/newsfirstlive-kannada/media/post_attachments/wp-content/uploads/2024/11/SKODA-KYLAQ.jpg)
ಸ್ಕೋಡಾ ಇಂಡಿಯಾ ತನ್ನ ಬಹುನಿರೀಕ್ಷಿತ ಕೈಲಾಕ್ ಕಾರ್ನ್ನು ಲಾಂಚ್ ಮಾಡಿದೆ. ಕೇವಲ 7.89 ಲಕ್ಷ ಶೋರೂಮ್ ಬೆಲೆಗೆ ಈ ಕಾರು ಗ್ರಾಹಕರಿಗೆ ಸಿಗಲಿದೆ.ಈ ಒಂದು ಕಾರ್ನ ಬುಕ್ಕಿಂಗ್ ಪ್ರಕ್ರಿಯೆ ಡಿಸೆಂಬರ್ 2 ರಿಂದ ಆರಂಭವಾಗಲಿದೆ. ಜನವರಿ 27 2025ರಿಂದ ಡಿಲೆವರಿ ಕಾರ್ಯಗಳು ಶುರುವಾಗಲಿವೆ ಎಂದು ಹೇಳಲಾಗಿದೆ. ಈ ಒಂದು ಕಾರ್ ಮುಂದೆ ಮಾರುಕಟ್ಟೆಯಲ್ಲಿ ಹುಂಡೈ ವೆನ್ಯು, ಟಾಟಾ ನೆಕ್ಷಾನ್, ಮಾರುತಿ ಸುಜುಕಿ ಬ್ರೆಜ್ಜಾ ಇವುಗಳಿಗೆ ಟಕ್ಕರ್ ಕೊಡಲಿದೆ ಎಂದೇ ಹೇಳಲಾಗಿದೆ. ಅತ್ಯಾಧುನಿಕ ಫೀಚರ್ಸ್ ಹಾಗೂ ಐಷಾರಾಮಿ ಲುಕ್ ಇರುವ ಈ ಕಾರ್ ಗ್ರಾಹಕರ ಕೈಗೆಟುಕುವ ದರದಲ್ಲಿ ದಕ್ಕಲಿದೆ.
ಸ್ಕೋಡಾ ಕೈಲಾಕ್ ಗೋಲ್ಡ್ ಗ್ರಿಲ್ನಲ್ಲಿ ಸಿಗ್ನೇಚರ್ ಸ್ಟೈಲ್ನಲ್ಲಿ ವಿನ್ಯಾಸಗೊಳಿಸಲಾಗಿದೆ. ಸ್ಪ್ಲಿಟ್ ಎಲ್ಇಡಿ ಹೆಡ್ಲೈಟ್ಗಳನ್ನು ಈ ಕಾರ್ ಹೊಂದಿದೆ. ಡಿಸೈನ್ನಲ್ಲಿ ಹೊಸತನ ಕಂಡರು ಕೂಡ ಸ್ಕೋಡಾದ ಕುಷಕ್ ಮಾಡೆಲ್ನ ವರ್ಷನ್ನ್ನೇ ಇ ಕಾರ್ ಹೊಂದಿದೆ. ಸದ್ಯ ಈ ಒಂದು ಕಾರ್ನ್ನು ಆರಂಭದಲ್ಲಿ ಒಲಿವಾ ಗೋಲ್ಡ್ ಕಲರ್ನೊಂದಿಗೆ ಡೆಬ್ಯು ಮಾಡಲಾಗುತ್ತದೆ.
ಇದನ್ನೂ ಓದಿ:ಹಳೇ ಫೋನ್ ಮಾರಾಟ ಮಾಡ್ತಿದ್ದೀರಾ? ಕ್ಷಣದಲ್ಲೇ ನಿಮ್ಮ ಅಕೌಂಟ್ ಖಾಲಿ ಆಗುತ್ತೆ ಹುಷಾರ್..!
ಸ್ಕೋಡಾ MQB-AO-IN ಪ್ಲಾಟಫಾರ್ಮ್ನಲ್ಲಿ ಈ ಕೈಲಾಕ್ ಸಿದ್ಧಗೊಂಡಿದ್ದು . ಕಾರ್ನ ಒಳಾಂಗಣ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 10.0 ಇಂಚ್ನ ಆ್ಯಪಲ್ನ ಮತ್ತು ಆಂಡ್ರಾಯ್ಡ್ನ ಟಚ್ಸ್ಕ್ರೀನ್ ಇದೆ. ಡಿಜಿಟಲ್ ಇನ್ಸ್ಟ್ರೈಮೆಂಟ್ ಕ್ಲಸ್ಟರ್ ಹಿಂದಿರುವ ಕೈಲಾಕ್. ರಿಯರ್ ಎಸಿ ವೆಂಟ್ಸ್ ಕೂಡ ಹೊಂದಿದೆ. ಸದ್ಯ ಇಂಡಿಯನ್ ಮಾರುಕಟ್ಟೆಯಲ್ಲಿ ಬಂದಿರುವ ಕಾರುಗಳು ಹೊಂದಿರುವಂತಹ ಸಿಂಗಲ್ ಪಾನ್ ಸನ್ರೂಫ್ ಹಾಗೂ ಕೀಲೆಸ್ ಎಂಟ್ರಿ, ವೈರ್ಲೆಸ್ ಫೋನ್ ಚಾರ್ಜಿಂಗ್ ವ್ಯವಸ್ಥೆ ಸಿಕ್ಸ್ ಸ್ಪೀಕರ್ ಇರುವ ಕ್ಯಾಂಟೋನ್ ಸಿಸ್ಟಮ್ಗಳನ್ನು ಕೂಡ ಹೊಂದಿದೆ
ಇದನ್ನೂ ಓದಿ: ಅಂಬಾನಿ, ನಾರಾಯಣಮೂರ್ತಿ ಮಾತು ನಂಬಬೇಡಿ.. ಬೆಂಗಳೂರಿಗರಿಗೆ ₹95 ಲಕ್ಷ ಪಂಗನಾಮ; ಆಗಿದ್ದೇನು?
ಸುರಕ್ಷತೆಯ ವಿಚಾರದಲ್ಲಿ ಇಲ್ಲಿ ಒಟ್ಟು ಆರು ಏರ್ಬ್ಯಾಗ್ಗಳನ್ನು ನೀಡಲಾಗಿದೆ. ಇನ್ನು ಕಾರ್ನಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗು ಸಾಕಾಗುವಂತೆ ಥ್ರೀಪಾಯಿಂಟ್ ಸೀಟ್ಬೆಲ್ಟ್ನ ವ್ಯವಸ್ಥೆಯೂ ಇದೆ. ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರ್ ಕೇವಲ ಹತ್ತು ಸೆಕೆಂಡ್ಗಳಲ್ಲಿ ಸೊನ್ನೆಯಿಂದ 100 ಗಂಟೆಗೆ ನೂರು ಕಿಲೋ ಮೀಟರ್ ವೇಗ ಪಡೆದುಕೊಳ್ಳುವ ತಾಕತ್ತು ಇದೆ. ಮುಂದಿನ ಎರಡು ವರ್ಷಗಳಲ್ಲಿ 1 ಲಕ್ಷ ಯುನಿಟ್ಗಳನ್ನ ಸೇಲ್ ಮಾಡುವ ಗುರಿಯನ್ನು ಸ್ಕೋಡಾ ಕಂಪನಿ ಇಟ್ಟುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ