರಾ ಅಲಿಯಾಸ್ ಗೌತಮ್ ಅನ್ನೋ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.

ಇದನ್ನೂ ಓದಿ: ಮಹಾಲಕ್ಷ್ಮಿಯನ್ನು ಕ್ರೂರವಾಗಿ ಕೊಲ್ಲೋದಕ್ಕೆ ಇದೇ ಮುಖ್ಯ ಕಾರಣ.. ಕೊನೆಗೂ ಆ ರಹಸ್ಯ ಬಯಲು!

ಉಗ್ರ ಗೌತಮ್ ಉಲ್ಫಾ ಸಂಘಟನೆಗೆ ಸೇರಿದವನು ಎಂಬುದು ಆರಂಭಿಕ ಮಾಹಿತಿಯಲ್ಲಿ ತಿಳಿದು ಬಂದಿದೆ. ಗುವಾಹತಿಯಲ್ಲಿ ಐಇಡಿ ಬಾಂಬ್ ಇಟ್ಟು ಬೆಂಗಳೂರಿಗೆ ಫ್ಯಾಮಿಲಿ ಸಮೇತ ಬಂದಿದ್ದ ಈ ಉಗ್ರ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಗೌತಮ್ ಎನ್ನುವ ಹೆಸರಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಪಕ್ಕಾ ಮಾಹಿತಿಯನ್ನು ಪಡೆದ ಎನ್​ಐಎ ತಂಡ ಈತನನ್ನು ಬಲೆಗೆ ಕೆಡವಿದೆ. ಗುವಹಾತಿಯಲ್ಲಿ ಒಟ್ಟು ಐದು IED ಬಾಂಬ್​ಗಳನ್ನು ಇಟ್ಟಿದ್ದ ಈತ ಬೆಂಗಳೂರಿನ ಜಿಗಣಿಗೆ ಬಂದು ವಾಸವಾಗಿದ್ದ.

ಇದನ್ನೂ ಓದಿ: ಮಹಾಲಕ್ಷ್ಮಿಯನ್ನು ಪೀಸ್‌, ಪೀಸ್ ಮಾಡಿದ ಹಂತ*ಕ ಮೊಬೈಲ್‌ನ್ನು ಎಲ್ಲಿ ಇಟ್ಟು ಹೋಗಿದ್ದ ಗೊತ್ತಾ?

ಇಲ್ಲಿಯೂ ಕೂಡ ಒಂದಷ್ಟು ವಿಧ್ವಂಸಕಾರಿ ಕೃತ್ಯಕ್ಕೆ ಯೋಜನೆ ನಡೆಸಿದ್ದ ಎಂಬ ಮಾಹಿತಿಗಳು ಕೂಡ ತಿಳಿದು ಬಂದಿವೆ. ಬಂಧಿತನಿಂದ ಮೊಬೈಲ್ ಮತ್ತು ಒಂದಷ್ಟು ದಾಖಲೆಗಳನ್ನ ವಶಕ್ಕೆ ಪಡೆದಿರುವ ಎನ್​ಐಎ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ಅಸ್ಸಾಂಗೆ ಕರೆದೊಯ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಬೆಂಗಳೂರಲ್ಲಿ ಮತ್ತೋರ್ವ ಶಂಕಿತ ಉಗ್ರನ ಬಂಧನ; ಐದು ಬಾಂಬ್ ಇಟ್ಟಿದ್ದ ಪ್ರಳಯಾಂತಕ

https://newsfirstlive.com/wp-content/uploads/2024/09/TERRORIST-ARREST-IN-JIGANI.jpg

Load More